ಸಂಕ್ರಾಂತಿ - ಸುಗ್ಗಿಯ ಹಿಗ್ಗು

ಸಂಕ್ರಾಂತಿ - ಸುಗ್ಗಿಯ ಹಿಗ್ಗು

ಕವನ

ಸಂಕ್ರಾಂತಿ ಹಬ್ಬವು ಬಂದೈತೆ

ಸುಗ್ಗಿಯ ಸಂಭ್ರಮ ತಂದೈತೆ

ಜೀವ ಸಂಕುಲಕೆ ಹೊಸತನವು

ನಾಡಿನ ಜನಕ್ಕೆಲ್ಲಾ ಸಂಭ್ರಮವು.

 

ಸಾಲಿನ ಬೆಳೆಯು ಅಂಗಳದಲ್ಲಿ

ರಾಶಿಯ ಗೋಪುರ ಚೆಂದದಲಿ

ಸುಗ್ಗಿಯ ಹಾಡನ್ನು ಹಾಡಿಪಾಡುತಲಿ

ನಲಿಯುತ್ತಾ ನಾವೆಲ್ಲಾ ಕುಣಿಯುತಲಿ.

 

ಎಳ್ಳು, ಬೆಲ್ಲದ ಸಂಕ್ರಾಂತಿ ಹಬ್ಬವು

ಬೋರೆ,ಕಬ್ಬಿನ ರಾಶಿಯ ದಿಬ್ಬವು

ಕೊರೆವ ಚಳಿಗೆ ಇಹುದಿದು ಮದ್ದು

ಸಂತಸದಿ ನಲಿಯೋಣ ನಾವೆಲ್ಲಾ ಮೆದ್ದು.

 

ಚೆಂದದ ಉಡುಗೆಯಲಿ ಚೆಲ್ವ ಚಿಣ್ಣರು

ಎಳ್ಳು, ಬೆಲ್ಲವ ಹಂಚುತ್ತ ಸಾಗುವರು

ತನುವಿನ ಬಲಕೆ ಪಂಚ ಬೆಳಸಿಯ ಬಳಕೆ

ತುಂಬುವುದು ಚೈತನ್ಯ ನಿತ್ಯವು ಮನಕೆ.

 

ಸೃಷ್ಟಿಯ ಕೊಡುಗೆಯಿದು ಕಾಲಕಾಲಕ್ಕೆ

ಹಣ್ಣು, ತರಕಾರಿ, ಬೆಳಸಿಯು ಜೀವಕ್ಕೆ

ಅರಿತು ಬಾಳೋಣ ಸೃಷ್ಟಿಯ ನಿಯಮದಲಿ

ಪ್ರೀತಿ, ಸ್ನೇಹವ ಬೆಸೆಯೋಣ ನಾವಿಲ್ಲಿ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ.

ಚಿತ್ರ್