ಸಂಗಮದ ಸಂಭ್ರಮ
ಕವನ
ಸೊಳ್ಳೆಗಳು ಕಾಡಿದರು ಕೆರೆಯುವುದ ಮರೆತಿರುವೆ
ಸೊಣಗಗಳು ಬೊಗಳಿದರು ಜಗ್ಗದೇ ಕುಳಿತಿರುವೆ
ಸೊಗಸಾದ ಶಬ್ದಗಳ ಹುಡುಕ್ಯಾಡಿ ಬರೆದಿರುವೆ
ಸೊಂಪಾಗಿ ಸೊಗಯಿಸೊ ಕನಸುಗಳ ಕಂಡಿರುವೆ
ಸಂಪದಕೆ ಸ್ವರವಾಗಿ ಸೇರಬಯಸುವೆನಿಂದು
ಸಮಯಸಿಕ್ಕಾಗೆಲ್ಲ ಸಂಗಮಿಸುವೆನು ಬಂದು
ಸರಿತಪ್ಪುಗಳ ಅಳೆದು ಸಂಭ್ರಮಿಸಿರೀ ನಿಂದು
ಸಂಪದದೊಳಿಹ ಸಕಲ ಕವಿಶ್ರೇಷ್ಥರೂ ಬಂದು
- ತುಂಟ ಶೀನ