ಸಂತತಿ

ಸಂತತಿ

ಬರಹ

ನನ್ನ ಅಜ್ಜಿಯರು ಸದೃಡವಾಗಿದ್ದರು................
ಹೊಲದಲ್ಲಿ ಉಳುತ್ತಾ ಗೇಯುತ್ತಾ ಮೈ ಬಗ್ಗಿಸಿ ದುಡಿದರು
ಉತ್ತುತ್ತಾ ಬಿತ್ತುತ್ತಾ ಹೊಲದ ತುಂಬೆಲ್ಲಾ ಓಡಾಡಿದರು
ನೆಲವನ್ನು ಮೀಟಿ ಹೊನ್ನ ಬೆಳೆಯನ್ನು ಬೆಳೆದರು
ಗಟ್ಟಿಮುಟ್ಟಾಗಿದ್ದರು ಖುಶಿಯಾಗಿದ್ದರು ಹಾಡ ಹಾಡಿದರು.

ನನ್ನ ಅಜ್ಜಿಯರು ನನ್ನ ನೆನಪಲ್ಲಿ ಸದಾ ಹಸಿರಾಗಿರುತ್ತಾರೆ
ತಮ್ಮ ಸಾಬೂನು, ಈರುಳ್ಳಿ, ಹಸಿಮಣ್ಣಿನ ಮೈ ವಾಸನೆಯೊಂದಿಗೆ
ಬೇಗಬೇಗನೆ ತಿರುಗಿಸುವ ತಮ್ಮ ಕೆಲಸದ ಕೈಗಳೊಂದಿಗೆ
ನನ್ನ ಅಜ್ಜಿಯರು ಪ್ರೀತಿಯನ್ನು ಉಣ್ಣುತ್ತಾರೆ ಉಣಿಸುತ್ತಾರೆ
ನಗುತ್ತಾರೆ ನಗಿಸುತ್ತಾರೆ ಗೆಲ್ಲುತ್ತಾರೆ ಗೆಲ್ಲಿಸುತ್ತಾರೆ
ಹಿತವಾಗಿ ಮಾತನಾಡುತ್ತಾ ತೋಳುಗಳಲ್ಲಿ ತುಂಬಿಕೊಳ್ಳುತ್ತಾರೆ.
ನನ್ನ ಅಜ್ಜಿಯರು ಸದೃಡವಾಗಿದ್ದರು...............
ಆದರೆ ನಾನೇಕೆ ಅವರಂತಿಲ್ಲ?

ಇಂಗ್ಲೀಷ ಮೂಲ: ಮಾರ್ಗರೇಟ್ ವಾಕರ್
ಕನ್ನಡಕ್ಕೆ: ಉದಯ ಇಟಗಿ