ಸಂತಾ ಉವಾಚ

ಸಂತಾ ಉವಾಚ

ಮಿಸ್ಟೇಕು
ಎಲ್ಲಾ ಕಡೆ ಆಗುತ್ತೆ ಸ್ಪೆಲ್ಲಿಂಗ್ ಮಿಸ್ಟೇಕು
ಕ್ಯಾಲೆಂಡರಿನಲ್ಲಿ ಒಂದನ್ನು ಬಿಟ್ಟು;
ಒಮ್ಮೆಯಾದರೂ ಬರಬಾರದೇ
ವಾರದಲ್ಲೆರಡು ಸಂಡೇ.
-ಸಂತಾ
 
ದರ್ಪಣ
ಮಾತನಾಡುವಂತಿದ್ದರೆ ದರ್ಪಣ
ಇಷ್ಟೊತ್ತಿಗೆ ಹೊರಬೀಳುತ್ತಿತ್ತು
ಎಷ್ಟೋ ಜನರ ನಿಜವಾದ ಬಣ್ಣ
-ಸಂತಾ
 
ಪೆಗ್ಗು
ಯಾವಾಗೋ ಒಮ್ಮೆ ಮಾತ್ರ ನಮ್ಮದು ಪೆಗ್ಗು
ಒಂದೋ ಪ್ರತಿ ಮಾರ್ನಿಂಗು
ಇಲ್ಲಾ ಪ್ರತಿ ಈವನಿಂಗು
-ಸಂತಾ