ಸಂತೆ

ಸಂತೆ

ಕವನ

ಸಂತೆ


ಮೌನವಾಗಿ ಮಲಗಿರುವ ಸಂತೆಮಾಳಕ್ಕೆ


ಸಂತೆಯ ದಿನ ಅದೆಷ್ಟು  ಹೆಜ್ಜೆಗಳ ತುಳಿದಾಟ ಮಾತುಗಳ ಅಬ್ಬರ


ಮಾರುವವನದೆಂಟು ಮಾತು ಕೊಳ್ಳುವವನದೆಂಟೆಂಟು ಮಾತು


ಸರಕುಗಳ ಸಂತೆಯೋ ಮಾತುಗಳ ಸಂತೆಯೋ!


ಸಂತೆ ಮುಗಿದ ಹೊತ್ತು ಮತ್ತೆ ಸದ್ದೆಲ್ಲ ಮೌನಕ್ಕೆ ಶರಣು


ಮತ್ತೊಂದು ವಾರಕ್ಕೆ ಕಾಯುತ್ತಾ ಆಕಳಿಸುತ್ತಾ ಮಲಗುತ್ತದೆ ಮಾಳ.


ಈ ಬದುಕಿನ ಸಂತೆಯಲೂ ನಾವೆಲ್ಲ


ಮುಗಿಯದ ಕನಸುಗಳ ಆಸೆಗಳ ಸರಕು ಒಡ್ಡಿಕೊಂಡು ಕಾಯ್ದು...


ಅದೋ ಇದೋ ಆರಿಸುವ ತಾಕಲಾಟಗಳಲ್ಲಿ


ತಳವೊಡೆದ ದೋಣಿಯಲಿ ಪಯಣ.

Comments