ಸಂತ ಕಬೀರರ ದ್ವಿಪದಿಗಳು ೪-೬

ಸಂತ ಕಬೀರರ ದ್ವಿಪದಿಗಳು ೪-೬

 

 

 

लूट सके तो लूट ले, राम नाम की लूट ।

पाछे फिरे पछताओगे, प्राण जाहिं जब छूट ॥  ४ ॥

 

ಕೊಳ್ಳೆ ನೀನು ಹೊಡಿವೆಯಾದರೆ, ಹೊಡಿ ರಾಮನಾಮದ ಕೊಳ್ಳೆ,

ಬಳಿಕ ಬರಿದೇ ಪರಿತಪಿಸುವೆ, ಬರಲು ಪ್ರಾಣ ಬಿಡುವ ವೇಳೆ   || ೪ ||

 

~~~~~~~~~~~~~~~~~~~~~~

 

जहाँ दया तहाँ धर्म है, जहाँ लोभ तहाँ पाप ।

जहाँ क्रॊध तहाँ पाप है, जहाँ क्षमा तहाँ आप ॥ ५ ॥

 

ಎಲ್ಲಿ ದಯೆಯೊ ಅಲ್ಲಿ ಧರ್ಮವು, ಲೋಭವಿರುವಲ್ಲಿ ಪಾಪವು

ಎಲ್ಲಿ ಕ್ರೋಧ ಅಲ್ಲಿ ಪಾಪವು, ಕ್ಷಮೆಯಿರುವಲ್ಲಿ ದೀಪವು || ೫  ||

 

~~~~~~~~~~~~~~~~~~~~~~~

तिनका कबहुँ ना  निंदये, जो पाँव तले होय ।

कबहुँ उड़ आँखो पड़े, पीर घानेरी होय ॥ 

 

ಹುಲ್ಲನೆಂದೂ ನಿಂದಿಸದಿರು, ಪಾದದಡಿಗಿರುವುದೆಂದು |

ಮೇಲೆ ಹಾರಿ ಕಣ್ಣನೆಟ್ಟರೆ, ಪಾಡು ಹೇಳಲೇನೆಂದು || ೬  ||

 

~~~~~~~~~~~~~~~~~~~~~~~~ 

 

ಚಿತ್ರಕೃಪೆ: ಅಂರ್ತರ್ಜಾಲ

 

Comments