ಸಂಪಗಾವಿ ಗಝಲ್

ಸಂಪಗಾವಿ ಗಝಲ್

ಕವನ

ಅರಳಿದ ಸುಮವು ಉದುರುತ ಮಸಣವ ನೋಡಿತೇಕೆ ಹೇಳು

ಮರಳಿದ ಮನಸು ಅದರುತ ಹರುಷದಲಿ ಹಾಡಿತೇಕೆ ಹೇಳು

 

ಸಂಪಿಗೆ ಪರಿಮಳ ಸ್ವರಗಾನದ ಇಂಪಿಗೆ ಮನಸೋತಿದೆಯ

ಕಂಪಿನ ಸುಮಗಳು ಸಮಯಕೆ ಮುಂಚೆ  ಬಾಡಿತೇಕೆ ಹೇಳು

 

ಹೊರಿಸದ ಭಾರವು ದೇಹವ ಒಳಗಿಂದ ಮುದುಡುತಿದೆಯ

ಮರೆಸದ ನೆನಪುಗಳ ಮೂಟೆಗೆ ಮನವ ಕಾಡಿತೇಕೆ ಹೇಳು

 

ಸೊರಗಿದ ದೇಹಕೆ ನೋವಿನ ಸೂಜಿಗಳು ಮತ್ತೆ ಚುಚ್ಚುತಿವೆ

ಮರುಗಿದ ಮೋಹಕೆ ತನುವಿನ ಭಾವವು ಕೂಡಿತೇಕೆ ಹೇಳು

 

ಚೂಪಾದ ಚೂರಿಗಳ ಇರಿತವು ಎದೆಯ ಬಿರಿದು ನರಳಾಡಿದೆ

ಸೋಂಪಾದ ಬೆಳೆಯು ಈಶ್ವರನ ನೋಡುತ ನಕ್ಕಿತೇಕೆ ಹೇಳು

-ಈಶ್ವರ ಜಿ ಸಂಪಗಾವಿ

 

ಚಿತ್ರ್