ಸಂಪದಕ್ಕೆ ಸ್ವಾಗತ - ಪ್ರತಿಯೊಬ್ಬ ಕನ್ನಡಿಗನೂ ಬರೆಯಬೇಕು
ಮೊದಲನೆಯದಾಗಿ ಸಂಪದ ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿರುವ ಶ್ರೀಯುತ ಹರೀಶ್ ಪ್ರಸಾದ್ ನಾಡಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಮಾನ್ಯ ಅತಿಥಿ ಬಂಧುಗಳೆ, ಬೇರೆ ವೆಬ್ ತಾಣದಂತೆ ಇದನ್ನು ನೋಡಬೇಡಿ. ಇದರಲ್ಲಿ ನಾಡಿಗರ ಸಾಕಷ್ಟು ಪರಿಶ್ರಮವಿದೆ. ಕೇವಲ ಹಣಕ್ಕಾಗಿ ಮಾಡದೆ ಕನ್ನಡದ ಅಭಿವೃದ್ದಿಗೋಸ್ಕರ, ಶ್ರೇಯೋಭಿವೃದ್ದಿಗೆ ಮಾಡಿದ್ದಾರೆ. ಇದರಲ್ಲಿ ಯಾವುದೇ ಲಾಭವಿಲ್ಲ ಎಂದು ನಮಗೂ ಗೊತ್ತು ಹಾಗೇ ನಿಮಗೂ ಗೊತ್ತು. ಅವರ ಸೇವೆ ಅಭಿನಂನಾರ್ಹ.
ಸ್ನೇಹಿತರೆ ವಿವಿಧ ಪ್ರದೇಶಗಳಲ್ಲಿ ಇರುವ ಅತಿಥಿಗಳು ಇದರಲ್ಲಿ ಪಾಲ್ಗೊಳ್ಳಿ. ನಿಮ್ಮ ಊರುಗಳ, ಪ್ರದೇಶದ ಅನಿಸಿಕೆಯನ್ನು ಬರೆಯಿರಿ. ನಿಮ್ಮ ಸ್ನೇಹಿತರಿಗೂ ಇದನ್ನ ತಿಳಿಸಿ. ಇಲ್ಲಿ ನೂರಾರು ಜನರು ಬರೆಯಬೇಕು. ನೂರಾರು ವಿಷಯಗಳು ತಿಳಿಯಬೇಕು. ಸ್ನೇಹಿತರೆ ನಮ್ಮ ಇಷ್ಟ ಬಂದ ಲೇಖನ ಬರೆಯಲು ಹರಿಪ್ರಸಾದ್ ನಾಡಿಗರು ಅವಕಾಶ ಮಾಡಿಕೊಟ್ಟಿದ್ದಾರೆ. ದಿನ ನಿತ್ಯ ನಾನು ನನ್ನ ಸ್ನೇಹಿತರಿಗೆ ಇಲ್ಲಿ ಸದಸ್ಯರಾಗಲು ಹೇಳುತ್ತಿದ್ದೇನೆ. ಹೇಳುತ್ತಲೇ ಇರುತ್ತೇನೆ. ಕೇವಲ ನೋಡುವುದರಿಂದ ಮಾತ್ರವಲ್ಲದೆ ಬರೆಯುವ ಮೂಲಕ ಈ ತಾಣವನ್ನು ನಾವು ಬೆಳೆಸೋಣ. ಅದು ತಪ್ಪೋ ಸರಿಯೋ ನಾವೆಲ್ಲರೂ ಬರೆಯೋಣ, ನಿಮ್ಮ ಪ್ರದೇಶದಲ್ಲಿ ಆಗುವ ಘಟನೆಗಳನ್ನೇ ಬರೆಯಿರಿ. ಕೇವಲ ನೋಡಿ ಮುಂದಿನ ತಾಣಕ್ಕೆ ಹೋಗುವುದರಿಂದ ಕನ್ನಡ ಖಂಡಿತಾ ಬೆಳೆಯುವುದಿಲ್ಲ. ನೀವೂ ಭಾಗಿಯಾಗಿ. ಈಗಾಗಲೇ ಇಲ್ಲಿನ ಸ್ಥಳೀಯ ಪತ್ರಿಕೆಗಳಲ್ಲಿ ಇದರ ಬಗ್ಗೆ ಬರೆದಿದ್ದೇನೆ. ಸಂಪದದಲ್ಲಿರುವವರು ಕೂಡ ತಮ್ಮ ಸ್ನೇಹಿತರಿಗೆ ಸಂಪದದ ಬಗ್ಗೆ ಮಾಹಿತಿ ನೀಡುವ ಮೂಲಕ ಹೆಚ್ಚಿನ ಜನರನ್ನು ಸೇರಿಸಿ ಎನ್ನುವುದು ನನ್ನ ಆಸೆ.
ಪ್ರತಿಯೊಬ್ಬ ಕನ್ನಡಿಗನೂ ಸ್ಪಂದಿಸಲಿ. ಅವನ ಮನಸ್ಸಿಗೆ ಬಂದಿದ್ದು ಬರೆಯಲಿ. ಅದು ತಪ್ಪೋ ಸರಿಯೋ ಅದನ್ನು ಜಾಲ ನಿರ್ಧರಿಸುತ್ತದೆ.
ಸ್ನೇಹಿತರೆ ಇದೊಂದು ಆಂದೋಲನವಾಗಬೇಕು. ಹಲವಾರು ವಿಷಯಗಳು ನಮಗೆ ಗೊತ್ತೇ ಇಲ್ಲ. ಅತಿಥಿ ಬಾಂಧವರೆ ಬನ್ನಿ ಸಂಪದವನ್ನು ಬೆಳೆಸೋಣ. ಮತ್ತೊಮ್ಮೆ ಹರಿಪ್ರಸಾದ್ ನಾಡಿಗರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳುತ್ತಾ, ನೀವೆಲ್ಲಾ ಒಳ ಬರುತ್ತೀರಿ ಎಂದು ನಂಬಿರುತ್ತೇನೆ.
ಧನ್ಯವಾದಗಳು
ಸುರೇಶ್ ನಾಡಿಗ್