ಸಂಪದದಲ್ಲಿ ನಿಮ್ಮ ಲೇಖನ/ಬರಹ ಪ್ರಕಟಿಸುವ ಮುನ್ನ...

ಸಂಪದದಲ್ಲಿ ನಿಮ್ಮ ಲೇಖನ/ಬರಹ ಪ್ರಕಟಿಸುವ ಮುನ್ನ...

ಬರಹ

ಗೆಳೆಯರೆ, ಸಂಪದದಲ್ಲಿ ಬರೆಯುವಾಗ ಕೆಳಗಿನ ಕೆಲವು ಸೂಚನೆಗಳನ್ನು ಅವಶ್ಯವಾಗಿ ಗಮನದಲ್ಲಿಡಿ.
1. ಕನ್ನಡದಲ್ಲಿ ಬರೆಯಿರಿ - (ಯೂನಿಕೋಡ್ ಬಳಸಿ ಕನ್ನಡ ಲಿಪಿಯಲ್ಲಿ ಬರೆಯಿರಿ).
2. ಲೇಖನಗಳಲ್ಲಿ ಸಂವಹನ ಮತ್ತು ವ್ಯಾಕರಣ - ಇವನ್ನು ಗಂಭೀರವಾಗಿ ಪರಿಗಣಿಸಿ ಬರೆಯಿರಿ. ಶೀರ್ಷಿಕೆ ಚಿಕ್ಕದಾಗಿ, ಚೊಕ್ಕವಾಗಿ ಇರಬೇಕು.
3. ನಿಮ್ಮ ಬರಹಗಳಲ್ಲಿ ನಿಮ್ಮ ಖಚಿತ ಅಭಿಪ್ರಾಯವನ್ನು ಗಂಭೀರವಾಗಿ ತಿಳಿಸಿರಿ; ಯಾವುದೇ ರೀತಿಯ ನಿಂದನೆ ಇರಬಾರದು.
4. ಮೊಬೈಲ್ ಸಂಖ್ಯೆ, ಅಂಚೆ ವಿಳಾಸ ಇತ್ಯಾದಿ ಖಾಸಗಿ ಮಾಹಿತಿಗಳನ್ನು ಬರಹದೊಂದಿಗೆ ಹಾಕದಿರುವುದು ಉತ್ತಮ. ಅಂತರ್ಜಾಲ ತಾಣಗಳಲ್ಲಿ ಇವುಗಳನ್ನು ಪ್ರಕಟಿಸುವುದು ಕ್ಷೇಮವಲ್ಲ.
5. ಒಮ್ಮೆ ಪ್ರಕಟಗೊಂಡ ಲೇಖನ, ಸೇರಿಸಲ್ಪಟ್ಟ ಪ್ರೊಫೈಲ್ ಸಂಪದದ ಆರ್ಕೈವಿನಲ್ಲಿ ಶಾಶ್ವತವಾಗಿ ಶೇಖರಿಸಲ್ಪಡುತ್ತದೆ. ಕೆಲವು ಸೂಕ್ಷ್ಮ ಸನ್ನಿವೇಶಗಳನ್ನು ಹೊರತುಪಡಿಸಿ, ಬರಹವನ್ನು ಅಳಿಸಿಹಾಕಿ ಅಥವ ಪ್ರೊಫೈಲ್ ಅಳಿಸಿಹಾಕಿ ಎಂಬ ಕೋರಿಕೆಯನ್ನು ಪುರಸ್ಕರಿಸಲಾಗುವುದಿಲ್ಲ.
6. ಬರಹಗಳಲ್ಲಿ ಓದುಗರ ಗಮನ ಸೆಳೆಯಲೆಂದೇ ದೊಡ್ಡ ಅಕ್ಷರ ಅಥವಾ ದಪ್ಪ ಅಕ್ಷರ ಅಥವಾ ಬಣ್ಣದ ಅಕ್ಷರ ಬಳಸಕೂಡದು.
7. ರಾಜಕೀಯ, ಧಾರ್ಮಿಕ, ಜಾತಿ ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರಚೋದನಕಾರಿ ಅಥವಾ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಬಾರದು.
8. ಸಂಪದದಲ್ಲಿ ಸೇರಿಸಿದ ಪುಟ ಯಾವುದೇ ಹೊರಗಿನ ಬ್ಲಾಗಿನ ಅಥವ ಅಂತರ್ಜಾಲ ಪುಟದ ನಕಲು ಆಗಿರಕೂಡದು. ಬರಹ ನಿಮ್ಮದೇ ಆಗಿರಬೇಕು.
9. ಸಂಪದಕ್ಕೆ ಸೇರಿಸಿದ ಪುಟದಲ್ಲಿ ನಿಮ್ಮ ಸ್ವಂತದ ಬ್ಲಾಗಿನ ಲಿಂಕ್ ಅಥವ ಅಂತರ್ಜಾಲ ಪುಟದ ಲಿಂಕ್ ಹಾಕಕೂಡದು. ಇಂಥವುಗಳನ್ನು ಹಾಕಿಕೊಳ್ಳಲು ಪ್ರೊಫೈಲ್ ಪುಟ ಬಳಸಿ.
10. ಸಮುದಾಯದ ಅಭಿರುಚಿಗೆ ಕುಂದು ತರುವಂತಹ ಚಿತ್ರಗಳನ್ನು ಸದಸ್ಯರು ಬಳಸಕೂಡದು.
11. ಹೊರಗಿನಿಂದ ಸಂಪೂರ್ಣ ಲೇಖನಗಳನ್ನು (ಅದು ನಿಮ್ಮದಲ್ಲದಿದ್ದರೆ) ಕಾಪಿ/ಪೇಸ್ಟ್ ಮಾಡಿ ಸಂಪದದಲ್ಲಿ ಹಾಕುವಂತಿಲ್ಲ. ಲೇಖನ ಅಥವ ಪುಟದ ಆಯ್ದ ಭಾಗಗಳನ್ನು ಸರಿಯಾದ ಕ್ರೆಡಿಟ್ಸ್ ನೀಡಿ ಹಾಕಬಹುದು. ಆದರೆ ಕೃತಿಚೌರ್ಯವಾಗಕೂಡದು. ಬೇರೆಯವರು ತೆಗೆದ ಚಿತ್ರ ಅಥವಾ ಬೇರೆಯವರ ಕಂಟೆಂಟ್ ನಿಮ್ಮ ಬರಹದಲ್ಲಿ ಬಳಸಿಕೊಂಡರೆ ಮರೆಯದೆ ಅದಕ್ಕೆ ಕ್ರೆಡಿಟ್ಸ್ ಸೇರಿಸಿ. ಅಂತರ್ಜಾಲ ತಾಣವೊಂದರಿಂದ ತೆಗೆದುಕೊಂಡಿದ್ದರೆ ಸಾಧ್ಯವಾದಲ್ಲಿ ಅದಕ್ಕೆ ಒಂದು ಲಿಂಕ್ ಹಾಕಿ.

ಸದಸ್ಯರ ಐ ಡಿ/ಬಳಕೆಯ ಐಡಿ: 
ಸದಸ್ಯರ ಬಳಕೆಯ ಹೆಸರುಗಳು (user id) ಸಾಧ್ಯವಾದಷ್ಟೂ ಸ್ವಂತ ಹೆಸರು ಅಥವ ಇನಿಶಿಯಲ್ಸ್ ಆಗಿದ್ದಲ್ಲಿ ಒಳ್ಳೆಯದು. ಯೂಸರ್ ಐಡಿ ಗಳು ಅನ್ಯ ವ್ಯಕ್ತಿತ್ವವೊಂದನ್ನು ನಕಲು ಮಾಡಿದ್ದರೆ, ಅಂತಹ ಐಡಿಗಳನ್ನು ಬ್ಲಾಕ್ ಮಾಡಲಾಗುವುದು. ಸಂಪದ ಪ್ರೊಫೈಲಿನಲ್ಲಿ ಇರುವ ಮಾಹಿತಿಯನುಗುಣ ನಕಲು ಯೂಸರ್ ಐಡಿ ಎಂದು ಗುರುತುಮಾಡಲ್ಪಟ್ಟ ಸದಸ್ಯರ ಪ್ರೊಫೈಲುಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ಬ್ಲಾಕ್ ಮಾಡುವ ಹಕ್ಕು ಸಂಪದ ನಿರ್ವಾಹಕ ತಂಡಕ್ಕಿರುತ್ತದೆ. ಸದಸ್ಯರ ಚಿತ್ರ ಬಳಕೆ: ಸದಸ್ಯರ ಚಿತ್ರ ಸ್ವಂತದ ಭಾವಚಿತ್ರವಾಗಿದ್ದಲ್ಲಿ ಒಳ್ಳೆಯದು.