ಸಂಪದದಲ್ಲಿ ಹೊಸಪುಟಗಳು

ಸಂಪದದಲ್ಲಿ ಹೊಸಪುಟಗಳು

ಬರಹ


ಇತ್ತೀಚೆಗೆ ಯುವಗುಂಪು ಸಂಪದಕ್ಕೆ ಪದಾರ್ಪಣೆ ಮಾಡಿದೆ.ತುಂಬಾ ಒಳ್ಳೆಯ ಬೆಳವಣಿಗೆ.ಯೌವ್ವನದಲ್ಲಿನ ಸಹಜ ಆಕರ್ಷಣೆ ಅವರ ಬರಹದ ವಸ್ತು ವಾಗಿರುತ್ತೆ. ಅದಕ್ಕಾಗಿ  "ಹದಿಹರೆಯದವರಿಗಾಗಿ" ಒಂದು ಪ್ರತ್ಯೇಕ ಪುಟ ತೆರೆದರೆ ಉತ್ತಮ ವೆನ್ನುವುದು ನನ್ನ ಸಲಹೆ. ಅಲ್ಲದೆ ಈಗಿರುವ ಪುಟಗಳಲ್ಲಿ  ಲೇಖನಗಳು, ಬ್ಲಾಗ್ಸ್ ,ಚಿತ್ರಪುಟಗಳನ್ನು ಹೊರತುಪಡಿಸಿ ಇನ್ನುಳಿದ ಪುಟಗಳು ಅಷ್ಟು ಉಪಯೋಗ ವಾಗುತ್ತಿವೆಯೇ ನೋಡಿ. ನನ್ನ ಸಲಹೆ .....
೧. ಹದಿಹರೆಯದವರಿಗಾಗಿ
೨.ಮಕ್ಕಳಪುಟ
೩.ಅಧ್ಯಾತ್ಮ
೪.ನಮ್ಮ ಪರಂಪರೆ
೫.ಕವನಗಳು

೬. ಸಂಗೀತ,ಕಲೆ, ನೃತ್ಯ

ಹೀಗೆ ಪ್ರತ್ಯೇಕ ಪುಟಗಳಿದ್ದು ಮುಖ್ಯಪುಟದ ಮೇಲಂಚಿನಲ್ಲಿ ಈ ತಲೆಬರಹಗಳು ಗೋಚರಿಸಿದರೆ ಸಂಪದ ಇನ್ನೂ ಕಂಗೊಳಿಸ ಬಹುದು. ಯಾರಿಗೆ ಯಾವ ವಿಷಯ ಇಷ್ಟ ವಾಗುತ್ತದೋ ಆ ವಿಷಯವನ್ನು ಮುಖಪುಟದಲ್ಲಿನ ತಲೆ ಬರಹ ಕ್ಲಿಕ್ಕಿಸಿ ತೆರೆದುಕೊಂಡರೆ ಉತ್ತಮ. ಇನ್ನೂ ಬೇರೆ ಬೇರೆ ಸಿನೆಮಾ, ನಾಟಕ ,ಕ್ರೀಢೆ, ಇತ್ಯಾದಿ ಪುಟಗಳಿರಬಹುದು.ನನಗೆ ಅಧ್ಯಾತ್ಮದಲ್ಲಿ ಹೆಚ್ಚು ಒಲವು.ನಾನು ಅದನ್ನು ಹೆಚ್ಚು ಓದ ಬಹುದು. ಉಳಿದಿದ್ದನ್ನು ಸಮಯಾವಕಾಶದಲ್ಲಿ ನೋಡಿದರಾಯ್ತು. ಸಂಪದ ಮಿತ್ರರು ನಿಮ್ಮ ಸಲಹೆ ಕೊಡಿ. ಹರಿಯವರು ಸೂಕ್ತ ವ್ಯವಸ್ಥೆ ಮಾಡಿಕೊಡುತ್ತಾರೆಂದು ಆಶಿಸೋಣ.ಅರವಿಂದ್  ಈಗಾಗಲೇ ಪ್ರತಿಕ್ರಿಯಿಸಿದ್ದಾರೆ, ಯಾಕೆ ಶ್ರೀಧರ್,ನೀವೂ ನಮ್ಮೊಡನಿರಿ ಎಂದು.ನನ್ನ ಸಲಹೆಗೆ ಕಾರಣ ವಿದೆ. ಯುವಕರ ಅತಿ ಉತ್ಸಾಹ ಹಿರಿಯರಿಗೆ ಅನ್ಯಥಾಭಾವಿಸುವಂತಾಗ ಬಾರದು." ಸಂಪದ ಎಂದರೆ ಇಷ್ಟೇನಾ? ಎಂದು ಯಾರೂ ಹೇಳಬಾರದು. ಸಂಪದವೆಂದರೆ ಸಂಪತ್ಭರಿತವಾಗಿದೆ. ಅದು ಓದುಗರ ಅರಿವಿಗೆ ಬರಬೇಕು.ಅನೇಕ ಪ್ರಬುದ್ಧ ಲೇಖನಗಳು ಪ್ರಕಟವಾಗುತ್ತಿವೆ.ಯುವಕರು ಮನದಾಳದಿಂದಭಾವನೆಗಳನ್ನು ಹೊರಹಾಕುತ್ತಿದ್ದಾರೆ. ಎಷ್ಟು ಚೆನ್ನಾಗಿ ಯುವಕರಿಂದ ಕವನಗಳು ಮೂಡಿಬರುತ್ತಿವೆ ಯೆಂದರೆ ಒಬ್ಬರು ಬರೆದರೆ ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು ಕವನದ ಸಾಲು ಬರೆದು ಪ್ರತಿಕ್ರಿಯಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯ ಹಂತ. ಯುವಕರು ನಿಸ್ಸಂಕೋಚವಾಗಿ ಬರೆಯಲೆಂದೇ ಆಶಿಸುವೆ. ಸೋದರೀ ರೂಪ ಒಮ್ಮೆ ಬರೆದ ಕಥೆ ನನ್ನ ಬೆರಳನ್ನು ಬಾಯಿಯ ಮೇಲೆ ಇಡು ವಂತೆ ಮಾಡಿತ್ತು. ಕಥೆ ಕವನ ಬರೆಯುವಾಗ ತಾನೇ ಆ ಪಾತ್ರದಾರಿ ಎಂಬ ಭಾವನೆಯಲ್ಲಿ ಬರೆದಾಗ  ಅತ್ಯುತ್ತಮಕಥೆ, ಕವನ ಬರೆಯ ಬಲ್ಲರೆಂಬುದನ್ನು ಅನೇಕ ಯುವ ಬರಹಗಾರರು ಮೂಡಿಸುತ್ತಿದ್ದಾರೆ.ನಿಜವಾಗಿ ತುಂಬಾ ಸಂತೋಷವಾಗಿದೆ. ಸಂಪದ ಇವರಿಗೆಲ್ಲಾ ಒಂದು ವೇದಿಕೆಯಾಯಿತಲ್ಲಾ ,ಅದಕ್ಕಾಗಿ ಹರಿಪ್ರಸಾದರಿಗೆ ನನ್ನ ಮನದಾಳದ ಅಭಿನಂದನೆಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet