'ಸಂಪದ'ದ ಸದಸ್ಯರಿಂದ ಬರೆಯಲ್ಪಟ್ಟ ಪುಸ್ತಕಗಳು ಈಗ ಲಭ್ಯ...

'ಸಂಪದ'ದ ಸದಸ್ಯರಿಂದ ಬರೆಯಲ್ಪಟ್ಟ ಪುಸ್ತಕಗಳು ಈಗ ಲಭ್ಯ...

ಬರಹ

ಕೆಲವು ದಿನಗಳ ಹಿಂದೆ [:http://sampada.net/user/modmani|ಮಂಜುನಾಥ್] "ನಾನೊಂದು ಪುಸ್ತಕ ಬರೆದಿರುವೆ. ಎಲ್ಲಿ ಹಾಕಬಹುದು?" ಎಂದು ಕೇಳಿದರು. ಅದರ ಪರಿಣಾಮ [:http://sampada.net/books|ಸಂಪದ ಸದಸ್ಯರ ಪುಸ್ತಕಗಳ ಪುಟ] ಹಾಗೂ ಪಟ್ಟಿ.

ಸದ್ಯಕ್ಕೆ ಅಲ್ಲಿ ಲಭ್ಯವಿರುವ ಸಂಪೂರ್ಣ ಪುಸ್ತಕ ಮಂಜುನಾಥರ [:http://sampada.net/books/3222/Huckleberry_Finn|ಹಕಲ್ಬೆರಿ ಫಿನ್] ಅನುವಾದ. ಉಳಿದೆಲ್ಲ ಪುಸ್ತಕಗಳ ಪುಟಗಳನ್ನು ಇನ್ನೂ ಒಟ್ಟುಗೂಡಿಸಲಾಗುತ್ತಿದೆ.

ಮಂಜುನಾಥರ ಪುಸ್ತಕ ಓದಿ ಹೇಗಿದೆಯೆಂದು ಕಾಮೆಂಟ್ ಮೂಲಕ ಅವರಿಗೆ ತಿಳಿಸಿ. ಅವರು ಬಹಳ ಖುಷಿ ಪಡುವರು.

ಸಂಪದದಲ್ಲಿ ಕೆಲವು ಬದಲಾವಣೆಗಳನ್ನು ಹಮ್ಮಿಕೊಂಡಿರುವುದರಿಂದ ಮುಂಬರುವ ವಾರಗಳಲ್ಲಿ ಎಲ್ಲ ಸಂಪದ ಸದಸ್ಯರಿಗೂ ತಮ್ಮ ತಮ್ಮ ಪುಸ್ತಕಗಳನ್ನು ಸಂಪದದಲ್ಲಿ ಪ್ರಕಟಿಸವ ಸವಲತ್ತು ನೀಡಲಾಗುವುದು (ಈಗಿನಂತೆಯೇ ಪ್ರಕಟಿಸಬೇಕೆಂದಿದ್ದರೆ ನನಗೊಂದು ಸಂದೇಶ ಕಳುಹಿಸಿ).

ಹಾಗೆ ಪ್ರಕಟಿಸಿದ ಪುಸ್ತಕದ ಸ್ವತ್ತು ನಿಮ್ಮದೇ. ಪುಸ್ತಕದಲ್ಲಿರುವ ಬರಹಗಳ ಜವಾಬ್ದಾರಿಯೂ ನಿಮ್ಮದೆ. ಓದಲು ಮಾತ್ರ ಸಂಪದ ಸಮುದಾಯವಲ್ಲದೆ ಸಂಪದದ ಮೂಲಕ ಎಲ್ಲ ಅಂತರ್ಜಾಲದ ಓದುಗರಿಗೂ ಲಭ್ಯ.

[:http://sampada.net/contact|ಸಲಹೆ, ಸಮಸ್ಯೆಗಳನ್ನು] ಮರೆಯದೆ ಕಳುಹಿಸಿ. :-)