ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ.

ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ.

ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ. ಅದಕ್ಕಾಗಿ ಈ ಎರಡು ಸಾಲುಗಳು.

ಸಂಪದ ಒಂದು ವರ್ಗದ ಉತ್ತಮ ಲೇಖಕರ ಸೈಟಾಗಿದೆ. (ನನ್ನೊಬ್ಬನನ್ನು ಹೊರತು. ಏಕೆಂದರೆ ನಾನು ಅಷ್ಟು ಸೀರಿಯಸ್ ಆಗಿ ಬರೆಯಲು ಆಗಲಿಲ್ಲ. ಮೊದಲಿಗೆ ನನಗೆ ಇಂಟರ್ನೆಟ್ ಹೊಸದು. ಆಗ ಸಂಪದಲ್ಲಿ ಏನಾದರೂ ಬರಿ ಎಂದು ಸೂಚಿಸಿದವನು ನನ್ನ ಮಗ. ಒಮ್ಮೆ ನಾನು ಕ್ಲಿಕ್ಕಿಸಿದ ಒಂದು ಫೋಟೋ ಸಂಪದ ತಾಣದ ತೆರೆಯಮೇಲಿ ಮೂಡಿಬಂದ ದಿನ ನನ್ನ ಎಕ್ಸೈಟ್ ಮೆಂಟ್ ನೋಡಿ ಮನೆಯವರೆಲ್ಲಾ ನಕ್ಕಿದ್ದರು. ನಾನೆ ಬರೆದು ನನ್ನ ಚಿಕ್ಕ ಫೋಗಳೋ ಒಂದೆರಡು ಸಾಲಿನ ಬರವಣಿಗೆಗಳನ್ನು ನೋಡಿ ಸಮಾಧಾನಪಟ್ಟುಕೊಳ್ಳುತ್ತಿದ್ದೆ. 
ನಾನು ಮತ್ತು ನನ್ನ ಶ್ರೀಮತಿಯವರು ೨೦೦೮ ರಲ್ಲಿ ಅಮೆರಿಕಕ್ಕೆ ಭೇಟಿಕೊಟ್ಟೆವು. ನಂತರ ೨೦೧೨ ರಲ್ಲಿ ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಅಡ್ಡಾಡಿದ ಜಾಗಗಳ ಬಗ್ಗೆ ಬರೆದಿದ್ದೆ. ಅವು ನಿಜವಾಯಿಯೂ ಸ್ವಲ್ಪ ಜವಾಬ್ದಾರಿಯಿಂದ ಬರೆದ ಲೇಖನಗಳೆನ್ನಬಹುದು. ಕೆನಡಾದಲ್ಲಿ ನಯಾಗರ ಜಲಪಾತದ ಸುತ್ತಮುತ್ತ ಅಡ್ಡಾಡಿದ ಅನುಭವ ಚೆನ್ನಾಗಿತ್ತು. 
ಅಮೆರಿಕದಲ್ಲಿ ಫುಲ್ಟನ್ ಎಂಬ ಹಳ್ಳಿಯಲ್ಲಿನ ವೆಸ್ಟ್ ಮಿನ್ಸ್ಟರ್ ಕಾಲೇಜಿನ ಪರಿಸರದಲ್ಲಿ ಸರ್ ವಿನ್ ಸ್ಟನ್ ಚಚಿಲ್ಲರ ಸ್ಮಾರಕಭವನದ ಬಗ್ಗೆ ಬರೆದ ಲೇಖನ ಚೆನ್ನಾಗಿದೆಯೆಂದು ಗೆಳೆಯರು ಹೇಳಿದ್ದು ಜ್ಞಾಪಕ. ವಿನ್ ಸ್ಟನ್ ರ ಮೊಮ್ಮಗಳು ಏಡ್ವಿನಾ ಎಂಬಾಕೆ ಅಲ್ಲಿ ಬ್ರೇಕ್ ಥ್ರ್ಯೂ ಎಂಬ ಸ್ಮಾರಕವನ್ನು ಮಾಡಿದ್ದಾರೆ.ಇದು ಬರ್ಲಿನ್ ಗೋಡೆಯ ಬಗ್ಗೆ ನೆನಪಿನ ಕಾಣಿಕೆ. ಅದರ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಂಡು ಧನ್ಯರಾದೆವೆಂಬ ಭಾವನೆಪಡೆದ ಲೇಖನ ಚೆನ್ನಾಗಿತ್ತು. ಆದರೆ ಅದು ಹಳೆಯ ಸಂಪದಲ್ಲಿ ಇತ್ತು. ಈಗ ಅದು ಕಾಣೆಯಾಗಿದೆ.

ನಮಸ್ಕಾರ.

ವೆಂಕಟೇಶ್,
ಮುಂಬಯಿ

Comments

Submitted by hpn Sun, 11/17/2019 - 22:32

ವೆಂಕಟೇಶರೆ, ಕಳೆದ ತಿಂಗಳು ಸಂಪದವನ್ನು ಅಪ್ಗ್ರೇಡ್ ಮಾಡಲಾಯಿತು. ಹಾಗೆ ಮಾಡುವಾಗ ಲೇಖನಗಳಿಗೆ ಇರುವ URL shortcuts, ಅಂದರೆ ಕನ್ನಡದಲ್ಲಿಯೇ ಇರುವ URLಗಳು ಸರಿಯಾಗಿ ಇಂಪೋರ್ಟ್ ಆಗಿಲ್ಲ. ಹೀಗಾಗಿ ಹಲವು ಲೇಖನಗಳು ಮುಂಚಿನ URLಗಳಲ್ಲಿ ದೊರಕುತ್ತಿಲ್ಲ. 

ಲೇಖನಗಳು ಕಾಣೆಯಾಗಿಲ್ಲ. ಸಂಪದದಲ್ಲಿಯೇ ಇವೆ. 

ಮುಂಚಿನಂತೆ URLಗಳನ್ನು ರೆಸ್ಟೋರ್ ಮಾಡುವ ಕೆಲಸ ನಡೆದಿದೆ. ಸುಮಾರು ಹದಿನೈದು ವರ್ಷಗಳ ಕಂಟೆಂಟ್ ಇರುವುದರಿಂದ ಆ ಕೆಲಸ ನಿಧಾನವಾಗಿ ನಡೆದಿದೆ. 

Submitted by venkatesh Thu, 11/21/2019 - 07:36

ನಿಮ್ಮ ಕಷ್ಟದ ಅರಿವು ನನಗಿದೆ. ಪ್ರಯತ್ನಿಸಿ. ಪ್ರತಿವರ್ಷವೂ ಇಂಜಿನಿಯರ್ಸ್ ಡೇ ಸಮಯದಲ್ಲಿ ನಾನು ಬರೆದ ಸರ್.ಎಮ್.ವಿ ಅವರ ಜೊತೆಗಿನ ಒಂದು ಚಿಕ್ಕ ಪ್ರಸಂಗ ನನ್ನ ಜೀವನದ ಬಹುಮುಖ್ಯ ಸನ್ನಿವೇಶವೆಂದು ನನ್ನ ಅನಿಸಿಕೆ. ಅದೇನೂ ಮಹಾ ಎಂದು ಕಡೆಗಣಿಸುವಂತಿಲ್ಲ. ಎಂವಿ ಅವರ ನೂರುವರ್ಷದ ಸಮಾರಂಭದಲ್ಲಿ ಯೋಗಾಯೋಗದಿಂದ ಅವರ ಹತ್ತಿರ ತೀರ ಹತ್ತಿರ ನಿಂತು ಅವರನ್ನು ಕುರ್ಚಿಯಲ್ಲಿ ಕರೆದೊಯ್ದು ಲಾಲ್ಬಾಗ್ ಉದ್ಯಾನವನದ ಗ್ಲಾಸ್ ಹೌಸ್ ನ ವೇದಿಕೆಯ ಮೇಲೆ ಕೂಡಿಸುವ ಮಹೋನ್ನತ ಅವಕಾಶ ಹೇಗೋ ನನ್ನ ಪೂರ್ವಜನ್ಮದ ಪುಣ್ಯವಶಾತ್ ದೊರಕಿತ್ತು.(ನಾವು ೩ ಜನ ವಿದ್ಯಾರ್ಥಿಗಳಿದ್ದೆವು) ಅದರ ಬಗ್ಗೆ ತುಂಬಾ ಪ್ರೀತಿಯಿಂದ ಒಂದು ಲೇಖನ ನಿಮ್ಮ/ನಮ್ಮ ಸಂಪದದಲ್ಲಿ ಬರೆದಿದ್ದೆ. ಅದು ಕಾಣೆಯಾಗಿರುವುದು ನನ್ನ ಮನಸ್ಸಿಗೆ ತೀವ್ರವಾದ ಆಘಾತವಾಗಿರುವಂತಿದೆ.

Submitted by venkatesh Thu, 12/12/2019 - 18:42

ಹರಿಯವರೇ, 

ಕನ್ನಡದಲ್ಲಿ ಬಹಳ ಹಿಂದೆಯೇ ನೀವೊಬ್ಬರೇ ಒಂದು ಕನ್ನಡ ತಾಣವನ್ನು ನಿರ್ಮಿಸಿ ನಮಗೆ ಪ್ರೋತ್ಸಾಹಿಸಿದ ಹಿರಿಮೆ ನಿಮ್ಮದು. ಅದು ನೋಡಲು ಸುಲಭ ಏನು ಮಾಹಾ ಅಂತ ಕೆಲವರು ಹೇಳಬಹುದು. ಆದರೆ ನನಗೆ ಅದರ ಹಿರಿಮೆ ಗರಿಮೆಗಳ ಬಗ್ಗೆ ಗೊತ್ತು ಎಲ್ಲಕ್ಕಿಂತ ಮಿಗಿಲಾಗಿ ನಿಮ್ಮ ಆಶಯಗಳು ಬಹಳ ಮುದಕೊಡುವಂಥಹವು. ಪ್ರಯತ್ನಿಸಿ. ಕೆಲವು ನನ್ನ ಒಳ್ಳೆಯ ಲೇಖನಗಳೂ ಇವೆ. ಅವನ್ನು ನಾನು ವಿದೇಶಕ್ಕೆ ಹೋದಾಗ ಬರೆದಿದ್ದರಿಂದ ಅವುಗಳ ಬಗ್ಗೆ ಏನೋ ಒಲವು ನನಗೆ ಒಳ್ಳೆಯದಾಗಲಿ. ವಂದನೆಗಳು.

Submitted by venkatesh Sat, 02/29/2020 - 18:37

ಹಾ ಇನ್ನೊಂದು ಹೃದಯ ವಿದ್ರಾಯಕವಾದ ಲೇಖನ. ಇದೆಯೇನೋ ನೋಡಿ. ಮುಂಬಯಿನ ತಾಜ್ ಹೋಟೆಲ್ ಸಿಎಸ್ಟಿ ರೈಲ್ವೆ ಸ್ಟೇಷನ್ ನಲ್ಲಿ ನಡೆಸಿದ ವಿಧ್ವಂಸಕ ಕೃತ್ಯದ ಬಳಿಕ ಅಜಮಲ್ ಹುಸೇನ್ ಹತ್ತಿರದಲ್ಲೇ ಇದ್ದ 'ಕಾಮಾ' ಎಂಬ ಹೆಸರಾಂತ ಹೆರಿಗೆ ಆಸ್ಪತ್ರೆಯ ಹತ್ತಿರ ಬಂದು ಅದರೊಳಗೆ ನುಗ್ಗಿ ಮಕ್ಕಳು ಪ್ರಸವಕ್ಕೆ ಸಿದ್ಧರಾದ ಹೆಂಗಸರ ಕೊಲೆಮಾಡಲು ಹವಣಿಸಿದ ಬಗ್ಗೆ ನಮ್ಮ ಮುಂಬಯಿನ 'ಇಂಗ್ಲೀಷ್ ಪತ್ರಿಕೆ ಮುಂಬಯಿ ಮಿರರ್' ನಲ್ಲಿ ಸುದ್ದಿಕೊಟ್ಟಿದ್ದರು. ಆದಿನವೇ ಆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಬ್ಬ ಮುಸ್ಲಿಮ್ ಮಹಿಳೆ ತನ್ನ ಮಗುವಿಗೆ ಜನ್ಮ ಕೊಟ್ಟಿದ್ದಳು. ಆಸ್ಪತ್ರೆಯ ಹೊರಗೆ ಅಜಮಲ್ ಕಸಬ್, ಗೋಲೀಬಾರ್ ಮಾಡುತ್ತಿದ್ದ ಸದ್ದು ಗಲಭೆಗಳಿದ್ದರೂಈ ಒಳಗಿನ ದಾದಿಯರು, ವಾರ್ಡ್ ಬಾಯಿಗಳು, ವೈದ್ಯರು, ಆ ಮುಸ್ಲಿಮ್ ಪರಿವಾರಕ್ಕೆ ಸಹಾಯಮಾಡಿ ಮಗುವಿನ ಹೆರಿಗೆಗೆ ನೆರೆವುನೀಡಿದ್ದರು. ಅದನ್ನು ನಾನು ಕನ್ನಡದಲ್ಲಿ ಬರೆದಿದ್ದೆ. ಆ ಲೇಖನ ಬೇಕಾಗಿದೆ ದಯಮಾಡಿ ನೋಡಿ ಇದ್ದರೆ ತಿಳಿಸಿ. 

Submitted by venkatesh Sun, 03/01/2020 - 08:37

ಬರ್ಲಿನ್ ಗೋಡೆಯ ತರಹದ ಗೋಡೆಯನ್ನು ಅಮೆರಿಕದಲ್ಲಿ ಪುಲ್ಟನ್ ಎಂಬ ಸ್ಥಾನದಲ್ಲಿ ಮರು-ನಿರ್ಮಿಸಿದ್ದರು. ನಾನು ಮತ್ತು ನನ್ನ ಹೆಂಡತಿ ಅಮೆರಿಕಕ್ಕೆ ಭೇಟಿಕೊಟ್ಟಾಗ ನನ್ನ ತಮ್ಮ ಡಾ. ಚಂದ್ರಶೇಖರ ಆಜಾಗಕ್ಕೆ ಕರೆದುಕೊಂಡು ಹೋಗಿದ್ದ. ಆ ಸುಂದರ ಕ್ಷಣಗಳನ್ನು ನಾನು ನನ್ನ ಮೆಚ್ಚಿನ ಸಂಪದ ತಾಣದಲ್ಲಿ ಹಂಚಿಕೊಂಡಿದ್ದೆ ಚಿತ್ರ ಸಮೇತ. ಅದು ಇದೆಯೇ ನೋಡಿ ತಿಳಿಸಿ.

Submitted by venkatesh Sat, 03/21/2020 - 19:12

ಸಂಪದ ತಾಣವನ್ನು ನಾನು ತವರುಮನೆಯ ತರಹ ಭಾವಿಸುತ್ತೇನೆ. ಇದರ ಕೆಲವು ತಕ್ಷಣ ಕಾಣುವ ಕೊರತೆಗಳನ್ನು ಹೇಳಲು ಇಚ್ಛಿಸುತ್ತೇನೆ.

೧. ತಪ್ಪು ಹುಡುಕುವ ಪ್ರಕ್ರಿಯೆ ಅನ್ನಿ ನನಗೆ ಬೇಸರವಿಲ್ಲ. ಯಾವುದಾದರೂ ಸಾಮಾಜಿಕ ತಾಣಕ್ಕೆ ಹೋದರೆ ಅದು ಸುಲಭವಾಗಿ ಎಟುಕುವಂತಿರಬೇಕು.
೨. ಪ್ರತಿಲಿಪಿ.ದೊತ್.ಚೊಮ್. ಈಗನೋಡಿ ಎಷ್ಟು ಸುಲಭ ಮತ್ತು ಲೀಲಜಾಲವಾಗಿ ಮುಂದುವರೆಯಬಹುದು.
೩. ಪ್ರತಿಬಾರಿಯೂ ಸಂಪದ ತಾಣದಲ್ಲಿ ಲಾಗ್ ಆನ್ ಆಗುವ ಪ್ರಕ್ರಿಯೆಯೇ ಅತಿ ಬೇಸರದ ಕೆಲಸ.
೪. ಕನ್ನಡ. ಅಂತನೋ ಒಂದು ತಾಣವನ್ನು ಮೊನ್ನೆ ಫೇಸ್ಬುಕ್ ನಲ್ಲಿ ನೋಡಿದೆ. 
೫. ನೀವು ಎಲ್ಲರಿಗಿಂತ ಭಿನ್ನವಾಗಿರಬೇಕು ಎಂದು ಆಶಿಸುತ್ತೀರಿ ಖಂಡಿತ ಅದು ಬೇಕು. ಆದರೆ ಅದು ಮೊದಲು ಬರಹಗಾರರನ್ನು ಆಕರ್ಶಿಸಬೇಕು. ಎಲ್ಲರೂ ಪಾಂಡಿತ್ಯಪೂರ್ಣ ಲೇಖಗಳನ್ನು ಕೊಡಲು ಸಮರ್ಥರಲ್ಲ. ಇದು ತಮ್ಮ ಗಮನಕ್ಕೆ ತರುತ್ತಿದ್ದೇನೆ.
೬. ಲೇಖನ ಬರೆಯಲೂ ಬೇಸರವಾಗುತ್ತದೆ. ಸುಲಭವಾಗಿಲ್ಲ. ಸ್ವಲ್ಪ ಮುಜುಗರವಾಗುತ್ತೆ. ಇದನ್ನು ಗೆಳೆಯ ನಾಡಿಗ್ ಅವರ ಗಮನಕ್ಕೆ ತರಲು ಇಷ್ಟಪಡುತ್ತೇನೆ.