ಸಂಪದ, ಈಗ ಮತ್ತಷ್ಟು ಹತ್ತಿರ

ಸಂಪದ, ಈಗ ಮತ್ತಷ್ಟು ಹತ್ತಿರ

ಬರಹ


ಸಂಪದ ಹತ್ತಾರು ಬರಹಗಳನ್ನ, ಚರ್ಚೆಯ ವಿಷಯಗಳನ್ನ, ಬ್ಲಾಗ್ ಪೋಸ್ಟ್ ಗಳನ್ನ ತನ್ನತ್ತ ಪ್ರತಿದಿನ ಸೆಳೆಯುತ್ತಾ ಬರ್ತಿದೆ. ಪ್ರತಿದಿನ ಸಂಪದ ವೆಬ್ಸೈಟ್ ನೊಡ್ಲಿಕ್ಕೆ ಸಾಧ್ಯ ಆಗ್ತಿಲ್ಲಾ ಅಂತ ಬೇಜಾರಿದೆಯೆ? ನಿಮಗಿಲ್ಲಿದೆ ಒಂದು ಸಣ್ಣ ಕಿವಿಮಾತು.

ಸಂಪದ ವೆಬ್ಸೈಟ್ನಲ್ಲಿನ ನಿಮ್ಮ ಅಕೌಂಟನ ಪ್ರೊಫೈಲ್ ಸ್ವಲ್ಪ ಬದಲಾವಣೆ ಮಾಡಿದರೆ, ಸಂಪದದಲ್ಲಿ ಪ್ರತಿದಿನ ಹೊಸತಾಗಿ ಸೇರುವ ಬರಹಗಳು, ಚರ್ಚೆಗಳು ಮುಂತಾದವುಗಳ ಒಂದು ಸಣ್ಣ ಪತ್ರ ನಿಮ್ಮ ಇ-ಮೈಲ್ ನ ಇನ್ಬಾಕ್ಸ್ (inbox) ನಲ್ಲಿ ಪ್ರತಿದಿನ ರವಾನೆಯಾತ್ತದೆ. ಹೇಗೆ ಅಂತ ನೋಡೊಣ್ವಾ?

ಮೊದಲು ಸಂಪದಗೆ ಲಾಗಿನ್ ಆಗಿ, ಪ್ರೊಫೈಲ್ ಕೊಂಡಿಯನ್ನ ಕ್ಲಿಕ್ಕಿಸಿ (ಚಿತ್ರ - ೧). ನಂತರ "Mail notification settings" (ಚಿತ್ರ - ೨)ಪುಟಕ್ಕೆ ಜಾರಿ.

ಚಿತ್ರ - ೧ (ಹಿರಿದಾಗಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ)
sampada notification 2
ಚಿತ್ರ - ೨ (ಹಿರಿದಾಗಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ)

ಇಲ್ಲಿ "Notify status" ಎನೇಬಲ್ ಮಾಡಿ, ನಿಮಗೆ ಯಾವ ರೀತಿಯ ಬದಲಾವಣೆಯ ಬಗ್ಗೆ ತಿಳಿಸಬೇಕು ಅನ್ನೊದನ್ನ ಸೂಚಿಸಿ, ನಿಮಗೆ ಸಂಪದದಲ್ಲಿ ಈಗಾಗಲೆ ನೆಡೆಯುತ್ತಿರುವ ಚರ್ಚೆಗಳ ಕಮೆಂಟುಗಳನ್ನೂ ಪಡೆಯಲು ಆಯ್ಕೆಯ ಅವಕಾಶವಿದೆ. ಇದಾದ ನಂತರ ನಿಮ್ಮ "ಆಯ್ಕೆಗಳನ್ನ ಉಳಿಸಿ". ಇದಿಷ್ಟೇ ನೀವು ಮಾಡ್ಬೇಕಾದದ್ದು. ಇನ್ಮುಂದೆ, ಪ್ರತಿದಿನ ನೀವು ಇ-ಮೈಲ್ ನೋಡ್ಬೇಕಾದಾಗ ಸಂಪದದಿಂದ ಬಂದ ಒಂದು ಪತ್ರವನ್ನ ಓದಿದರಾಯಿತು (ಉದಾಹರಣೆಗೆ ಚಿತ್ರ ೩ ನೋಡಿ).

mail sampada

ಚಿತ್ರ - 3 (ಹಿರಿದಾಗಿಸಲು ಚಿತ್ರದ ಮೇಲೆ ಕ್ಲಿಕ್ಕಿಸಿ)

ಸಂಪದದಲ್ಲಿ ಬರುವ ಯಾವುದೇ ಹೊಸ ವಿಷಯ ನಿಮ್ಮ ಕಣ್ಣಂಚಿನಲ್ಲಿ ಮರೆಯಾಗಿ ಹೊಗ್ಲಿಕ್ಕೆ ಸಾಧ್ಯವಿಲ್ಲ. ಇಷ್ಟ ಆಯ್ತಾ? ಇಂದಿನಿಂದಲೇ ಉಪಯೋಗಿಸ್ಲಿಕ್ಕೆ ಶುರು ಮಾಡಿ ಮತ್ತೆ.

ಇದೇ ರೀತಿ ಆರೆಸೆಸ್ಸೆ ಫೀಡ್ (RSS Feed or Really simple syndication Feed) ಕೂಡ ನಿಮಗೆ ಬಹು ಉಪಯುಕ್ತ. ಇದರ ಬಗ್ಗೆ ಮತ್ತೊಮ್ಮೆ ತಿಳಿಯುವ.