ಸಂಪದ *ಏನಲ್ಲ* - What Sampada is *not*

ಸಂಪದ *ಏನಲ್ಲ* - What Sampada is *not*

ಬರಹ

ಶೇಖರ್ ಪೂರ್ಣರವರು ತಮ್ಮ ಸಂಪಾದಕೀಯದಲ್ಲಿ ಸಂಪದವನ್ನು blogspotಗೆ ಹೋಲಿಸಿ 'ಸಂಪದದ ದೌರ್ಬಲ್ಯಗಳ' ಬಗ್ಗೆ ಬರೆದಿರುವುದು ನನಗೆ ಅಚ್ಚರಿ ತಂದಿತು.

ಕೆಲವು ವಿಚಾರಗಳು:
೧) ಸಂಪದವನ್ನು blogspotಗೆ ಹೋಲಿಸುವುದು ತೀರ ತಮಾಷೆಯ ಸಂಗತಿ, ಅಜ-ಗಜ ಹೋಲಿಕೆಯಂತೆ! ನೂರಾರು [w:Data center|Data center]ಗಳನ್ನಿಟ್ಟುಕೊಂಡು ನಡೆಸಲಾಗುವ blogspot ಎಲ್ಲಿ, ಇನ್ನೂ [w:Shared web hosting service|shared hostingನ] ಕೆಲವೇ ಕೆಲವು MB ಜಾಗದಲ್ಲಿ ಕೊಳೆಯುತ್ತಿರುವ ಸಂಪದ ಎಲ್ಲಿ!

೨) ಸಂಪದದಲ್ಲಿ Individualistic ಬ್ಲಾಗುಗಳಿಗೆ ಹೆಚ್ಚು ಒತ್ತು ನೀಡದೇ ಇರುವುದಕ್ಕೆ, ಭಿನ್ನವಾದ ಟೆಂಪ್ಲೇಟುಗಳನ್ನು ಹಾಕುವ ಸೌಲಭ್ಯ ಇಲ್ಲದೇ ಇರುವುದಕ್ಕೆ ಕಾರಣಗಳಿವೆ - ನಮಗೆ ಸದ್ಯದ ಪರಿಸ್ಥಿತಿಯಲ್ಲಿ blogspotನಷ್ಟು ಬ್ಲಾಗುಗಳನ್ನು ನೀಡುವುದು ಸಾಧ್ಯವೇ ಇಲ್ಲ. ಅದನ್ನು ಸಾಧ್ಯವಾಗಿಸಬೇಕೆಂದಲ್ಲಿ ನಮ್ಮದೇ ಆದ ಒಂದಷ್ಟು infrastructure ಆದರೂ ಇರಬೇಕು! ಕನಿಷ್ಠ ಪಕ್ಷ ಒಬ್ಬರು ಇಬ್ಬರಾದರೂ 'full-time' ಇದರ ಮೇಲೆ ಕೆಲಸ ನಿರ್ವಹಿಸುವಂತವರು ಇರಬೇಕು.

೩) ಕನ್ನಡದಲ್ಲಿ blogspotನಂತಹ ಒಂದು ಪ್ರಯತ್ನ 'ಸಾಧ್ಯವಾಗದು' ಎಂಬುದಿಲ್ಲ. ಆದರೆ ಸಂಪದ ಖಂಡಿತವಾಗಿ ಅಂತಹ ಒಂದು ಪ್ರಯತ್ನವಲ್ಲ!

ಸಂಪದ ಪ್ರಾರಂಭಿಸಿದ್ದಾಗ ಹೆಚ್ಚು ಕನ್ನಡ ಕಂಟೆಂಟ್ ಅಂತರ್ಜಾಲದಲ್ಲಿರಲಿಲ್ಲ. ಕನ್ನಡ ವಿಕಿಪೀಡಿಯ ಬಿಟ್ಟರೆ ಈಗಲೂ ಯೂನಿಕೋಡ್ ನಲ್ಲಿ ಹೆಚ್ಚು ಕಂಟೆಂಟ್ ಇರುವುದು ಸಂಪದದಲ್ಲೇ.
ಸಂಪದ ಪ್ರಾರಂಭವಾದ ನಂತರ ಕನ್ನಡದಲ್ಲಿ ಯೂನಿಕೋಡ್ ಬಳಸಿ ಮಾಹಿತಿ ಪೇರಿಸುವ ಹಲವು ಬ್ಲಾಗುಗಳು ಪ್ರಾರಂಭವಾದವು. ಈ ರೀತಿಯ ಬಳಕೆ ಹೆಚ್ಚಬೇಕೆಂದೇ ಪ್ರಾರಂಭವಾದದ್ದು ಸಂಪದ. ಸಂಪದ ಪ್ರಾರಂಭವಾಗಿ ಒಂದು ವರ್ಷವಾಗುತ್ತಿರುವ ಸಂದರ್ಭದಲ್ಲಿ ಇದು ಬಡಿದೆಬ್ಬಿಸಿದ ಚಟುವಟಿಕೆ ಸಂಪದದ ಸದಸ್ಯರೆಲ್ಲರಿಗೂ ಹೆಮ್ಮೆ ಮೂಡಿಸುವಂತ ವಿಷಯವೇ.

ತಾಂತ್ರಿಕತೆಯ ಬಗ್ಗೆ ನಾವು ನೋಡಿಕೊಳ್ಳುವೆವು... ಸಂಪದಕ್ಕೆ [:Donate|ನಿಮ್ಮೆಲ್ಲರ ಪ್ರೋತ್ಸಾಹ ನೀಡಿ]... ನಿಮ್ಮ ಸಹಾಯ, ಪ್ರೋತ್ಸಾಹದಿಂದ ಖಂಡಿತವಾಗಿ ಸಂಪದವನ್ನು ಇನ್ನಷ್ಟು ಚೆಂದಗೊಳಿಸಬಹುದು, ಬೃಹತ್ ಸಮುದಾಯವನ್ನಾಗಿ ಮಾಡಬಹುದು. ಸದ್ಯದ ಪರಿಸ್ಥಿತಿಯಲ್ಲಿ ಹೊಸ ಡೆಡಿಕೇಟೆಡ್ ಸರ್ವರ್ ಗೆ ಸಂಪದವನ್ನು ಸ್ಥಳಾಂತರಿಸುವವರೆಗೂ ಸಂಪದದಲ್ಲಿ ಏನೊಂದೂ ಹೊಸ ಫೀಚರ್ ಸೇರಿಸುವುದು ಸಾಧ್ಯವಿಲ್ಲ - ತಾನಿರುವ shared serverನಲ್ಲಿ ಈಗಾಗಲೇ ಸಾಕಷ್ಟು ಸಂಪನ್ಮೂಲಗಳನ್ನು ಸಂಪದವೇ ಬಳಸಿಕೊಂಡು ಅದರೊಂದಿಗುರುವ ಇತರ ತಾಣಗಳಿಗೂ ತೊಂದರೆಯಾಗುತ್ತಿದೆ.

ವಿ. ಸೂ: ಈ‌ ಬಾರಿ ಡೆಡಿಕೇಟೆಡ್ ಸರ್ವರ್ ಕೊಳ್ಳಲು [:Donate|ನಿಮ್ಮೆಲ್ಲರ ಸಹಾಯ ಬೇಕೇಬೇಕಾಗಿದೆ]. ಎಲ್ಲರೂ ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಕೋರುತ್ತೇನೆ. ಗಮನಿಸಿ:
೧) ದೇಣಿಗೆ ನೀಡಿದ ಪ್ರತಿಯೊಬ್ಬರಿಗೂ ಸಂಪದದಲ್ಲಿ ಒಂದೊಂದು e-mail id ನೀಡಲಾಗುವುದು. ಉದಾ: yourname@sampada.net.
೨) $20 ಕ್ಕೂ ಹೆಚ್ಚು ದೇಣಿಗೆ ನೀಡುವ ಸದಸ್ಯರಿಗೆ ತಮ್ಮದೇ ಆದ ಹೊಸ ಬ್ಲಾಗು ([:http://rujuvathu.sampada.net|ಅನಂತಮೂರ್ತಿಯವರ] ಹಾಗೂ [:http://ismail.sampada.net|ಇಸ್ಮಾಯಿಲ್ ರವರ] ಬ್ಲಾಗಿರುವಂತೆ) ನೀಡಲಾಾಗುವುದು* - ತಮಗೆ ಬೇಕಾದ ಥೀಮ್ ಬಳಸುವಂತಹ, ಸಂಪದದ ಎಲ್ಲ ಓದುಗರು ಸಂಪದದ ಐಡಿ ಬಳಸಿಯೇ ಪ್ರತಿಕ್ರಿಯೆ ಸೇರಿಸಲು ಸಾಧ್ಯವಾಗುವಂತಹ ಸವಲತ್ತು ಆ ಬ್ಲಾಗಿನಲ್ಲಿ ನಿಮಗೆ ಲಭ್ಯವಾಗುವುದು.

* - ಪ್ರತ್ಯೇಕ ಬ್ಲಾಗು ಬೇಕೆಂದು ದೇಣಿಗೆ ಕಳುಹಿಸುವ ಸಮಯದಲ್ಲಿ ತಿಳಿಸಿದವರಿಗೆ ಮಾತ್ರ.

ಮತ್ತೊಂದು ವಿಷಯ:
೪) ಸಂಪದದಲ್ಲಿ ಮಾಡಬೇಕಿರುವ ಸಾಕಷ್ಟು ಬದಲಾವಣೆಗಳು ಇನ್ನೂ ಪೂರ್ಣಗೊಳಿಸಲಾಗಿಲ್ಲ - ನಾನೊಬ್ಬನೇ ಇದರ ತಾಂತ್ರಿಕ ಕೆಲಸಗಳನ್ನು ನನ್ನ *ಬಿಡುವಿನ ಸಮಯದಲ್ಲಿ* ನಿರ್ವಹಿಸುತ್ತಿರುವುದರಿಂದ ಹೀಗೆ. ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡು ನಿರ್ವಹಿಸಲು ಆಸಕ್ತಿಯಿದ್ದವರು ಮುಂದೆ ಬಂದರೆ "ಏನು ಮಾಡಬೇಕಿರುವುದು" ಎಂಬುದರ ಜೊತೆ "ಹೇಗೆ ಮಾಡಬಹುದು" ಎಂಬುದನ್ನೂ ತಿಳಿಸಬಲ್ಲೆ.

- ಹೆಚ್ ಪಿ