ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

ಸಂಪದ ಬ್ಲಾಗ್ ನಿಂದ ಕರ್ನಾಟಕಕ್ಕೆ ಏನು ಉಪಯೋಗ?

ಬರಹ

ನಮಸ್ಕಾರ ಗೆಳೆಯರೇ,
ನಿನ್ನೆ ವಿಜಯ ಕರ್ನಾಟಕ ಪತ್ರಿಕೆಯ ಒಂದು ಅಂಕಣ ಓದುತ್ತಿದ್ದೆ, ಕನ್ನಡದಲ್ಲಿರುವ ಬ್ಲಾಗ್ ಗಳ ಬಗ್ಗೆ ಒಂದು ವರದಿ ಬಂದಿತ್ತು, ಕನ್ನಡದಲ್ಲಿರುವ ಬ್ಲಾಗ್ ಗಳ ಸ್ಥಿತಿ ಗತಿಯ ಬಗ್ಗೆ ಒಂದು ಸ್ಥೂಲ ಚಿತ್ರಣ ಅದರಲ್ಲಿ ಕೊಟ್ಟಿದ್ರು. ನಿಜಕ್ಕೂ ಸಂತೋಷ ಪಡಬೇಕಾದ ವಿಷಯ ಏನೆಂದರೆ ಕನ್ನಡದಲ್ಲಿ ಸುಮಾರು ೧೦೦೦ ಕ್ಕೂ ಹೆಚ್ಚು ಬ್ಲಾಗ್ ಗಳಿವೆ, ಸಂತೋಷ. ಹಾಗೇನೇ ಇನ್ನೊಂದು ವಿಷಯ ಅವರು ಹೇಳೋದು ಏನೆಂದರೆ productive ಅನ್ನುವಂತಹ ಕೆಲಸಗಳು ಬ್ಲಾಗ್ ಗಳಲ್ಲಿ ಬರ್ತಿಲ್ಲ ಅನ್ನುವ ದೂರು. ಕೇವಲ ಕವನ, ಕಥೆ, ಹರಟೆ ಹೀಗೆ ಎಲ್ಲ ತಮ್ಮ ಪರಿಮಿತಿಯೋಳಗಿರುವ ವಸ್ತುಗಳನ್ನೇ ತೆಗೆದುಕೊಂಡು ಅಲ್ಲಲ್ಲಿ ಚರ್ಚೆ ಆಗುತ್ತೆ ಅನ್ನೋದು.
ಇದು ಸರಿ ಅನ್ನಿಸೋಲ್ವ ನಿಮಗೆ?
ಒಂದು ಬ್ಲಾಗ್ ಒಬ್ಬ ವ್ಯಕ್ತಿ ಬರಿತಾನೆ ಅಂದ್ರೆ ಮತ್ತು ಜನ ಅದನ್ನ ಓದುತ್ತಾರೆ ಅಂದ್ರೆ ಇದರ ಅರ್ಥ ಅವನಲ್ಲಿ ಏನೋ stuff ಇರಬೇಕು ಅಂತ ಅರ್ಥ. ಆದ್ರೆ ಅದು ಕೇವಲ ಕಥೆಗಳನ್ನ, ಕವನಗಳನ್ನ ಬರೆಯೋದರಲ್ಲೇ ಖರ್ಚು ಮಾಡಿದ್ರೆ ನಮ್ಮ ಕರ್ನಾಟಕದ ಏಳಿಗೆಗೆ ಅವನ ಪಾತ್ರ ಏನು.
ಸರಿ ನಾನು ಕನ್ನಡ ಸಾಹಿತ್ಯ ಲೋಕದಲ್ಲಿ ನನ್ನ ಅಂಬೆಗಾಲು ಇಡ್ತಿದಿನಿ ಅದಕ್ಕೆ ಈ ಬ್ಲಾಗ್ ಒಂದು ವೇದಿಕೆ ಅಂತ ಹೇಳಬಹುದು. ಅದು ೧೦೦% ನಿಜ. ಆದ್ರೆ ಒಮ್ಮೆ ಎಲ್ಲ ಸಾಹಿತಿಗಳನ್ನ ಕೇಳಿ ನೋಡಿ ಅವರಲ್ಲಿರುವುದು ಅಪಾರ ಜ್ನ್ಯಾನ ಭಂಡಾರ ಅದರ ಜೊತೆಗೇನೆ ಒಂದು ದೇಶ ಮತ್ತು ರಾಜ್ಯ ಉಧ್ಧಾರ ಆಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಚಿಂತನೆ ಗಳು. ಕೇವಲ ನಾನು ಮತ್ತು ನನ್ನ ಸಾಹಿತ್ಯ ಅನ್ನೋನು ಬೆಲಿಯೋಕೆ ಸಾಧ್ಯಾನ ಯೋಚನೆ ಮಾಡಿ.
ನಿಮಗೆ ಒಂದು ಉದಾಹರಣೆ ಕೊಡ್ತೀನಿ:
ನಮ್ಮ ಕರ್ನಾಟಕದಲ್ಲಿ ಯಾವುದೇ ಘಟನೆ ನಡೆಯಿತು ಅಂತ ಅಂದ್ರೆ ನಮ್ಮ media ಟಾರ್ಗೆಟ್ ಮಾಡೋದು ಒಂದು ರಾಜಕಾರಣಿಗಳನ್ನ ಮತ್ತು ಸಾಹಿತಿಗಳನ್ನ. ಕಾರಣ ಅವರಲ್ಲಿರುವ ಸಾಮಾಜಿಕ ಕಳಕಳಿ. ಇದು ನಮ್ಮ ಯುವ ಕವಿ ಮತ್ತು ಕವಯತ್ರಿಯರಲ್ಲು ಇರಬೇಕು ಅಂತ ನಿಮಗೆ ಅನ್ನಿಸೋಲ್ವ, ನಮ್ಮದೇ ಉದಾಹರಣೆ ತೊಗೊಳ್ಳೋಣ ನಾವು ಸಾಹಿತ್ಯ ಓದ್ತಿವಿ, ಬರಿತಿವಿ ಕೂಡ. ಆದ್ರೆ ಅಷ್ಟೇನಾ ನಮ್ಮ ಹೊಣೆಗಾರಿಕೆ, ನಮ್ಮ ನಾಡಿಗೆ ನಾವು ಇಟ್ಟು ಕೊಳ್ಳಬೇಕಾದ commitment?
ಇವತ್ತು ಒಂದು ಅನ್ಯಾಯ ನಡೀತಿದೆ ಅಂದ್ರೆ ನಮ್ಮಲ್ಲಿ ಎಷ್ಟು ಜನ ಅದನ್ನ ಪ್ರತಿಭಟಿಸೋಕೆ ತಯಾರಗ್ತಾರೆ.
ಹಾಗೇನೇ ಬ್ಲಾಗ್ಗ್ ಗಳ ವಿಷಯಕ್ಕೆ ಬರೋಣ, ಇವತ್ತು ನಾನು ಓದೋದು ಕೆಲವೇ ಬ್ಲಾಗ್ ಗಳನ್ನ. ಅದರಲ್ಲಿ ಸಂಪದ ಕೂಡ ಒಂದು. ನಿಜಕ್ಕೂ ಸಂಪದ ಸಂಪತ್ಭರಿತವಾಗಿದೆ. ಇಲ್ಲಿ ವೈವಿಧ್ಯಮಯ ವಿಷಯಗಳು ಕಾಣಸಿಗುತ್ತಿವೆ, ಸಂತೋಷ. ಇಲ್ಲಿ ನಿಜಕ್ಕೂ ಕೆಲವು ಒಳ್ಳೆಯ ಸಾಹಿತ್ಯ ಬರೆಯುವವರಿದ್ದಾರೆ. ಆದ್ರೆ ಕರ್ನಾಟಕ, ಕನ್ನಡಕ್ಕೆ ಸಂಭಂದಿಸಿದಂತೆ ಇಲ್ಲಿ ಯಾವತ್ತು ಒಂದು ಬಿಸಿಯಾದ ಅಥವಾ ಸತ್ವಯುತ ಚರ್ಚೆಯನ್ನು ನಾನು ಸಂಪದ ಓದಲು ಶುರು ಮಾಡಿದಾಗಿನಿಂದಲೂ ನಡೆದಿಲ್ಲ.
ನನ್ನ ಅನಿಸಿಕೆ ಪ್ರಕಾರ ಸಂಪದದಲ್ಲಿ ಸುಮಾರು ೩೦೦೦ ಕ್ಕೂ ಮಿಕ್ಕಿದ ಜನರು ಇಲ್ಲಿ ಇದ್ದರೆ. ಇಷ್ಟು ಜನ ಇದ್ರೂ ನಮ್ಮ ನಾಡು ಕಟ್ಟಲು ಸಹಾಯಕ ವಾಗುವಂತಹ ಯಾವುದೇ ನಡೆಗಳಿಲ್ಲ ಅಂದ್ರೆ ಮನಸ್ಸಿಗೆ ಬೇಜಾರಾಗುತ್ತೆ. ಇರ್ಲಿ ನಾವೇನು ಇಲ್ಲಿರುವವರೆಲ್ಲ ಪಂಡಿತರಾಗಿರಬೇಕಿಲ್ಲ ಒಂದು ವಿಷಯ ಮತ್ತು ಅದರ ಬಗ್ಗೆ ಚರ್ಚಿಸಲು ಸಾಮಾನ್ಯ ಜ್ಞಾನ ಇದ್ರೆ ಸಾಕು ಅಂದೊಕೊತಿನಿ.
ನಿಜಕ್ಕೂ ಒಳ್ಳೆಯ ಬರಹಗಾರರು ಇಲ್ಲಿ ನಮಗೆ ಕಾಣ ಸಿಗುತ್ತಾರೆ ಆದ್ರೆ ಅದನ್ನ ತಮ್ಮ ಶಕ್ತಿಯನ್ನು ಚಿಂತನೆ ಮತ್ತು ಜಿಜ್ಞಾಸೆಗೆ ಹಚ್ಚಿದರೆ ಇನ್ನು ಹೆಚ್ಚಿನ ಒಳ್ಳೆಯ ವಿಷಯಗಳು ಸಿಗಬಹುದು. ನಾಡು ಕಟ್ಟಲು ಸಹಾಯಕವಾಗಬಹುದು.
ನೀವೆನಂತಿರಾ???????? :-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet