ಸಂಪದ ಸದಸ್ಯರ ಕೂಟ ಮತ್ತು "ಮುಖಾಮುಖಿ" ಚಿತ್ರದ ಪ್ರದರ್ಶನ
ಸಂಪದಿಗರೆ,
ಇದೇ ಶನಿವಾರ ಸುಚಿತ್ರದಲ್ಲಿ 'ಮುಖಾಮುಖಿ' ಚಲನಚಿತ್ರದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಸಂಪದದ ಸದಸ್ಯರೇ ಆದ ಅನಿವಾಸಿ ಚಿತ್ರಕತೆ ಬರೆದು, ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. 'ಮುಖಾಮುಖಿ' ಚಿತ್ರಕ್ಕೆ ೨೦೦೬ನೇ ಸಾಲಿನ 'ಅತ್ಯುತ್ತಮ ಸಂಭಾಷಣೆ' ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಹೆಸರಾಂತ ನಟ ದತ್ತಣ್ಣ, ಕಿರುತೆರೆಯಲ್ಲಿ ಹೆಸರುವಾಸಿಯಾದ ದಿಲೀಪ್ ರಾಜ್, ಶ್ವೇತಾ ಶ್ರೀವಾತ್ಸವ್ ಇನ್ನಿತರರು ನಟಿಸಿದ್ದಾರೆ. ಕನ್ನಡದಲ್ಲಿ ಅತ್ಯಂತ ಕಲಾತ್ಮಕ ಛಾಯಾಗ್ರಾಹಕರು ಎಂದೇ ಹೆಸರು ಪಡೆದ ರಾಮಚಂದ್ರ ಐತಾಳರು ಈ ಚಿತ್ರದ ನಿರ್ಮಾಣದಲ್ಲಿ ಕೈಗೂಡಿಸಿದ್ದಾರೆ.
ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು http://mukhamukhi.anivaasi.net ತಾಣದಲ್ಲಿ ನೋಡಬಹುದು. ಚಿತ್ರದ ಡ್ಯೂರೇಷನ್ - ೨ ಗಂಟೆ.
ಈ ಪ್ರದರ್ಶನಕ್ಕೆ ನೀವು ನಿಮ್ಮ ಜತೆಯವರೊಂದಿಗೆ ಬಂದು ಚಿತ್ರವನ್ನು ನೋಡಿ, ತನ್ಮೂಲಕ ಸಂಪದವನ್ನು ಬೆಂಬಲಿಸಬೇಕೆಂದು ಕೋರುತ್ತೇವೆ. ಸಂಪದ ನಡೆಸಲು ಹಾಗು ಬೆಳೆಸಲು ಸಂಪದ ಫೌಂಡೇಶನ್ನಿಗೆ ಕಾಣಿಕೆಯನ್ನು ಇದೇ ಪ್ರದರ್ಶನದ ಹೊತ್ತಿನಲ್ಲಿ ಸದಸ್ಯರು ನೀಡಬಹುದು.
ಇದೇ ದಿನ, ಸಿನೆಮಾ ಪ್ರದರ್ಶನದ ನಂತರ ಸಂಪದದ ಸದಸ್ಯರಿಗಾಗಿ ಒಂದು ಪುಟ್ಟ ಕೂಟವೂ ಏರ್ಪಡಿಸಲಾಗಿದೆ. ಇದರಲ್ಲಿ ನೀವೂ ಭಾಗವಹಿಸಲು ಕೋರುತ್ತೇವೆ.
ನಿಯಮಿತ ಸೀಟುಗಳಿರುವುದರಿಂದ ಭಾಗವಹಿಸಲು ಆಸಕ್ತಿಯಿರುವವರು SMS ಅಥವ ಇ-ಮೇಯ್ಲ್ ಮೂಲಕ ತಿಳಿಸಿದರೆ ಉತ್ತಮ.
ನಿಮ್ಮ ಹೆಸರಿನೊಂದಿಗೆ ಈ ನಂಬರುಗಳಿಗೆ SMS ಮಾಡಬಹುದು: 99452 70698, 94493 93787
ಅಥವ ಈ ಕೆಳಗಿನ ವಿಳಾಸಕ್ಕೆ ಒಂದು ಇ-ಮೇಯ್ಲ್ ಕಳುಹಿಸಿ:
events@sampada.net
ಪ್ರದರ್ಶನದ ವಿವರ:
ದಿನ/ವೇಳೆ : ಶನಿವಾರ, ನವೆಂಬರ್ 3, ಬೆಳಿಗ್ಗೆ 10.30
ಸ್ಥಳ: ಸುಚಿತ್ರ ಚಿತ್ರಮಂದಿರ, ಬನಶಂಕರಿ, ಬೆಂಗಳೂರು.
ರೋಡ್ ಮ್ಯಾಪ್ ಇಲ್ಲಿ ಲಭ್ಯ:
http://lacefilms.googlepages.com/roadmap.jpg