ಸಂಪದ ಸದಸ್ಯರ ಗಮನಕ್ಕೆ: ಪ್ರತಿಕ್ರಿಯೆಗಳ ಸುತ್ತ
ಸಂಪದದಲ್ಲಿ ದಿನಕ್ಕೆ ೨೦೦ - ೩೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ದಾಖಲಾಗುತ್ತಿರುವುದರಿಂದ ನಿರ್ವಹಣೆ ದಿನ ಕಳೆದಂತೆ ಕ್ಲಿಷ್ಟಕರವಾಗುತ್ತಿದೆ. ಆರು ಜನ ನಿರ್ವಹಾಕರಿದ್ದರೂ ಎಲ್ಲ ನಿರ್ವಾಹಕರಿಗೂ ತಮ್ಮದೇ ಆದ ಕೆಲಸಗಳ ನಡುವೆ ಸಮಯ ಹೊಂದಿಸಬೇಕಾಗಿರುವುದರಿಂದ ಕೆಲವೊಂದು ಪ್ರತಿಕ್ರಿಯೆಗಳು ಗಮನಕ್ಕೆ ಬರದೆ ಹೋಗುವ ಸಾಧ್ಯತೆಗಳು ಉಂಟು. ಹೀಗಾಗಿ ಸಮುದಾಯದ ಸದಸ್ಯರಲ್ಲಿ ಒಂದು ಕೋರಿಕೆ:
- ಸಮುದಾಯದ ಅಭಿರುಚಿಗೆ ವಿರುದ್ಧವಾದ, ಸಮಂಜಸವಲ್ಲದ ಪ್ರತಿಕ್ರಿಯೆಗಳನ್ನು ನಿರ್ವಾಹಕರ ಗಮನಕ್ಕೆ ತನ್ನಿ, ಪ್ರತಿಯೊಂದು ಪ್ರತಿಕ್ರಿಯೆಯ ಜೊತೆಗೂ "ನಿರ್ವಾಹಕರ ಗಮನಕ್ಕೆ ತನ್ನಿ" ಎಂಬ ಲಿಂಕ್ ಇರುವುದನ್ನು ಗಮನಿಸಬಹುದು.
- ಅಲ್ಲದೆ, ಲೇಖನ ಅಥವ ಬ್ಲಾಗ್ ನಿಮ್ಮದೇ ಆದಲ್ಲಿ, ಅದಕ್ಕೆ ಬಂದಿರುವ ಯಾವುದೇ ಪ್ರತಿಕ್ರಿಯೆಯನ್ನಾದರೂ ನೀವು ಪ್ರಕಟಣೆಯಿಂದ ತೆಗೆಯುವಂತೆ ಕೋರಿಕೆ ಸಲ್ಲಿಸಬಹುದು.
- ಸಮುದಾಯದ ಅಭಿರುಚಿ, ಸಮುದಾಯದ ದಿಶೆ ಇದರಲ್ಲಿ ಭಾಗಿಯಾದವರಿಂದ ರೂಪುಗೊಳ್ಳುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಚರ್ಚೆಯಲ್ಲಿ ಪಾಲ್ಗೊಳ್ಳುವಾಗ ಪಬ್ಲಿಕ್ ಆಗಿ ಈ ಚರ್ಚೆ ನಡೆಯುತ್ತಿದೆ ಎಂಬುದನ್ನು ಅರಿತು ಜವಾಬ್ದಾರಿಯಿಂದ ನಡೆದುಕೊಂಡರೆ ಉತ್ತಮ, ಹಾಗೂ ಚರ್ಚೆ ವೈಯುಕ್ತಿಕ ಚಹರೆ ಪಡೆಯದೇ ಇರುವಂತೆ ನೋಡಿಕೊಂಡರೆ ಉತ್ತಮ.
ನಿರ್ವಾಹಕರ ಗಮನಕ್ಕೆ ತಂದ ಯಾವುದೇ ಪ್ರತಿಕ್ರಿಯೆ ವೈಯಕ್ತಿಕವಾಗಿದ್ದರೆ ಅಂತಹ ಪ್ರತಿಕ್ರಿಯೆ ನಿರ್ದಾಕ್ಷಿಣ್ಯವಾಗಿ ಕಿತ್ತುಹಾಕಲ್ಪಡುವುದು. ವೈಯಕ್ತಿಕವಾಗಿ ಉದ್ದೇಶಿಸಿ ಕೂಡ ಬರೆಯುವುದನ್ನು ಸಾಧ್ಯವಾದಷ್ಟೂ avoid ಮಾಡಿ. ಯಾವುದೇ ಸದಸ್ಯರ ಹೆಚ್ಚಿನ ಪ್ರತಿಕ್ರಿಯೆಗಳು ಈ ರೀತಿ ಪ್ರಕಟಣೆಯಿಂದ ತೆಗೆದುಹಾಕಲ್ಪಟ್ಟಲ್ಲಿ ಆ ಸದ್ಯಸ್ಯರ ಪ್ರೊಫೈಲ್ ಕೂಡ ಬ್ಲಾಕ್ ಮಾಡಲ್ಪಡುವುದು.
ಸಂಪದದ ಉದ್ದೇಶ ಕನ್ನಡದಲ್ಲಿ ಸಂವಹನ ನಡೆಸುವಲ್ಲಿ ಪ್ರೋತ್ಸಾಹಿಸುವುದು. ಆದರೆ ಇಲ್ಲಿ ಕಲ್ಪಿಸಿರುವ ಉತ್ತಮ ವೇದಿಕೆ, ಸ್ವಾತಂತ್ರ್ಯದ ದುರ್ಬಳಕೆಯಾಗದಂತೆ ನೋಡಿಕೊಳ್ಳೋಣ.