ಸಂಪದ ೨೦೧೩, ಎಂಟರ ಸಂಭ್ರಮ - ಉತ್ತಮ ಬರಹಗಾರರಿಗೆ ಪ್ರಶಸ್ತಿ
ಬರಹ
ಜುಲೈ ೨೦೧೩ಕ್ಕೆ ಸಂಪದ ಪ್ರಾರಂಭವಾಗಿ ಎಂಟುವರ್ಷಗಳಾಗುವುದು. ಈ ಸಂದರ್ಭದಲ್ಲಿ ಜನವರಿ ೧, ೨೦೧೩ ರಿಂದ ೧, ನವೆಂಬರ್ ೨೦೧೩ರವರೆಗೂ ಪ್ರಕಟವಾದ ಉತ್ತಮ ಲೇಖನಗಳನ್ನು ಆಯ್ದು ಅದರಲ್ಲಿ ಅತಿ ಹೆಚ್ಚು ಲೇಖನಗಳನ್ನು ಬರೆದವರಿಗೆ ಸಂಪದದ ಮೊಟ್ಟ ಮೊದಲ ಪ್ರಶಸ್ತಿ ನೀಡಲಾಗುವುದು. ಜೊತೆಗೆ ತಮ್ಮದೇ ಒಂದು ಪುಸ್ತಕ ಪ್ರಕಟಿಸುವ ಅವಕಾಶ ಕೂಡ.
ಸೂಚನೆ:
- ಲೇಖನ ಬೇರೆಲ್ಲೂ ಪ್ರಕಟವಾಗಿರಕೂಡದು.
- ಬರಹ ಸ್ವಂತದ್ದಾಗಿರಬೇಕು.
- ಲೇಖನದಲ್ಲಿ ಕಾಗುಣಿತ ದೋಷ ಇಲ್ಲದಂತೆ ಪರಿಷ್ಕರಿಸಿ ಪ್ರಕಟಿಸಿದ ಬರಹಗಳನ್ನು ಮಾತ್ರ ಪರಿಗಣಿಸಲಾಗುವುದು.
- ಉತ್ತಮ ಕವನ, ಪುಸ್ತಕ ವಿಮರ್ಶೆ, ರುಚಿ ಪುಟಗಳನ್ನೂ ಪರಿಗಣಿಸಲಾಗುವುದು.