ಸಂಪದ
ಕವನ
ಹೊಸ ಚಿಗುರು ಹಳೆ ಬೇರು
ಪುಷ್ಕಳ ಮನಗಳು ಒಂದಾಗಿ ಮಿಡಿಯುವ ತವರು
ತುಯ್ಯುತಿರೆ ಕನ್ನಡ ಉಸಿರ ತೇರು
ಪರಮ ಸಂಸ್ಕೃತಿಯ, ಹರಿಯುವ ನೀರು
ರೇಖೆಯ ಮೀಟಿ ಬೆಸೆದಿದೆ ಭಾಷೆಯ ಚಿಲುಮೆ
ಮೆರವಣಿಗೆಯ ಹೊರಟಿದೆ ಭಾವಗಳ ಒಲುಮೆ
ಗಗನವು ಚೆಲ್ಲಿದೆ ಮಳೆಹೂವಂತೆ ಅನಿಸಿಕೆಗಳ ಕುಲುಮೆ
ಹೋದರು ಪ್ರಾಣ, ಹೋಗದು ನಾಡ ತಾಯಿಯ ಗರಿಮೆ
ಕವನ, ಬರಹಗಳು ಇತ್ತ ಇಡುಗೆ ಚೆಂದ
ಲೇಖನ, ವಿಮರ್ಶೆಗಳ ಪಾಕವು ಬೀರಿದೆ ಜ್ಞಾನದ ಸುಗಂಧ
ಬದುಕಿನ ಪಯಣದಲ್ಲಿ ಹೆಜ್ಜೆಯ ಅಂಚೂ ಸೂಸಿದೆ ಪರಮಾನಂದ
ಜೀವಗಳ ಅಂತರ್ಜಾಲದಲ್ಲಿ ಬೆಸೆದ ಸ್ನೇಹ, ಸಂಪದ
Comments
ಉ: ಸಂಪದ
In reply to ಉ: ಸಂಪದ by latha m
ಉ: ಸಂಪದ
ಉ: ಸಂಪದ
In reply to ಉ: ಸಂಪದ by asuhegde
ಉ: ಸಂಪದ