ಸಂಬಂಧಗಳಲ್ಲಿ ಅಂತರ ಕಾಯ್ದುಕೊಳ್ಳಿ
ಮನುಷ್ಯನ ಸಹಜ ಗುಣವೇನು ಗೊತ್ತೇ? ನೀವು ಯಾರನ್ನಾದ್ರೂ ಹತ್ತಿರಕ್ಕೆ ಎಳೆದುಕೊಂಡರೆˌ ಅವರು ನಿಮ್ಮನ್ನು ಪ್ರೀತಿಯಿಂದ ಗೌರವಿಸುವುದಿಲ್ಲ. ಅವರು ನಿಮ್ಮನ್ನು ನಿರ್ಣಯಿಸ ತೊಡಗುತ್ತಾರೆ. ಅವರು ನಿಮ್ಮಲ್ಲಿ ನ್ಯೂನತೆಗಳನ್ನುˌ ದೌರ್ಬಲ್ಯಗಳನ್ನು ಕಂಡು ಸವಾರಿ ಮಾಡಲು ಬಯಸುತ್ತಾರೆ. ಏನಾದ್ರೂ ಕೊಂಕು ಹುಡುಕಲು ಪ್ರಾರಂಭಿಸುತ್ತಾರೆ. ಹೇಗಾದ್ರೂ ಮಾಡಿ ಅವರ ಮೇಲೆಯೆ ನೀವು ಅವಲಂಬಿತರು ಎಂಬುವುದನ್ನು ತೋರಿಸಲು ಪ್ರಾರಂಭಿಸುತ್ತಾರೆ. ಅದಕ್ಕೆ ನೀವು ವೈಯಕ್ತಿವಾಗಿ ಏಕಾಂಗಿಯಾಗಿರಿ. ನಿಮ್ಮನ್ನು ನೋಯಿಸುವವರು. ನಿರ್ಣಯಿಸುವವರು ಯಾರು ಇಲ್ಲ. ಆಗ ನೀವು ನಿಮ್ಮನ್ನು ಅರಿಯಲು ಪ್ರಾರಂಭಿಸುವಿರಿ. ಜನರ ಪ್ರತಿಕ್ರಿಯಿಗಿಂತ ನಿಮ್ಮ ಹತ್ತಿರದವರ, ನೀವು ಸಮೀಪ ಏಳೆದುಕೊಂಡಿರುವವರು ಮಾಡುವ ಹೇಳಿಕೆಗಳು, ಕ್ರಿಯೆ, ಪ್ರತಿಕ್ರಿಯೆ ನಿಮ್ಮ ವ್ಯಕ್ತಿತ್ವವನ್ನೇ ನಾಶ ಮಾಡಿಬಿಡುತ್ತವೆ. ಅವು ತುಂಬ ಪರಿಣಾಮ ಬೀರುತ್ತವೆ. ಇಂಥ ನಕಾರತ್ಮಾಕವಾದ ಜನಗಳನ್ನು ಹತ್ತಿರ ಇಟ್ಟುಕೊಳ್ಳುವುದಕ್ಕಿಂತ ದೂರ ಇಡುವುದೇ ಉತ್ತಮ. ನೀವು ಇಂಥ ಜನಗಳಿಂದ ದೂರವಿದ್ದಷ್ಟು ಆರೋಗ್ಯಕ್ಕೆ ಒಳ್ಳೆಯದು.
ನೀವು ಯಾರಿಂದ ಅತಿ ಹೆಚ್ಚು ಸಂತೋಷ ಅನುಭವಿಸುವಿರಿ ಅವರಿಂದಲೆ ನೀವು ಒಂದು ದಿನ ದುಃಖ ಅನುಭವಿಸಬೇಕಾಗುತ್ತದೆ. ನೀವು ಯಾರನ್ನು ಅತಿಯಾಗಿ ಹಚ್ಚಿಕೊಳ್ಳುವಿರೋ ಅವರೆ ನಿಮಗೆ ಮೋಸ ಮಾಡುವರು ಆಗ ನಿಮಗೆ ಸಹಿಸಿಕೊಳ್ಳಲಾಗದಷ್ಟು ನೋವು ಅನುಭವಿಸುವಿರಿ. ಈಗ ಯಾರಿಂದ ಅತಿ ಹೆಚ್ಚು ಆನಂದಿತರಾಗುವಿರೋ ಅವರಿಂದಲೇ ಒಂದು ದಿನ ದುಃಖ ಅನುಭವಿಸಬೇಕಾಗುತ್ತದೆ. ಇದಕ್ಕೆ ಕೃಷ್ಣ ಭಗವದ್ಗೀತೆಯಲ್ಲಿ ಹೇಳುವುದು, ಯಾವುದರೊಂದಿಗೂ ವ್ಯಾಮೋಹ ಬೆಳೆಯಿಸಿಕೊಳ್ಳದಿರುವುದು.
ನೀವು ಜಗತ್ತಿನ ಯಾವ ವೈರಿಗಳಿಗೂ, ಯಾವ ಸೈನ್ಯವನ್ನು ಎದುರಿಸಲು ಹೆದರಲಾರಿರಿ. ಆದರೆ ನೀವು ನಿಮ್ಮ ಹೆಂಡತಿ, ಮಕ್ಕಳು, ಸಹೋದರರು, ಸ್ನೇಹಿತರು, ಬಂಧುಗಳು, ಸಮೀಪದವರು ವೈರಿಗಳಾದ್ರೆ ನೀವು ಯಾವ ಯುದ್ದವನ್ನು ಮಾಡದೆ ಸೋತು ಬೀಡುವಿರಿ. ಇದೆಯಲ್ಲವೆ, ಅರ್ಜುನ ಕುರುಕ್ಪೇತ್ರದಲ್ಲಿ ಅನುಭವಿಸಿದ ಧರ್ಮ ಸಂಕಟ. ನೀವು ಪ್ರೀತಿಸಿದವರನ್ನು ಎದುರಿಸಲು ಆಗುವುದಿಲ್ಲ. ನಮ್ಮ ಬದುಕಲ್ಲಿ ಆಗ ಕೃಷ್ಣನೇ ( ವಿವೇಕ ) ಮತ್ತೆ ಸಾರಥಿಯಾಗಬೇಕು. ಪ್ರೀತಿ ವ್ಯಾಮೋಹವಾದಾಗ ಅದು ನಿಮ್ಮ ವಿಕನೆಸ್ ಆಗಿಬೀಡುತ್ತದೆ. ಯಾವ ಪ್ರೀತಿ ನಿಮ್ಮನ್ನು ಒಮ್ಮೆ ಬಲಶಾಲಿಯಾಗಿಸಿತ್ತೋ ಅದೆ ಪ್ರೀತಿ ನಿಮ್ಮನ್ನು ದುರ್ಬಲನ್ನಾಗಿಸಿ ಮಂಡಿಯೂರುವಂತೆ ಮಾಡುವುದು.
ಯಾರನ್ನೂ ನಿಮ್ಮ ಅಂತಃರಂಗದ ಹತ್ತಿರಕ್ಕೆ ಎಳೆದುಕೊಳ್ಳಲು ಹೋಗಬೇಡಿ. ಅವರೆಲ್ಲ ಮುಂದೆಯೊಂದು ದಿನ ಯಾವತ್ತಾದರೂ ತುಂಬ ದುಃಖ ಉಂಟು ಮಾಡುತ್ತಾರೆ. ಅದು ನಾವೇ ಏಳೆದುಕೊಳ್ಳುವ ದುಃಖ. ಆದಷ್ಟು ಯಾವುದೇ ಸಂಬಂಧವಿರಲಿ ಒಂದು ಅಂತರವನ್ನು ಕಾಯ್ದುಕೊಳ್ಳಿ. ದೂರವಿದಷ್ಟು ಪ್ರೀತಿ ಹೆಚ್ಚಾಗುವುದು. ಸಾಮಿಪ್ಯವಿದ್ದಷ್ಟು ದ್ವೇಷ ಜಾಸ್ತಿ. ಅದಕ್ಕೆ ನಿಮ್ಮ ಅಂತಃರಂಗದೊಳಗೆ ಯಾರನ್ನು ಪ್ರವೇಶಿಸಲು ಬೀಡದೆ, ನಿಮ್ಮ ಹೃದಯದ ಆರೋಗ್ಯಕ್ಕೆ ಅಂತರ ಕಾಯ್ದುಕೊಳ್ಳಿ. ಸಂಬಂಧಗಳಲ್ಲಿ ಸೂಕ್ಪ್ಮವಾದ ಗೆರೆ ಎಳೆದುಕೊಳ್ಳಬೇಕು. ಅದು ಯಾರೆ ಆಗಿರಲಿ. ನಿಮ್ಮ ಅಂತಃರಂಗದಲ್ಲಿ ನೀವು ಏಕಾಂಗಿ ಎಂಬ ಸತ್ಯ ಅರಿಯಿರಿ. ಯಾರೊಂದಿಗೂ ನಿಮ್ಮನ್ನು ಅರಿತುಕೊಳ್ಳುವˌ ನಿಮ್ಮ ನೋವು, ದುಃಖ ದಾಟಿಸಬಲ್ಲ ಅಥವ ಅದನ್ನು ಸರಿಯಾಗಿ ಗ್ರಹಿಸಬಲ್ಲ ಅಥವ ಅದನ್ನು ಹೀರಿಕೊಳ್ಳುವ ಯಾವ ವ್ಯಕ್ತಿಯೂ ಸಿಗುವುದಿಲ್ಲ. ವ್ಯಕ್ತಿಯ ನಡುವೆ ಸಂವಹನ ಸಾಧ್ಯವೆ ಇಲ್ಲ. ಸಂವಹನ ಇಲ್ಲಿ ಕೇವಲ ವ್ಯಾವಹಾರಿಕವಷ್ಟೆ ಸಂಬಂಧಿಸಿದ್ದು. ಭಾವನಾತ್ಮಾಕವಾಗಿಯಲ್ಲ. ಯಾವುದನ್ನು ವರ್ಗಾಯಿಸಲಾಗುವುದಿಲ್ಲ. ಎಲ್ಲವನ್ನು ನೀವೇ ಹೀರಿಕೊಳ್ಳಬೇಕು. ಅನುಭವಿಸಬೇಕು.
-ಜಯದೇವ ಪೂಜಾರ್
ಚಿತ್ರ ಕೃಪೆ: ಇಂಟರ್ನೆಟ್ ತಾಣ