ಸಂಬಂಧದ ಅನುಬಂಧ

ಸಂಬಂಧದ ಅನುಬಂಧ

ಕವನ

ಸಂಸ್ಕಾರ ಸಂಸ್ಕೃತಿ ಸಂಬಂಧಗಳ ಆಚರಣೆ

ಶ್ರಾವಣ ಮಾಸದ ಹುಣ್ಣಿಮೆ  ದಿನ ವಿಶೇಷತೆ

ಅಣ್ಣ-ತಂಗಿಯರ ಸಂಬಂಧದ ಅನುಬಂಧ

ನಂಬಿಕೆ ಪ್ರೀತಿ ವಿಶ್ವಾಸದಿ ರಕ್ಷಣೆಯ ಬಂಧ

 

ಸದಾ ರಕ್ಷಣೆಗೆ ನಾನಿದ್ದೇನೆಂದ ವಾಸುದೇವ

ತಂಗಿ ಕೃಷ್ಣೆಯ ಮಾನ ಕಾಪಾಡಿದ ದೇವ

ಸೋದರಿಯ ಮಧುರ ಬಾಂಧವ್ಯದ ಹರಿಕಾರ

ತಂದೆಯ ಸ್ಥಾನದಿ ಕಾಯುವ ಗುರಿಕಾರ

 

ಶೀಲ-ಮಾನದ ಬೆಲೆ ಕೋಟಿಗಿಂತಲೂ ಮಿಗಿಲು

ಅಣ್ಣ ಕಾಯುವನು ರೆಪ್ಪೆ ಮುಚ್ಚದೆ ಹಗಲಿರುಳು

ದುಷ್ಟಶಕ್ತಿಗಳು ನಾಶವಾಗುವವು  ಬೆಸೆವ ರಾಖಿಯಲಿ

ಶಾಶ್ವತ ಸೌಹಾರ್ದ ಮೆಟ್ಟಿಲ ತಳಪಾಯದಲಿ

 

ಭೇದ ಭಾವವಿಲ್ಲದೆ ಕಟ್ಟುವರು ರಕ್ಷಣೆಗೆ ರಕ್ಷೆ

ದೊರಕುವುದು ಭಗವಂತನ ಕೃಪಾಶ್ರಯದ ಶ್ರೀರಕ್ಷೆ

ರಾಖಿಯ ಬಿಗಿತದಿ ತೋರಿಕೆ ಆಡಂಬರ ಬೇಡ

ಪರಸ್ಪರ ಮಾನವ ಸಂಬಂಧಗಳ ಬೆಸೆಯೋಣ ಕೂಡಿ

 

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್