ಸಂಯಮವಿರಲಿ

ಸಂಯಮವಿರಲಿ

ಕವನ

ಕರಿಮಣಿಯ ಮಾಲಿಕನು ನೀನಲ್ಲ ಎನ್ನದಿರು

ಇರಬಹುದು ನಮ್ಮೊಳಗೆ ಕಲಹ ನೂರು

ಪ್ರೇಮದಲಿ ಕಲಹಗಳು ಅತಿ ಸಹಜ ಎನ್ನುವರು

ಸಂಯಮವು ಬೇಕೀಗ ಒಂದು ಚೂರು

 

ಸಂಸಾರ ಎಂದಾಗ ಮಾತೊಂದು ಬರಬಹುದು

ಅದನೊಂದು ವಿಪರೀತ ಎಣಿಸಬಹುದೆ?

ಅನುರಾಗ ತುಂಬಿರಲು ಒಂದಿಷ್ಟು ಜೊತೆಯಲ್ಲಿ

ಕಳೆದಾಗ ಮುನಿಸೆಲ್ಲ ಮರೆಯದಿಹುದೆ

 

ನಿನಗಾಗಿ ನಾನೆಂದು ನನಗಾಗಿ ನೀನೆಂದು

ನೀನುಡಿದ ಮಾತುಗಳು ಮರೆತು ಹೋಯ್ತೆ

ಸತಿ ಪತಿಯ ಬಂಧವದು ಬೆಸೆಯುವುದು ಸಗ್ಗದಲಿ

ಒಂದಾಗಿ ಬರೆಯೋಣ ಬಾಳ ಕವಿತೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್