ಸಂವಿಧಾನ ದಿನವಾದ ರಾಷ್ಟ್ರೀಯ ಕಾನೂನು ದಿನ

ಸಂವಿಧಾನ ದಿನವಾದ ರಾಷ್ಟ್ರೀಯ ಕಾನೂನು ದಿನ

ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರು ಡಾ ಬಿ ಆರ್ ಅಂಬೇಡ್ಕರ್ ಅವರು. ಸಂವಿಧಾನದ ಕರಡು ಪ್ರತಿಯನ್ನು  ರಚಿಸಿ, ೧೯೫೦ರ ನವಂಬರ ೨೬ ರಂದು ಭಾರತಕ್ಕೆ ಅರ್ಪಿಸಿದ ದಿನವೇ ‘ರಾಷ್ಟ್ರೀಯ ಸಂವಿಧಾನ ದಿನ’. ಮೊದಲು ರಾಷ್ಟ್ರೀಯ ಕಾನೂನಿನ ದಿನವೆಂದು ಆಚರಿಸುತ್ತಿದ್ದರು. ೨೦೧೫ರಿಂದ ಸಂವಿಧಾನ ದಿನವೆಂದು ಘೋಷಿಸಲ್ಪಟ್ಟಿದೆ. ಸಂವಿಧಾನ ಕರಡು ಪ್ರತಿಯ ತಯಾರಿಗೆ ಡಾ ಬಿ ಆರ್ ಅಂಬೇಡ್ಕರ್ ಅವರೊಬ್ಬರೇ ಹೆಚ್ಚಿನ ಮುತುವರ್ಜಿ ವಹಿಸಿದ್ದರ ಫಲವೆಂದು, ಶ್ರೀ ಟಿ ಟಿ ಕೃಷ್ಣಮಾಚಾರಿಯವರ ಹೇಳಿಕೆಯಲ್ಲಿ ಕಂಡುಬರುತ್ತದೆ. ಸಮಿತಿಯ ಸದಸ್ಯರ ಅನಾರೋಗ್ಯ, ವಿದೇಶವಾಸ, ಮರಣ ಹೀಗೆ ಹತ್ತು ಹಲವು ಅಡಚಣೆಗಳು. ಅಂಬೇಡ್ಕರ್ ಅವರ ವಿಚಾರಗಳು, ಆಲೋಚನೆಗಳನ್ನು ಮಕ್ಕಳಿಗೆ ಮಾಹಿತಿಗಾಗಿ ನೀಡಬಹುದು. ಸಂವಿಧಾನದ ಮಹತ್ವವನ್ನು ತಿಳಿಸಬಹುದು. ಓಟ ಮುಂತಾದ ಕ್ರೀಡೆಗಳನ್ನು ಆಯೋಜಿಸುವುದು, ಭಾಷಣ, ಪ್ರಬಂಧ, ರಸಪ್ರಶ್ನೆ ಇತ್ಯಾದಿ ಮಕ್ಕಳಿಗೆ ಏರ್ಪಡಿಸಿ ಶಾಲೆಗಳಲ್ಲಿ ಅರಿವು ಮೂಡಿಸಬಹುದು. ಅಖಂಡ ಭಾರತದ ಲಿಖಿತ ಸಂವಿಧಾನವನ್ನು ಗೌರವಿಸೋಣ. ಸಂವಿಧಾನವನ್ನು ರಚಿಸಿ ದೇಶಕ್ಕೆ ಸಮರ್ಪಿಸಿದ ಹಿರಿಯರನ್ನೆಲ್ಲ ಸ್ಮರಿಸೋಣ.

***

ನಮ್ಮ ಸಂವಿಧಾನ ನಮ್ಮ ಹೆಮ್ಮೆ

ನಮ್ಮ ಸಂವಿಧಾನ ನಮ್ಮ ಹೆಮ್ಮೆ

ಅರಿಯೋಣ ಬನ್ನಿ ಒಳಗೇನಿದೆ ಒಮ್ಮೆ

ಲಿಖಿತ ಸಂಗ್ರಹ ಬೃಹತ್ ಗ್ರಂಥವು

ವಿಶ್ವದಲ್ಲೇ ಅತಿ ಶ್ರೇಷ್ಠವು

 

ಡಾ ಬಿ ಆರ್ ಅಂಬೇಡ್ಕರರ ಶ್ರಮದ ಫಲವಿದು

ಭಾರತದ ಅತಿದೊಡ್ಡ ಬಲವಿದು

ಏಕ ಆಡಳಿತ ಏಕ ಕಾನೂನು ಸಮಾನತೆಯಿದು

ಹಕ್ಕು ಕರ್ತವ್ಯಗಳ ಅರಿವ ಗೂಡಿದು

 

ನಮಿಸೋಣ ಆಲೋಚನೆಗಳ ಸರಣಿಗೆ

ಕೈಯೆತ್ತಿ ಮುಗಿಯೋಣ ದಕ್ಷ ಶ್ರಮಹಾದಿಗೆ

ರಾಷ್ಟ್ರೀಯ ನಾಯಕರ ಕನಸು ನನಸಾದ ದಿನವಿಂದು.

ತಿಳಿಸೋಣ ತಿಳಿಯೋಣ ಎಲ್ಲರೊಂದಾಗಿ ಇಂದು.

-ರತ್ನಾ ಕೆ.ಭಟ್,ತಲಂಜೇರಿ,ಪುತ್ತೂರು

(ಆಕರ: ಡಾ.ಬಿ ಆರ್ ಅಂಬೇಡ್ಕರ್ ಪುಸ್ತಕ)

ಚಿತ್ರ ಕೃಪೆ: ಇಂಟರ್ನೆಟ್ ತಾಣ