ಸಂಸಾರ ಶರಧಿ
ಕವನ
ಬೀಸುವ ಗಾಳಿಗೆ ಬೆದರದೆ ಸಾಗಲಿ
ಸಂಸಾರ ಶರಧಿಯ ಗುಡಿಯು|
ಭೋರ್ಗರೆವ ಜಲರಾಶಿಯ ಕಡಲಲಿ
ಬೆಳ್ನೊರೆ ಅಪ್ಪಳಿಸುವ ನಡೆಯು||
ದೂರದಲೆಲ್ಲೋ ಊಳಿಡುವ ನರಿಯು
ಬಾರದಿರಲಿ ಕದವ ತೆರೆದು|
ತಳಮಳಗೊಳ್ಳದೆ ಮನದ ನೆಮ್ಮದಿಯು
ಸ್ಥಿರತೆಯ ಚಾಪೆ ಹಾಸುತಲಿಂದು||
ಕತ್ತಲೆ ಬೆಳಕಿನ ಸೋಜಿಗ ನೋಟವು
ಬಾಳಿನ ಹಾದಿಯ ಲೇಖನಿಯು|
ಏಳುತ ಬೀಳುತ ಸಾಗುವ ನಡೆಯು
ಹೆಣೆದಿಹ ಅಕ್ಷರ ಪುಟಪುಟವು||
ಅಪ್ಪುತ ಒಪ್ಪುತ ಬದುಕಿನ ಬಂಡಿಯು
ಉರುಳುತ ಮುಂದಕೆ ನಗೆಯನು ಚಿಮ್ಮುತ|
ಸೋಲು ಗೆಲುವು ಸರಿಸಮವೆನುತ
ತನುವಲಿ ಒಲವನು ಬಿಂಬಿಸುತ ||
-ರತ್ನಾ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್