ಸಂಸ್ಕೃತದಿಂದ ಇನ್ನಷ್ಟು ಒಳ್ಳೆಯ ಸುಭಾಷಿತಗಳು (೪೦-೪೨)

ಸಂಸ್ಕೃತದಿಂದ ಇನ್ನಷ್ಟು ಒಳ್ಳೆಯ ಸುಭಾಷಿತಗಳು (೪೦-೪೨)

ಬರಹ

೪೦. ಪೂರ್ಣವಾಗಿ ಸಜ್ಜನರ ದಾರಿಯನ್ನು ಅನುಸರಿಸಲು ಸಾಧ್ಯವಿಲ್ಲದಿದ್ದರೆ ಸಾಧ್ಯವಿದ್ದಷ್ಟಾದರೂ ಅನುಸರಿಸಬೇಕು. ಅವರು ಹಾಕಿಕೊಟ್ಟ ದಾರಿಯಿಂದ ದೂರ ಸರಿಯಬಾರದು.

ಅನುಗಂತುಂ ಸತಾಂ ವರ್ತ್ಮ ಕೃತ್ಸ್ನಂ ಯದಿ ನ ಶಕ್ಯತೇ |
ಸ್ವಲ್ಪಮಪಿ ಅನುಗಂತವ್ಯಂ ಮಾರ್ಗಸ್ಥೋ ನಾವಸೀದತಿ ||

೪೧. ಪ್ರತಿದಿನವೂ ಮನುಷ್ಯನು ತನ್ನ ನಡತೆಯನ್ನು ನೋಡಿಕೊಳ್ಳಬೇಕು. ತಾನು ಪಶುಗಳ ಹಾಗೆ ವರ್ತಿಸುತ್ತಿರುವೆನೋ ಅಥವಾ ಸತ್ಪುರುಷರ ಹಾಗೋ ಎಂದು ವಿಚಾರ ಮಾಡಬೇಕು

ಪ್ರತ್ಯಹಂ ಪ್ರತ್ಯವೇಕ್ಷ್ಯೇತ ನರ: ಚರಿತಂ ಆತ್ಮನ: |
ಕಿಂ ನು ಮೇ ಪಶುಭಿ: ತುಲ್ಯಂ ಕಿಂ ನು ಸತ್ಪುರುಷೈ: ಇತಿ ||

೪೨. ಅಭ್ಯಾಸ ಮಾಡುತ್ತಿರುವವನಿಗೆ ದಡ್ಡತನವಿಲ್ಲ , ಜಪ ಮಾಡುತ್ತಿರುವವನಿಗೆ ಪಾಪವಿಲ್ಲ , ಮೌನಿಯಾಗಿರುವವನಿಗೆ ಜಗಳವಿಲ್ಲ , ಎಚ್ಚರವಾಗಿರುವವನಿಗೆ ಭಯವಿಲ್ಲ.

ಪಟತೋ ನಾಸ್ತಿ ಮೂರ್ಖತ್ವಂ , ಜಪತೋ ನಾಸ್ತಿ ಪಾತಕಂ |
ಮೌನಿನ: ಕಲಹಂ ನಾಸ್ತಿ , ನ ಭಯಂ ಚ ಅಸ್ತಿ ಜಾಗೃತ: ||