ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)
ಬರಹ
ಅಪದೋ ದೂರಗಾಮೀ ಚ ಸಾಕ್ಷರೋ ನ ಚ ಪಂಡಿತಃ
ಅಮುಖಃ ಸ್ಫುಟವಕ್ತಾ ಚ ಯೋ ಜಾನಾತಿ ಸ ಪಂಡಿತಃ||
ಅರ್ಥ: ಕಾಲಿಲ್ಲದಿದ್ದರೂ ದೂರ ಹೋಗುತ್ತಾನೆ. ಅಕ್ಷರಗಳು ಇದ್ದರೂ ಪಂಡಿತನಲ್ಲ. ಮುಖವಿಲ್ಲ ಆದರೂ ಸುಲಲಿತವಾಗಿ ಮಾತಾಡುತ್ತಾನೆ. ಇವನು ಯಾರೆಂದು ತಿಳಿದವನೇ ಪಂಡಿತ.
ಏಕಾಕ್ಷೀ ಹಿ ನ ವಾಯಸಃ ದ್ವಿಜಿಹ್ವಾ ನ ಚ ಸರ್ಪಿಣೀ
ಪಂಚಭರ್ತ್ರೀ ನ ಪಾಂಚಾಲೀ ಯೋ ಜಾನಾತಿ ಸ ಪಂಡಿತಃ||
ಅರ್ಥ: ಒಂದೇ ಕಣ್ಣು ಕಾಗೆಯಲ್ಲ (ಕಾಗೆಗೆ ಒಂದೇ ಕಣ್ಣು ಎಂದು ನಂಬಿಕೆ). ಎರಡು ನಾಲಿಗೆ ಹಾವಲ್ಲ.
ಐದು ಗಂಡಂದಿರು ದ್ರೌಪದಿಯಲ್ಲ. ಇದನ್ನು ತಿಳಿದವನೇ ಪಂಡಿತ.
ಪರ್ವತಾಗ್ರೇ ರಥೋ ಯಾತಿ ಭೂಮೌ ತಿಷ್ಠತಿ ಸಾರಥಿಃ
ಚಲತೇ ವಾಯುವೇಗೇನ ಪದಮೇಕಂ ನ ಗಚ್ಛತಿ||
ಅರ್ಥ: ಬೆಟ್ಟದ ತುದಿಯಲ್ಲಿ ತೇರೊಂದು ಓಡುತಿದೆ. ನೆಲದಲ್ಲಿ ಅದಱ ಸಾರಥಿ ಇದ್ದಾನೆ. ಗಾಳಿಯ ಹಾಗೆ ಓಡುತ್ತಿದೆ. ಆದರೆ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ಏನದು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)
ಉ: ಸಂಸ್ಕೃತದ ಈ ಒಗಟುಗಳನ್ನು ಬಿಡಿಸಿ (ಅರ್ಥ ಕೊಟ್ಟಿದೆ)