ಸಂಸ್ಕ್ರುತದ ಇಪ್ಪತ್ತೆರಡು ಉಪಸರ್ಗಗಳ ಪಟ್ಟಿ

ಸಂಸ್ಕ್ರುತದ ಇಪ್ಪತ್ತೆರಡು ಉಪಸರ್ಗಗಳ ಪಟ್ಟಿ

ಬರಹ

ಪ್ರವಿಪರಾಪಸಮನ್ವವ ನಿರ್ನಿಸೌ
ದುರತಿ ದುಷ್ಪ್ರತಿ ಸೂದಧಿ ಪರ್ಯಪಿ
ತದನು ಚಾಙಭಿನೀ ಉಪ ವಿಂಶತಿಃ
ದ್ವಿಸಹಿತೇತ್ಯುಪಸರ್ಗಸಮಾಹ್ವಯಃ||

ಇದು ಸಂಸ್ಕೃತದ ಇಪ್ಪತ್ತೆರಡು ಉಪಸರ್ಗಗಳನ್ನು ಪಟ್ಟಿ ಮಾಡುವ ಶ್ಲೋಕ. ಇದು ದ್ರುತವಿಲಂಬಿತ ವೃತ್ತದಲ್ಲಿದೆ ಲಕ್ಷಣ:-’ದ್ರುತವಿಲಂಬಿತಮಾಹ ನಭೌ ಭರೌ’. ೨೨ ಉಪಸರ್ಗಗಳು ಈ ಪದ್ಯದ ಪ್ರಕಾರ ಯಾವುವೆಂದರೆ
ಪ್ರ, ವಿ, ಪರಾ, ಅಪ, ಸಮ್, ಅನು, ಅವ, ನಿರ್, ನಿಸ್, ದುರ್, ಅತಿ, ದುಸ್, ಪ್ರತಿ, ಸು, ಉತ್, ಅಧಿ, ಪರಿ, ಅಪಿ, ಆ(ಙ್), ಅಭಿ, ನಿ ಮತ್ತು ಉಪ, ಇವು ಒಟ್ಟು ೨೨ ಉಪಸರ್ಗಗಳು.

ಉಪಸರ್ಗೇಣ ಧಾತ್ವರ್ಥೋ ಬಲಾದನ್ಯತ್ರ ನೀಯತೇ
ಪ್ರಹಾರಾಹಾರಸಂಹಾರವಿಹಾರಪರಿಹಾರವತ್||

ಅರ್ಥ: ಉಪಸರ್ಗದಿಂದ ಧಾತು(ಕ್ರಿಯಾಮೂಲ)ವಿನ ಅರ್ಥ ಬಲ್ವಾಗಿ ಬೇಱೆಡೆಗೆ ಒಯ್ಯಲ್ಪಡುತ್ತದೆ (ಮೂಲ ಅರ್ಥ ಬಹಳ ವ್ಯತ್ಯಾಸವಾಗುತ್ತದೆ). ಉದಾಹರಣೆಗೆ ಹೃ=ಒಯ್ಯು ಎಂಬ ಅರ್ಥವು ಆಹೃ=ತರು, ಪ್ರಹೃ=ಹೊಡೆ, ಸಂಹೃ=ಕೊಲ್ಲು, ವಿಹೃ=ಆಡು, ವಿಹರಿಸು, ಪರಿಹೃ=ಪಾರು ಮಾಡು, ಪರಿಹರಿಸು ಎಂಬುದಾಗಿ ಬದಲಾಗುತ್ತದೆ. ಪ್ರಹಾರ=ಹೊಡೆಯುವುದು, ಆಹಾರ=ತರುವುದು, ಸಂಹಾರ=ಕೊಲ್ಲುವುದು ವಿಹಾರ=ಆಟವಾಡುವುದು, ವಿಹಾರ, ಪರಿಹಾರ=ಪಾರು ಮಾಡುವುದು ಎಂದಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet