ಸಂಸ್ಕ್ಱುತಿ
ಕವನ
ಕಾರ್ಖಾನೆಯ ಹೊಲಸು ನೀರು,
ಅದರಲ್ಲಿ ಮೀಯುವ ಬಟ್ಟೆ,
ಇದರಲ್ಲಿ ಬೆರೆತ ಸಂಸ್ಕೃತಿ,
ಜ್ನಾನಮರ್ದನದ ಮದಿರೆ,
ಮೈಯೇರಿದ ತೊದಲ ಮಾತು
ಇದುವೇ ನಮ್ಮ ಪ್ರಗತಿಯ ಪಥ.
ಅಡಿಪಾಯವಿಲ್ಲದ ಅರಮನೆ,
ನೆರೆಮನೆಯ ಅರಿವು ಇಲ್ಲದ ಬದಕು
ನೂವು ಅರಿಯದ ಸ್ನೇಹ
ಸ್ವಾರ್ಥ ಪ್ರಜ್ನೆ, ನೀತಿನಿಯಮ,
ನಿರಾಕಾರನ ಅರಿಯದ ಶುನ್ಯಕ್ರಿಯೆ
ಇದುವೆನಮ್ಮ ನಾಗರೀಕತೆ.
ಭವ್ಯ ಬಂಗಲೆ, ಸಮಾರಂಭ, ಅಲಂಕಾರ
ವ್ಯಂಗ್ಯಬೆರೆತ ನುಡಿ
ಬಂಡವಾಳ ಕಾಣದ ಭಾಷೆ,
ತಳಕುಬಳಕಿನ ಮನೋರಂಜನೆ
ಉದ್ರೇಕ, ಆಕ್ರೋಶಗಳ ನರ್ತನ
ಇದುವೇ ನಮ್ಮಕಾಲದ ಕಾಯ.
ಧರ್ಮ ಭೋದಿಸುವ ಪಾಠಶಾಲೆ,
ಅಭಿನಯ ಭೋಜನ ಅಭ್ಯಂಜನ
ನಿಶ್ಚಿಂತೆ ಇದುವೇ ನಮ್ಮಧರ್ಮ.
Comments
ಉ: ಸಂಸ್ಕ್ಱುತಿ
In reply to ಉ: ಸಂಸ್ಕ್ಱುತಿ by mmshaik
ಉ: ಸಂಸ್ಕ್ಱುತಿ