ಸಂ (ತೋಷಾ / ತಾಪ)
ಅದ್ಯಯ - ೧
"ಒಂದು ಕ್ಷಣ ನಿಲ್ಲಿ..." ತಟ್ಟನೆ ಒಳಗೆ ಹಾರಿದನು, ನಿಟ್ಟುಸಿರಿ ಬಿಡುತ್ತ ತಲಯನೆತ್ತಿ ನೋಡಿದಾಕ್ಷಣ ಮನದೊಳಗೆ ಏನೋ ಆನಂದ, ಹಸಿರು ಬಣ್ಣದ ಚುಡಿಧರ್, ಹೊಳಯುವ ಕಶಗಳ ಹಿಂದಿನ ಕಿವಿಗಿ ತೊಟ್ಟ ಜುಮುಕಿ, ನೇಸರನ ಬಣ್ಣವನು ತುಂಬಿಕೊಂಡ ಮುಖ, ಪ್ರಕೃತಿಯ ಸೌಂದರ್ಯವೆ ಹೆಣ್ಣಾಗಿ ಬಂದು ನಿಂತಂತೆ ಕಂಡಿತು. ಆಷ್ಟರಲ್ಲಿ ಕಂಡಕ್ಟರ್ ಟಿಕೆಟ್ ಟಿಕೆಟ್ ಎಂದು ಕೆಳಿದನು.ಒಂದು ಕ್ಷಣ ಸುಂದರ ಕನಸಿಗೆ ಬರ ಬಡಿದಂತಾಯಿತು. ಅಂಗಿಯ ಜೇಬಿನಿಂದ ಹಣವನ್ನು ತಗೆದು ಕೊಟು ಮತ್ತ ನೂಡುವಷ್ಟರಲಿ ನಿರಾಶೆ, ಆವಳು ಕಾಣಲಿಲ್ಲ. ಹತಾಶೆಗೊಂಡು ಮುಂದೆ ನನ್ನ ಸ್ಟಾಪಿನಲ್ಲಿ ಇಳಿದು ನಡದೆ. ಕಾಲೆಜಿಗೆ ಹೋಗುವಷ್ಟರಲ್ಲಿ ತಡವಾಗಿತ್ತು. ಅವಳ ನೆನಪಿನಲೆ ತೂರಾಡುತ್ತ ಬಲಗಡೆಯ ಕಾಲೇಜಿನ ಪ್ರಹರಿ ಗೋಡೆಯ ಕಡೆಗೆ ನೋಡಿದೆ. ನನ್ನ ಸ್ನೇಹಿತರು ತರಗತಿಗೆ ಬಂಕ್ ಹೊಡೆದು ಸಿಗರೇಟು ಸದುತಿದ್ದರು. ಅವರ ಬಲಿಗೆ ನಡೆದೆ. ಅವರು ನನ್ನ ಊದ್ದನೆಯ ಮುಖವನು ಕಂಡು, ಏನಾಯಿತೋ ಮಗ ಡಲ್ಆಗಿದ್ದಿಯ? ಎಂದು ಕಲಿದರು ನಾನು ಏನು ಉತ್ತರ ಕೊಡಲಿಲ. ಮಗ ದಂ ಹೊಡಿಯೋ, "ಲಾಸ್ಟ್ ಪಫ್ ಆಫ್ ಸಿಗರೆಟ್ ಅಂಡ್ ಫಸ್ಟ್ ಕಿಸ್ ಆಫ್ ಗರ್ಲ್ ಫ್ರೆಂಡ್ ಎರಡು ಒಂದೆ" ತಗೋ ಮಗ ಎಂಜಾಯ್ ಮಾಡು. ಎಂದ "ಈಮಾನ್".
ಈಮಾನ್, ಬೂಮಿಗೆ ನಾಕ್ಕೆ ಅಡಿ ಎತ್ತರವಿದ್ದು, ತಲೆಯ ಮುಂಬಾಗದ ಕೂದಲು ಆಕಾಶದ ಸುರ್ಯನ್ನನೆ ಚುಚ್ಚುವಂತೆ ಮುಖಮಾಡಿ ನೂಡುತಿದ್ಧವು, ನಾವ್ಲೆರು ಅವನನ್ನು "ಈ....."(ನೊಣ) ಎಂದೆ ಕರಯುತಿದ್ದವು. ಹಾಗೆ ಆಬ್ಯಾಸದೂಶವೋ ಎಂಬಂತೆ, ಆವಳ ನೆನಪಿನಿಂದಾಚ ಬರಲು ಸ್ನೇಹಿತರೊಡನೆ "ಈ..." ಎಂದು ಜೋಕ್ ಮಾಡ ತೊಡಗಿದೆ. ಆಷ್ಟರಲ್ಲಿ ಮತ್ತೆ ಕಣ್ಣಿಗೆ ಆನಂದದೌತನ, ಆದೆ ಹಸಿರು ಬಣ್ಣದ ಚೂಡಿದಾರ್ ತೊಟ್ಟ ಹುಡುಗಿ ಕಾಲೇಜ್ ಗೇಟ್ನೊಳಗೆ ಕಾಣಿಸಿಕೊಂಡಳು. ಒಂದು ಕ್ಷಣ ಮೂಕನಾದೆ. ನನ್ನ ಮೂಕ ಸ್ತಿತಿಯ ಕಂಡ ಬಂಡಾರಿ (ಬನ್) ನನ್ನ ಕ್ನದೃಷ್ಟಿಯ ಕಡೆಗೆ ನೋಡಿದನು, ಮಗ ಏನಾಯಿತೋ, ಯಾರನ್ ನೋಡತಿದ್ಯ? ಎಂದ, "ಬನ್"(ಬಂಡಾರಿ) ಕರಿಯ ಬಣ್ಣ, ಆನೆ ಗಾತ್ರದ ದೇಹ, ಉಬ್ಬಿದ ತುಟಿ, ತೆಟ್ ಉಬ್ಬಿದ ಬ್ನನಿನಹಗೆ ಕಾನುತಿದ್ದನು ಹಾಗಾಗಿ ನಾವ್ಲರು ಅವನನ್ನು “ಬನ್” ಎಂದು ಕರೆಯುತಿದೆವು., ಮಗ "ಶೀ ಇಸ್ ಲುಕಿಂಗ್ ಬ್ಯೂಟಿಫುಲ್ ಡ", ಬನ್ - ನೋಡ್ರೋ ಫಸ್ಟ್ ಡೇ ನೆ ಶುರು. "ಲಾಂಗ್ ಬಾಡಿ" ಹಾಲಾಗೋದ ಎಂದ. ಆಗತಾನೆ ಭೂಮಿಯ ಹೊಕ್ಕಿ ಬೆಳೆಯಲಾರಂಬಿಸಿದ ಪೈರಿನಂತೆ, ತುಟಿಯ ಮೇಲೆ ಕೊಂಚ ಕಾಣುತಿದ್ದ ಮೀಸೆ, ಕುರುಚಲು ಗಡ್ಡ. ಮರಳುಗಾಡಿನಲ್ಲಿ ಬೆಳೆದು ನಿಂತಿರುವ ಮರದ ಹಾಗೆ ಉದ್ದನೆ ಬೆಳದ ದೇಹ, ತೊಟ್ಟ ಅಂಗಿಯಲ್ಲಿ ಕಾಣದ ಹಗೆ ಕಂಡರೂ ತಾನೇ ಮ್ನ್ಮತನೆಂಬ ಹುಮ್ಮಸು, ಕೆನ್ಚಂದು (ಕೆಂಚೇಗೌಡ). ೬.೨ ಅಡಿ ಎತ್ತರವಿದುದ್ದರಿದ ಸ್ನೇಹಿತರೆಲರು ಆವನನ್ನು "ಲಾಂಗ್ ಬಾಡಿ" ಎಂದೇ ಕರೆಯುತಿದ್ದರು. ಅಷ್ಟರಲ್ಲಿ "ಡೆಡ್ ಬಾಡಿ"(ಮೌಲಿ) ಬಿಡೂ ಮಗ "ಕಾಲೇಜ್ಗೆ ಬನ್ದ್ಮಲ್ ಫಿಗರ್, ಟೀನೇಜ್ ಅನ್ದಮ್ಲ್ ಪವರ್" ಎರಡು ಇಲ್ಲವೆನ್ದರೆ ಮಜನೆ ಇರಲ್ಲ. ಎಂದ. ಒಣಗಿದ ದೇಹ, ನೆಲಕ್ಕೆ ನೆಟ್ಟ ಕಂಬಕ್ಕೆ ಸುತ್ತಿದ ಬಟ್ಟೆಯ ಹಾಗೆ ತೊಟ್ಟ ಅಂಗಿ, ಆಬ್ಬರದಿಂದ ಬೀಸಿದರೆ, ಗಾಳಿಗೆ ಹಾರಿಹೋಗುವಂತೆ ಕಾಣುತಿದ್ದ, ಹಾಗಾಗಿ ಎಲ್ಲರು ಅವನನ್ನು "ಡೆಡ್ ಬಾಡಿ" ಎಂದು ಕೂಗುತಿದ್ದರು.
ನಿಂಬೆಕಾಯಿಪುರದ ನಿವಾಸಿಗಳಾದ ಇವರು, ಅವರ ಗ್ರಾಮದಲ್ಲಿದ್ದ ಸರ್ಕಾರಿ ಪಾಠಶಾಲೆಯಲ್ಲಿ ಹತ್ತನೇ ತರಗತಿಯನು ಮುಗಿಸಿದ್ದರು. ಪಟೇಲರು ಊರಿನ ಚೇರ್ಮೆನ್, ಅವರ ಹೆಸರು "ರಾಮ ಪಾಟಿಲ್". ಅವರು ಚೇರ್ಮೆನ್ ಆದ ನಂತರ ಅವರನ್ನು ಕಾಣಲು ಬರುತ್ತಿದ್ದ ಊರಿನ ಜನರು ಅವರ "ಪಾಟೀಲ್" ಹೆಸರಿಗೆ ರು' ಸೇರಿಸಿ ಕರೆಯುತಿದ್ದ ಕಾರಣ ಅವರ ಹೆಸರು "ಪಟೇಲರು" ಎಂದು ಕಾಯುಂ ಆಗಿ ಹೋಗಿತ್ತು. ಪಟೇಲರು ತಮ್ಮ ಗ್ರಾಮದಲ್ಲಿ ಉನ್ನತ ಶಿಕ್ಷಣ ಶಾಲೆ ನಿರ್ಮಿಸಲು ಮಂಜೂರಾತಿ ಕೇಳಿ ಬಹಳಷ್ಟು ಬಾರಿ ಸರ್ಕಾರದ ಮೆಟ್ಟಿಲು ಹತ್ತಿ ಇಳಿದರು ಪ್ರಯೋಜನವಾಗಲಿಲ್ಲ. ಉನ್ನತ ಶಿಕ್ಷಣ ಶಾಲೆ ಇಲ್ಲದ ಕಾರಣ ನಾಲ್ಕು ಜನ ಸ್ನೇಹಿತರು ಪಟ್ಟಣಕ್ಕೆ ಹೋಗಿ ಶಿಕ್ಷಣ ಮುಂದುವರಿಸ ಬೇಕಾಗಿತ್ತು, ಹಾಗಾಗಿ ಪಟ್ಟಣಕ್ಕ ಹೋಗುವ ತಿರ್ಮಾನಕ್ಕೆ ಬಂದಿದ್ದರು. ಇಂದಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಸಾರಿಸುವ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಂಡು ಬರುವ “ಪ್ರೀತಿ”, “ಪ್ರೇಮ” ಎಂಬ ವಿಷಯಗಳು ಇವರ ಮೇಲು ಬಹಳಷ್ಟು ಪ್ರಬಾವ ಬೀರಿದ್ದವು. ಪ್ರೀತಿಯ ಪರಿಚಯ ಮಾಡಿಕೊಳಬೇಕೆಂಬ ಬಯಕೆ ಇವರದ್ದು, ಹಾಗಾಗಿ ಪಟ್ಟಣದ ಉನ್ನತ ಶಿಕ್ಷಣಾ ಶಾಲೆಗೆ (ಕಾಲೇಜ್) ಹೋಗುವ ಮೊದಲೇ ತಮ್ಮ ಊರಿನ ಸುಂದರಿಯರಲ್ಲಿ ಒಬ್ಬರನ್ನು ಪ್ರೀತಿಸಿ ಅದರ ಅನುಭವದ ವಿಷಯಗಳನು ಅವಗತಿಸಿಕೊಂಡರೆ ಪಟ್ಟಣದ ಉನ್ನತ ಶಿಕ್ಷಣಾ ಶಾಲೆಯಲ್ಲಿ ಸುಂದರಿಯರನ್ನು ಪ್ರೀತಿಸುವುದು ಸುಲಬದ ವಿಷಯವಾಗುವುದು ಎಂಬ ತಿರ್ಮಾನಕ್ಕೆ ಬಂದಿದ್ದರು. ಇಂದಿನ ಯಾಂತ್ರಿಕ ಜೀವನದಲ್ಲಿ ಪ್ರೀತಿಯು ಒಂದು ವಸ್ತುವಿನ ವಿಷಯವಾಗಿದೆ. ಅದರ ನಿಜದ ಆರ್ಥ ತಿಳಿಯುವ ವಯಸ್ಸು ಹಾಗು ಅನುಭವ ಇವರಲ್ಲಿ ಇರಲಿಲ್ಲ.
"ಮಗ ನ್ಮಂ ಪಟೇಲರ ಮಗಳು ಸೂಪರ್ ಫಿಗರ್ ಮಗ" ಆಹಾ ಏನ್ ಚಂದ ಅಂತಿಯ, ನೆನ್ನೆ ಶಾಲೆಗೆ ಹೋಗೋವಾಗ ನೋಡಿ ಪ್ಲತಾಗ್ ಹೋದೆ, ನೆನ್ನೆ ಆವಳ ಹುಟ್ದಬ ಅಂತೆ ಯಾಕ್ ಹೇಳ್ತಿಯ ಮಗ ಆವಳ್ ಹಾಕಿದ್ದ ಡ್ರೆಸ್, ನನ್ನಾ..., ಬಿಡೋ ಮಗ ಅಂದ ಲಾಂಗ್ ಬಾಡಿ(ಕೆಂಚ). ಆಷ್ಟರಲ್ಲಿ "ಈ..." ಅಂತದ್ ಏನ್ ಹಾಕ್ಕೊಂಡ್ಲೋ, ಹುಟ್ದಬ ಅಂದ್ಮೇಲ್ ಹುಟ್ಟಿದಗ್ ಹೆಂಗಿದ್ಲೋ ಹಂಗೆನಾರ ಕಾನಿಸ್ಕೊಂದ್ಲೇನು ಎಂದು ಹಾಸ್ಯದ ಮಾತಾಡಿದ. ಅವನ ಮಾತಿಗೆ ಎಲ್ಲರ ಮುಖದಲ್ಲಿ ನಗೆ ಕಂಡರು ಅವಳು ಹೇಗೆ ಕಾನಿಸಿಕೊಳುತಿದ್ದಲೋ ತಿಳಿಯುವ ಕುತೂಹಲ. ಅದಕ್ಕೆ ಪ್ರತಿಯಾಗಿ ಲಾಂಗ್ ಬಾಡಿ, ನೆನ್ನೆ ನಿನ್ ಅವಲನ್ನ್ ನೋಡಿದ್ರೆ ಅಲ್ಲೇ ಶುರು ಮಾಡ್ತಿದ್ದೆ, ಎನ್ನ ಮಗ! ಆಂದ ಬನ್, ಥೋಥ್ತೆರಿ ನಿಂಗೆ ಯಾವಾಗಲೂ ಆದೆ ಚಿಂತೆ, ನಾ ಹೇಳಿದ್ದು ಪ್ರೀತಿ ಮಾಡ್ತಿದ್ದೆ ಅಂತ ಅಂದ ಲಾಂಗ್ ಬಾಡಿ. ಎಲ್ಲರ ಮುಖದಲ್ಲಿ ನಾಗೆ ಮೂಡಿತು. ಸರಿ ಬೇಗ ಬೊಗಳೂ ನಂಗ್ ಈಲ್ಲಿ ತಡೀಲಿಕಾಗ್ತಿಲ್ಲ ಎಂದ ಈ. ತಡೀಲಿಕಾಗ್ಲಿಲ ಅಂದ್ರೆ ಬೇಗ ಓಡು ಬೇಲಿ ಹಿಂದಕೆ ಇಲ್ಲೆನಾರ ಮಾಡ್ಗೀಡ್ ಬಿಟ್ಟಿಯ ಅಂದ ಲಾಂಗ್ ಬಾಡಿ, ತಕ್ಷಣ ಲಾಂಗ್ ಬಾಡಿ ಸೇರಿದಂತೆ ಮೂರು ಜನ ಸ್ನೇಹಿತರು ಜೋರಾಗಿ ನಗುತ್ತಾರೆ. ಸ್ನೇಹಿತನ ಮಾತಿಗೆ ಈ ಮುಖದಲ್ಲಿ ಸ್ವಲ್ಪ ಬೇಸರ ಕಂಡರೂ ಆದನ್ನು ವ್ಯಕ್ತ ಪಡಿಸದೇ, ಲೋ ಬೂಲಿಮಗನೆ ನಾ ಹೇಳಿದ್ದು ಆವಳ ಬಗ್ಗೆ ಹೇಳೋದು ತಡ ಮಾಡಿದ್ರೆ ನನ್ ಮಂಸು ತಡ್ಯಲ್ಲ ಅಂತ, ನಿನ್ ಆಜ್ಜಿ! ಅಂದ ಈ. ಸರಿ ಮಗ ಯಾಕ್ ಉರ್ಕೊತಿಯ, ಸರಿ ಹೇಳ್ತೀನಿ ಕೇಳು ಅಂತ ಅವಳ ಬಾಹ್ಯ ಸೌಂದರ್ಯದ ಪರಿಚಯ ಮಾಡಿಸಲು ತೊಡಗಿದ.
ಮುಂದೆ ಓದಿ...
- ಸಿ. ಎಸ್. ಬೊಗ್ಗವರ್ಪು