ಸಂ - ಸಾರ
ಕವನ
ನೀನು ಮರುಗದೆ
ನನ್ನ ಜೊತೆಗಿರೆ
ಪ್ರೇಮ ಸೊರಗಿದೆ ಹಳಿದೆಯೇತಕೆ
ಕನಸೆ ಬೀಳದು
ಎನುವ ಸುಳ್ಳನು
ಹೇಳಿ ಸಾಗುತ ಹೋದೆಯೇತಕೆ
ಬದುಕು ಅರ್ಥವ
ಕಳೆದು ನೊಂದಿದೆ
ಎನುತ ಅಳುತಿಹೆ ಯಾತಕಾಗಿಯೊ
ಬರೆದ ದೇವನ
ಕೇಳಲಾದಿತೆ
ಬಾಳ ಪಥದೊಳು ನೀನೆಯಿಲ್ಲವೆ
ಹಂಗಿನರಮನೆ
ಬೇಡವೆನ್ನುವೆ
ಸಾವು ಇರದಿಹ ಮನೆಯ ತೋರಿಸೆ
ದ್ವೇಷ ಜಯಿಸುತ
ಮುಂದೆ ಸಾಗಿರೆ
ಬಾಳ ಪಯಣದಿ ಎಲ್ಲ ಪ್ರೀತಿಯೆ
***
ವಿಮರ್ಶೆ
ಯಾವುದೇ
ವಿಷಯ
ಕೆದಕಿದರೂ
ಕಾಣುವುದು
ಎರಡೇ
ಎರಡು ಮುಖ
ಒಂದು ಅವನು !
ಇನ್ನೊಂದು
ಅವಳು !!
***
ತನಗ
ಉಪ್ಪರಿಗೆ ಮ್ಯಾಲಿನ
ಬದುಕು ಬ್ಯಾಡತಮ್ಮಾ
ನೆಲದಾಗೆ ಚಾಪೇಲೆ
ಮಲಗೋಣ ಅಮ್ಮಾ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
