ಸಕ್ಕದಮೋ ಕನ್ನಡಮೋ ನುಡಿಯೋ...
ಮೊನ್ನೆ ನಯಸೇನನ ಈ ಸಾಲುಗಳು ಕಣ್ಣಿಗೆ ಬಿತ್ತು:
ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಶುದ್ಧ ಕನ್ನಡದೊಳ್ ತಂ
ದಿಕ್ಕುವುದೆ ಸಕ್ಕದಂಗಳ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮುಮಂ
ಇದನ್ನು google buzz ನಲ್ಲಿ ಹಂಚಿಕೊಂಡಾಗ ಗೆಳೆಯ ಹಂಸಾನಂದಿ ಇಂತೆಂದರು. "True - for today we should also say the same thing about English!"
ಅಲ್ಲವೇ ಮತ್ತೆ? ಅಟ್ಟುವುದಾದರೆ ಸಂಸ್ಕೃತವೊಂದನ್ನೇ ಏಕೆ? ನಯಸೇನನ ಕಾಲದಲ್ಲಿ ಆಂಗ್ಲದ ಹಾವಳಿಯಿರಲಿಲ್ಲ. ಇದ್ದಿದ್ದರೆ ಅವ ಹೀಗೆ ಹೇಳಿರಬಹುದಿತ್ತೇ?
ಆಂಗಿಲಮಂ ಪೇೞ್ವೊಡೆ ನೆಱೆ
ಆಂಗಿಲಮನೆ ಪೇೞ್ಗೆ ಬೆರೆಸಿ ಕಿಡಿಸುವುದೇಂ ತಾ
ಮಂಗಳಮೆ ಚೊಕ್ಕ ಕನ್ನಡ
ಕಾಂಗಿಲಮಂ ತುಪ್ಪದೊಳಿರದೆಣ್ಣೆಬೆರೆಪವೋಲ್
ಮೊದಲು ಹೇಳಿದ ನಯಸೇನನ ಸಾಲುಗಳೂ ಮತ್ತು ಅದರ ಅಭಿಪ್ರಾಯಭೂತವಾಗಿ ನಾನು ಬರೆದ ಮೇಲಿನ ಸಾಲುಗಳೂ, ಸವಿಗನ್ನಡದಲ್ಲಿ ಕಟಕಟೆಯೆನಿಸುವಷ್ಟು ಅಸಹಜವಾಗಿ ಸಕ್ಕದ/ಆಂಗ್ಲಗಳನ್ನು ಬಳಸುವ ಬಗೆಗೆನ್ನುವುದು ಸ್ಪಷ್ಟ. ಆದರೆ ಸಕ್ಕದದ ಮೈಲಿಗೆಯಿಂದ ಕನ್ನಡವನ್ನೇ ಬುಡಮಟ್ಟ clean ಮಾಡಿಬಿಡಬೇಕೆನ್ನುವ ಇಂದಿನ ಅರ್ಥವಿಲ್ಲದ ಕೂಗಿಗೂ ಇವೇ ಸಾಲುಗಳು ಆಧಾರವಾದೀತಲ್ಲವೇ? ಈ ದಿಕ್ಕಿನಲ್ಲಿ ಯೋಚಿಸುತ್ತಿದ್ದಾಗ ಮೂಡಿದುವು ಈ ಕೆಳಗಿನ ಕಂದಗಳೈದು.
ಸಜ್ಜಿಗೆಗೆರೆಯದೆ ತುಪ್ಪಮ
ನೊಜ್ಜೆಯೊಳೇಂ ಮಜ್ಜಿಗೆಗೆರೆವರೆ ರುಚಿಯರಿಗರ್
ಮಜ್ಜನಕೆಣ್ಣೆಯನೆರೆಯದೆ
ಉಜ್ಜುವವೋಲ್ ತಲೆಗೆ ತುಪ್ಪಮನ್ ಸಕ್ಕರೆಯನ್ ೧
ಎಣ್ಣೆಯೆ ರುಚಿಯೋಗರಕೆನೆ
ಬೆಣ್ಣೆಯದರ ಸವಿಯನೆತ್ತದೇಂ ಕಿಡಿಸುಗುಮೇ
ಎಣ್ಣೆಯಬೆಣ್ಣೆಯ ಸವಿಯರಿ
ದುಣ್ಣುವರಸಿಗನ್ ರುಚಿವೆರಸುವನಡುಗೆಯದನ್ ೨
ನುಡಿಯೇಂ ಬರಿ ಪದಮೇ ಕ
ನ್ನಡವೊಟ್ಟಲ್ ಸಕ್ಕದಮದನಕ್ಕಜದೊಳೆ ಮುಂ
ಬಡಿದಟ್ಟಲ್ಕಾನುಡಿ ಕ
ನ್ನುಡಿಯಪ್ಪುದೆ ಮರುಳೆ ಕನ್ನಡಮದನೆ ಮರೆವಾ ೩
ಪದನರಿದುಲಿಯದೆ ಸವಿಯದೆ
ಪದವಿಡಿದಿದು ಸಕ್ಕದಮಿದು ಮೇಣ್ ಕನ್ನಡಮೆಂ
ದದರುೞಿವಿಡಿಯಲ್ ಕಬ್ಬದ
ಪದಗೆಟ್ಟೞಿಯದೆ ಪುೞಿವಿಡಿದೞಿಯುವಪಾಲೊಲ್ ೪
ನುಡಿಯೊಳನುಡಿತಕೆ ಗಮನಂ
ಗುಡುವನ್ ನಾದದೊಳನುನಯದಿ ಮನಂಗುಡುವನ್
ನುಡಿಯರಿಗನ್ ಗಮನಂಗಿಡೆ
ನುಡಿದರಿಗನದಂತರಿವುದು ನುಡಿಗದೆ ಲಕ್ಷ್ಯಂ ೫
Comments
ಉ: ಸಕ್ಕದಮೋ ಕನ್ನಡಮೋ ನುಡಿಯೋ...
In reply to ಉ: ಸಕ್ಕದಮೋ ಕನ್ನಡಮೋ ನುಡಿಯೋ... by ananthesha nempu
ಉ: ಸಕ್ಕದಮೋ ಕನ್ನಡಮೋ ನುಡಿಯೋ...
ಉ: ಸಕ್ಕದಮೋ ಕನ್ನಡಮೋ ನುಡಿಯೋ...
In reply to ಉ: ಸಕ್ಕದಮೋ ಕನ್ನಡಮೋ ನುಡಿಯೋ... by thesalimath
ಉ: ಸಕ್ಕದಮೋ ಕನ್ನಡಮೋ ನುಡಿಯೋ...
ಉ: ಸಕ್ಕದಮೋ ಕನ್ನಡಮೋ ನುಡಿಯೋ...
In reply to ಉ: ಸಕ್ಕದಮೋ ಕನ್ನಡಮೋ ನುಡಿಯೋ... by nagarathnavina…
ಉ: ಸಕ್ಕದಮೋ ಕನ್ನಡಮೋ ನುಡಿಯೋ...
ಉ: ಸಕ್ಕದಮೋ ಕನ್ನಡಮೋ ನುಡಿಯೋ...
In reply to ಉ: ಸಕ್ಕದಮೋ ಕನ್ನಡಮೋ ನುಡಿಯೋ... by kpbolumbu
ಉ: ಸಕ್ಕದಮೋ ಕನ್ನಡಮೋ ನುಡಿಯೋ...
ಉ: ಸಕ್ಕದಮೋ ಕನ್ನಡಮೋ ನುಡಿಯೋ...
In reply to ಉ: ಸಕ್ಕದಮೋ ಕನ್ನಡಮೋ ನುಡಿಯೋ... by ಆರ್ ಕೆ ದಿವಾಕರ
ಉ: ಸಕ್ಕದಮೋ ಕನ್ನಡಮೋ ನುಡಿಯೋ...