ಸಖಿಯ ಗಝಲ್
ಕವನ
ಸುರರ ರಮಣಿಯಾಗಿ
ಹೊಳೆಯುತಿರು ಸಖಿ||
ಸುಮದೊಳು ಸುರಭಿಯನು
ಹರಡುತಿರು ಸಖಿ||
ಸುಂದರ ತದ್ಯೋತದಿ
ಕಂಗೊಳಿಸಿ ನಗುತಿರುವೆ||
ಸೂರ್ಯನಿಗೆ ಶಿರವನ್ನು
ಮಣಿಯುತಿರು ಸಖಿ||
ಸುಲೋಚನ ಕನ್ನಿಕೆಯಾಗಿ
ಹೃದಯದಿ ಅವಿತಿರುವೆ||
ಸುಮಬಾಣದಿಂದ ನಲ್ಲನ
ಸೆಳೆಯುತಿರು ಸಖಿ||
ಸುಶ್ರಾವ್ಯ ಗೀತೆಯನು
ಒಲವಿನಲಿ ಹಾಡಿದೆ||
ಸುಗಮದ ಹಾದಿಯಲಿ
ನಡೆಯುತಿರು ಸಖಿ||
ಸುಲಕ್ಷಣ ಗುಣಗಳಿಂದ
ಅಭಿನವನ ಗೆದ್ದಿರುವೆ||
ಸುಹಾಸವ ಬೀರುತ
ಮೆರೆಯುತಿರು ಸಖಿ||
-*ಶಂಕರಾನಂದ ಹೆಬ್ಬಾಳ*
ಚಿತ್ರ್