ಸಖೀ

ಸಖೀ

ಕವನ

 ಕಪ್ಪೆ ಚಿಪ್ಪುಗಳಲಿ ಮೂಡಿರುವ ಗೆರೆಗಳ ಎಣಿಸುತಿರುವೆ ಸಖೀ

ಮರಳಲ್ಲಿ ಮೂಡಿದ ನಿನ್ನ ಮೌನದ ಭಾವನೆಗಳ ಹುಡುಕುತಿರುವೆ ಸಖೀ

 

ಕಿರಣಗಳ ಸ್ಪಶ೯ಕೆ ಮಿನುಗಿರುವ ಹೆಜ್ಜೆಗಳ ಕಂಡು ಪುಳಕಿತನಾಗಿ

ಮರಳಲ್ಲಿ ಮರುಳಾಗಿ ನಿನ್ನೆಜ್ಜೆಯ ಜೊತೆಯಾಗುತಿರುವೆ ಸಖೀ

 

ಮಳೆ ಬಂದು ಮುತ್ತಿಕ್ಕುವ, ತಂಗಾಳಿ ಬಂದು ತಬ್ಬುವ 

ಮೀನುಗಾರ ಬಲೆ ತಾಗಿಸುವ ಭಯಕೆ ತವಕದಿ ಕಾತರಿಸುತಿರುವೆ ಸಖೀ

 

ನನ್ನಿsss ಹೃದಯದ ಶಂಖು ಬಿಟ್ಟು ಬಿಡದೇ ಪ್ರೀತಿಯ ಮೊಳಗಿಸುತಿದೇ

ನನ್ನಾಸೆಯ ಬಣ್ಣಗಳಲಿ ನಿನ್ನ ಚಿತ್ರವನೆ ಬಿಡಿಸುತಿರುವೆ ಸಖೀ

 

ತಂಗಳು ಕನಸುಗಳ ತಿಂಗಳು ತಿಂಗಳು ಬಿಸಿ ಮಾಡುತಿರುವೆ

ಈ ಹೊಸ ವರುಶದಿ ನನಸಾಗುವುದೆಂದು ಕಾಯುತಿರುವೆ ಸಖೀ

 

ಕಪ್ಪೆ ಚಿಪ್ಪಲಿ ಮುತ್ತಾಗಿ ಮೂಡುವ ಹನಿ ತೆರದಿ `ಪ್ರಕಾಶ'ನ ಹೃದಯದಿ 

                                        ಕಪ್ಪೆಚಿಪ್ಪೊಳಗೊಂದು ಪ್ರೀತಿಯ ಹನಿಯಾಗಿ ಮೂಡುವಿಯೆಂದು ಮಿಡಿಯುತಿರುವೆ ಸಖೀ

 

 

 

ಪ್ರೇರಣೆ- ಪ್ರಜಾವಾಣಿಯಲ್ಲಿ ಸಾಪ್ತಾಹಿಕದಲ್ಲಿ ಪ್ರಕಟವಾದ ನಡೆದಸ್ಟು ನಾಡು ಅಂಕಣದ ಭಾವ ಚಿತ್ರ ನೋಡಿ-ದಿ.-೨೫-೧೨-೨೦೧೧

ಚಿತ್ರ ಕೃಪೆ- ಪ್ರಜಾವಾಣಿ

Comments