ಸಗ್ಗ ಸುಖ

ಸಗ್ಗ ಸುಖ

ಕವನ

ಏನಿದ್ದರೇನು
ಎಂತಿದ್ದರೇನು
ನಾನಳಿವತನಕ

ನಾನಾ ನಾನುಗಳು
ನನ್ನ ತುಂಬಿರಲು
ನಾನಳಿವುದೆಂತು
ನಾನಳಿಯದೆ
ನನ್ನುಳಿವದೆಂತು

ಎಲ್ಲ ನಾನಾವರಿಸಿ
ಎಲ್ಲ ನಾನಾಗಿರೆ
ನಾಕವೆಲ್ಲಿಹುದು?
ಬರೀ ನರಕ !

ನಾನಳಿದು ನಾವಾಗೆ
ನಾವೆಲ್ಲ ಒಂದಾಗೆ
ನಮಗಾಗ ಸಗ್ಗಸುಖ

************

Comments