ಸಚಿನ್ ತೆಂಡೂಲ್ಕರ್.....
ಬರಹ
ಸಚಿನ್ ತೆಂಡೂಲ್ಕರ್.....
ಕ್ರಿಕೆಟ್ ನ ಆನಂದದ
ನಿಜವಾದ ಸ್ಪೂರ್ತಿ ಯೇ ಸಚಿನ್...
ಕ್ರಿಕೆಟ್ ಜಗತ್ತಿನ ವಿಕ್ರಮಗಳ
ನಿಜವಾದ ರಾಜನೇ ಸಚಿನ್...
ಸಹನೆ, ವಿನಯಶೀಲಗಳ
ದ್ಯೋತಕವೇ ಸಚಿನ್...
ಶೇನ್ ವಾರ್ನ್ ಗೆ ನಿದ್ರೆಯಲ್ಲೂ
ಘಾತಕವಾಗಿ ಕಾಡುವವನೇ ಸಚಿನ್...
ಕೇವಲ ರನ್ನುಗಳೆ ಅಲ್ಲ
ರನ್ನುಗಳ ಮಷಿನ್ ಸಚಿನ್...
ಆಟಗಾರರು ಹೇಗಿರಬೇಕು
ಎಂಬ ಮಂತ್ರವೇ ಸಚಿನ್...
ತರುಣ ಕ್ರಿಕೆಟಿಗರ
ದೇವನೇ ಸಚಿನ್...
ವರ್ಣನೆಗೆ ಶಬ್ದಗಳಿಗೆ
ನಿಲುಕದಿರುವವನೇ ಸಚಿನ್...