ಸಚಿನ್ ತೆಂಡೂಲ್ಕರ್...

ಸಚಿನ್ ತೆಂಡೂಲ್ಕರ್...

ಬರಹ

ಸಚಿನ್ ತೆಂಡೂಲ್ಕರ್...

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಗಳ ಸರದಾರ ಸಚಿನ್ ತೆಂಡೂಲ್ಕರ್...

ಬ್ರಯಾನ್ ಲಾರ (೧೧೯೫೩) ದಾಖಲೆಯನ್ನು ಮುರಿದ ಸಚಿನ್ ತೆಂಡೂಲ್ಕರ್...

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬ್ರಯಾನ್ ಲಾರ ಅವರ ದಾಖಲೆಯನ್ನು ಮುರಿದು ಸಚಿನ್ ತೆಂಡೂಲ್ಕರ್ ಈಗ ಅತಿ ಹೆಚ್ಚು ರನ್ ಗಳ ಸರದಾರರಾಗಿದ್ದಾರೆ... ಟೆಸ್ಟ್ ಇತಿಹಾಸದಲ್ಲಿ ೧೨೦೦೦ ರನ್ ಗಳನ್ನು ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ... 

ಈ ದಾಖಲೆಯನ್ನು ಮುರಿದದ್ದು ಮೊಹಾಲಿ, ಪಂಜಾಬ್ ನಲ್ಲಿ.

ಇಂದು ಮಧ್ಯಾಹ್ನ ಸಚಿನ್ ಮೈದಾನದೊಳಕ್ಕೆ ಬಂದಾಗ ಅವರಿಗೆ ಹದಿನೈದು ರನ್ ಗಳ ಅವಶ್ಯಕತೆ ಇತ್ತು.

ಈ ದಾಖಲೆಯನ್ನು ಸಚಿನ್ ಚಹಾ ವಿರಾಮದ ನಂತರ ಆಸ್ಟ್ರೇಲಿಯಾದ ಬೌಲರ್ ಪೀಟರ್ ಸಿಡ್ಡ್ಲ್ ಮಾಡಿದ ಮೊದಲ ಎಸೆತದಲ್ಲಿ ಮುರಿದರು.
ಏಕ ದಿನ ಪಂದ್ಯಗಳಲ್ಲಿ ಸಚಿನ್ ಸುಮಾರು ೧೬೦೦೦ ಕ್ಕೂ ಹೆಚ್ಚು ರನ್ ಗಳನ್ನು ಗಳಿಸಿದ್ದಾರೆ.

ಅತಿ ಹೆಚ್ಚು ಶತಕಗಳನ್ನು ಬಾರಿಸಿರುವ ಹೆಗ್ಗಳಿಕೆ ಕೂಡ ಸಚಿನ್ ಅವರದ್ದು...

ಟೆಸ್ಟ್ ನಲ್ಲಿ ೩೯ ಶತಕಗಳು, ಏಕ ದಿನ ಪಂದ್ಯಗಳಲ್ಲಿ ೪೨ ಶತಕಗಳು...

 

ಚಿತ್ರ: ಇಂಟರ್ನೆಟ್ ಮೂಲಕ ಡೌನ್ ಲೋಡ್ ಮಾಡಿದ್ದು...