ಸಚಿನ್ ರಮೇಶ್ ತೆಂಡೂಲ್ಕರ್
ಸಚಿನ್ ರಮೇಶ್ ತೆಂಡೂಲ್ಕರ್, ಬಹುಷಃ ಈ ಹೆಸರನ್ನು ಕೇಳದೆ ಇರುವವರು ಯಾರೂ ಇರುವುದಿಲ್ಲ. ಈ ಹೆಸರೇ ಕ್ರಿಕೆಟ್ ಪ್ರೇಮಿಗಳಲ್ಲಿ ಒಂದು ರೀತಿಯ ರೋಮಾಂಚನ ಉಂಟು ಮಾಡುವುದು. ೧೯೮೯ ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಈ ವಾಮನ ಮೂರ್ತಿ ಇಪ್ಪತ್ತು ವರ್ಷಗಳ ನಂತರ ಈ ಮಟ್ಟಕ್ಕೆ ಬೆಳೆಯಬಹುದು ಎಂದು ಬಹುಷಃ ಯಾರೂ ಎಣಿಸಿರುವುದಿಲ್ಲ. ಇಂದು ಭಾರತದಲ್ಲಿ ಕ್ರಿಕೆಟ್ ಎಂಬುದು ಒಂದು ಜಾತಿ ಎಂದು ಆದರೆ ಅದಕ್ಕೆ ಸಚಿನ್ ದೇವರು ಎಂಬ ಮಾತಿದೆ.
ಇಪ್ಪತ್ತು ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಆತನ ಸಾಧನೆ ಅಮೋಘ. ಮೂವತ್ತೇಳರ ಹರೆಯದ ಸಚಿನ್ ಈಗಲೂ ಮೈದಾನಕ್ಕೆ ಇಳಿದರೆ ಇಪ್ಪತ್ತರ ಹರೆಯದವರು ನಾಚುವಂತೆ ಆಟ ಆಡುತ್ತಾನೆ. ಅದು ಐದು ದಿನ ಟೆಸ್ಟ್ ಪಂದ್ಯವಾಗಿರಬಹುದು, ಒಂದು ದಿನದ ಪಂದ್ಯವಾಗಿರಬಹುದು ಎಲ್ಲದರಲ್ಲೂ ಸಚಿನ್ ಸೈ. ಒಂದು ದಿನದ ಪಂದ್ಯಗಳಲ್ಲಿ ೧೭೦೦೦ ರನ್ ಗಳು, ಟೆಸ್ಟ್ ಪಂದ್ಯಗಳಲ್ಲಿ ೧೪೫೦೦ ರನ್ ಗಳು ಸಾಧಿಸಿರುವ ಸಚಿನ್ ರ ಸಾಧನೆ ಶ್ಲಾಘನೀಯ. ಒಂದು ದಿನದ ಪಂದ್ಯದಲ್ಲಿ ೨೦೦ ರನ್ ಬಾರಿಸಿದ ಪ್ರಪ್ರಥಮ ಆಟಗಾರ ಸಚಿನ್.
ಇನ್ನು ಸಚಿನ್ ರ ಸಾಧನೆಗಳ ಬಗ್ಗೆ ಬಂದರೆ ಪ್ರಸ್ತುತ ಆತನ ಸಾಧನೆಯನ್ನು ಸರಿಗಟ್ಟುವಂತ ಸಾಮರ್ಥ್ಯ ಇರುವ ಆಟಗಾರರು ಯಾರೂ ಇಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ದ ಪಾಂಟಿಂಗ್ ಸನಿಹದಲ್ಲಿದ್ದರೂ ಇತ್ತೀಚಿನ ಆತನ ಫಾರಂ ಕಳಪೆಯಾಗಿದೆ. ನೆನ್ನೆಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಐವತ್ತು ಟೆಸ್ಟ್ ಶತಕಗಳನ್ನು ದಾಖಲಿಸಿದ ಮೊದಲಿಗ sachinಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಇನ್ನು ಒಂದು ದಿನದ ಪಂದ್ಯಗಳಲ್ಲಿ ಐವತ್ತು ಶತಕಕ್ಕೆ ಕೇವಲ ೪ ಶತಕಗಳು ಬಾಕಿ ಇವೆ. ಬ್ಯಾಟಿಂಗ್ ನಲ್ಲಿ ಆತನಿಗೆ ಉಳಿದಿರುವ ಒಂದೇ ದಾಖಲೆ ಎಂದರೆ ಬ್ರಯಾನ್ ಲಾರ ಅವರ ೪೦೦ ರನ್ ಗಳು. ಇಷ್ಟಾಗಿಯೂ ಸಚಿನ್ ಟೀಕೆಗಳ ಹೊರತಾಗಿಲ್ಲ. ಆದರೆ ಟೀಕೆಗಳು ಬಂದಷ್ಟೂ ಆತ ಇನ್ನೂ ಬಲವಾಗುತ್ತ ಪಕ್ವವಾಗುತ್ತಿದ್ದಾನೆ. ಆಧುನಿಕ ಕ್ರಿಕೆಟ್ ನ ಬ್ರಾಡ್ಮನ್ ಸಚಿನ್ ತೆಂಡೂಲ್ಕರ್.
ಇನ್ನೇನು ಎರಡು ತಿಂಗಳುಗಳಲ್ಲಿ ವಿಶ್ವಕಪ್ ಸನಿಹದಲ್ಲಿದೆ. ಬಹುಷಃ ಸಚಿನ್ ರ ಕೊನೆಯ ವಿಶ್ವಕಪ್ ಇದಾಗಬಹುದು. ಈ ವಿಶ್ವಕಪ್ ನಲ್ಲಿ ಸಚಿನ್ ಅದ್ಭುತ ಸಾಧನೆ ನೀಡಿ ಭಾರತಕ್ಕೆ ವಿಶ್ವಕಪ್ ದೊರಕಿಸುವಲ್ಲಿ ಸಹಾಯವಾದರೆ ಆತನ ಕ್ರಿಕೆಟ್ ಜೀವನ ಸಾರ್ಥಕವಾದಂತೆ. ಕೋಟ್ಯಾಂತರ ಅಭಿಮಾನಿಗಳ ಆಸೆಯೂ ಇದೆ ಆಗಿದೆ.
Comments
ಉ: ಸಚಿನ್ ರಮೇಶ್ ತೆಂಡೂಲ್ಕರ್
In reply to ಉ: ಸಚಿನ್ ರಮೇಶ್ ತೆಂಡೂಲ್ಕರ್ by manju787
ಉ: ಸಚಿನ್ ರಮೇಶ್ ತೆಂಡೂಲ್ಕರ್
In reply to ಉ: ಸಚಿನ್ ರಮೇಶ್ ತೆಂಡೂಲ್ಕರ್ by Jayanth Ramachar
ಉ: ಸಚಿನ್ ರಮೇಶ್ ತೆಂಡೂಲ್ಕರ್
In reply to ಉ: ಸಚಿನ್ ರಮೇಶ್ ತೆಂಡೂಲ್ಕರ್ by manju787
ಉ: ಸಚಿನ್ ರಮೇಶ್ ತೆಂಡೂಲ್ಕರ್
ಉ: ಸಚಿನ್ ರಮೇಶ್ ತೆಂಡೂಲ್ಕರ್
In reply to ಉ: ಸಚಿನ್ ರಮೇಶ್ ತೆಂಡೂಲ್ಕರ್ by kamalap09
ಉ: ಸಚಿನ್ ರಮೇಶ್ ತೆಂಡೂಲ್ಕರ್
ಉ: ಸಚಿನ್ ರಮೇಶ್ ತೆಂಡೂಲ್ಕರ್
In reply to ಉ: ಸಚಿನ್ ರಮೇಶ್ ತೆಂಡೂಲ್ಕರ್ by gopaljsr
ಉ: ಸಚಿನ್ ರಮೇಶ್ ತೆಂಡೂಲ್ಕರ್