ಸಜ್ಜನ ಪ್ರಧಾನಿಗೆ ಜನಮತ

ಸಜ್ಜನ ಪ್ರಧಾನಿಗೆ ಜನಮತ

ಬರಹ

"ಮಣ ಮಾತಿಗಿಂತ ತೊಲ ಕೆಲಸ ಲೇಸು"- ಪ್ರಾಯಶ: ಇದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಕಾರ್ಯ ವೈಖರಿ. ತನ್ನ ಕೆಲಸವನ್ನು ಸದ್ದಿಲ್ಲದೆ ಮಾಡುವ ಸಿಂಗ್, ರಾಜಕೀಯದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಶುದ್ಧ ಹಸ್ತ,ಸರಳತೆ,ಸಜ್ಜನಿಕೆ,ಕೆಲಸದಲ್ಲಿ ನಿಷ್ಠೆ ಮನಮೋಹನ್ ಸಿಂಗ್ ಅವರ ವೈಖರಿ.

ಜವಾಹರ್ ಲಾಲ್ ನೆಹರೂ ನಂತರ ಐದು ವರ್ಷದ ಪೂರ್ಣಾವಧಿ ಮುಗಿಸಿಯೂ,ಮತ್ತೆ ಪ್ರಧಾನಿಯಾಗುವತ್ತ ಮುನ್ನಡೆದಿರುವ ಮನಮೋಹನ್ ಸಿಂಗ್ ಅವರು ದುರ್ಬಲ ಪ್ರಧಾನಿ ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಅನಗತ್ಯವಾಗಿ ಮಾತಿನಾಡದೆ, ತನ್ನ ಪರಿಧಿಯಲ್ಲಿ ಸಾಧ್ಯವಾಗುವುದನ್ನು ಮಾಡುವ ಪರಿಯನ್ನು ದೌರ್ಬಲ್ಯವೆಂದು ಹೇಳುವುದೇಕೋ? 

manamohan

ಅಮೆರಿಕಾದ ಜತೆ ಅಣು ಒಪ್ಪಂದ ಮಾಡಿಕೊಳ್ಳಲು ಅವರು ತೆಗೆದು ಕೊಂಡ ಅಭೂತಪೂವ ನಿರ್ಧಾರ ಮನಮೋಹನ್ ದುರ್ಬಲ ವ್ಯಕ್ತಿ ಅಲ್ಲ ಎನ್ನುವುದಕ್ಕೆ ಸಾಕ್ಷಿ. ಬಹುಮತದ ನಂತರ ಇನ್ನು ತನ್ನ ಇಚ್ಛೆಯಂತೆ ಸರಕಾರ ಮುನ್ನಡೆಸಲು ಪ್ರಧಾನಿ ಯಶಸ್ವಿಯಾಗಲಿ.

prakash

(ಪ್ರಕಾಶ್ ಶೆಟ್ಟಿ)

ಮನಮೋಹನ್ ಸಿಂಗ್

ಸಂಸತ್‌ಗೆ ಸ್ಪರ್ಧಿಸದ ಅವರ ನಿರ್ಧಾರ ಟೀಕೆಗೊಳಗಾದರೂ, ಈಗದು ಅಪ್ರಸ್ತುತವಾಗಿದೆಯಿಲ್ಲವೇ?