ಸಣ್ಕತೆ- *ಅಪ್ಪ ಅಂದರೆ ಆಕಾಶ*

ಸಣ್ಕತೆ- *ಅಪ್ಪ ಅಂದರೆ ಆಕಾಶ*

ಹನ್ನೆರಡು ವರ್ಷದ ಬಾಲೆ ಕೀರ್ತಿ. ಒಂದು ದಿನ ಮುಂಜಾನೆ ಫೋನಾಯಿಸಿದವಳು, ಗೋಳೋ ಎಂದು ಅಳುತ್ತಿದ್ದಳು. "ಏನು ಹೇಳು? ಯಾಕೆ ಅಳುತ್ತಿರುವೆ ಮಗಳೇ?"ಎಂದು ಕೇಳಿದೆ.

ಮೇಡಂ,"ನೀವು 'ಕುಡಿಯುವುದು ಕೆಟ್ಟ ಅಭ್ಯಾಸ ಎಂದು ಪಾಠ ಮಾಡುವಾಗ ಹೇಳ್ತಾ ಇದ್ರಲ್ಲ "ನಾನದನ್ನು ತುಂಬಾ ಸಲ ಮನೆಯಲ್ಲಿ ಹೇಳ್ತಾ ಇದ್ದೆ. ಈಗ ನೋಡಿ ಏನಾಯ್ತು ", ಕುಡಿದು ಗಾಡಿ ಓಡಿಸುತ್ತಿದ್ದ ನನ್ನ ತಂದೆ ಅಪಘಾತವಾಗಿ ಇನ್ನಿಲ್ಲ. ಮೇಡಂ. ನನಗೆ ಆಘಾತವಾದರೂ, ಪುಟ್ಟ ಮಗುವಿನ ಹತ್ತಿರ ತೋರ್ಪಡಿಸಲಿಲ್ಲ.

ಮೇಡಂ, "ನೀವು  ಮೌಲ್ಯ ಶಿಕ್ಷಣದಲ್ಲಿ ಹೇಳಿದ್ದೀರಲ್ಲ, ತಂದೆ ತಾಯಿ ದೇವರು, ನಮಗೆ ಬೇಕಾಗಿ ಕಷ್ಟ ಪಡ್ತಾರೆ, *ಅಪ್ಪ ಅಂದರೆ ಆಕಾಶ* ಎಂಬುದಾಗಿ. ಈಗ  ಅವರೇ ಇಲ್ಲ, ನಾನೇನು ಮಾಡಲಿ?  ಸಮಾಧಾನ ಪಡಿಸಿದೆ. ಆ ಹೆಣ್ಣು ಮಗುವಿನ ಮಾತು ಕೇಳಿ ಕಣ್ಣಿಂದ ಹನಿ ತೊಟ್ಟಿಕ್ಕಿತು.

-ರತ್ನಾ ಕೆ.ಭಟ್, ತಲಂಜೇರಿ