ಸಣ್ಗವನಗಳು ಎನ್ನಬಹುದೇ?
ಬರಹ
ಸಾಲು!
ಹೃದಯದೊಳಿಹುದು ಪ್ರೇಮಜ್ವಾಲೆ,
ಕನಸಿನಲಿ ಪ್ರೇಮ ಮಾಲೆ,
ಬಾಳೆಂಬ ಜಟಿಲದಲ್ಲಿ ಸಂಕೋಲೆ,
ಇಹುದು ಬರಿ ಕವಿಯ ಸಾಲೆ ಸಾಲೆ!
ಸವಿದೊದಲು
ಚಮ್ಮಚ ಪಂಪವಾಗಿ,
ಗಡಿಯಾರವು ದೈದಾದವಾಗಿ,
ಲೈಟೂ ದೈಟಾಗಿ,
ನಿನ್ನೀ ನುಡಿ ಹೊಮ್ಮಿತು ಮುತ್ತಾಗಿ!
ಚಂದಾಮಾಮನು ಪಮ್ಮಾಮನಾಗಿ,
ಸಿಂಹವೂ ಪಿಮ್ಮವಾಗಿ,
ಪುಸ್ತಕವು ಪುಕ್ಕವಾಗಿ,
ನಿನ್ನೀ ನುಡಿ ಹೊಮ್ಮಿತು ಮುತ್ತಾಗಿ!
ಧೊನೀ ನೊಣಿಯಾಗಿ
ದೀಪವೂ ಬೀಪವಾಗಿ,
ಎಲ್ಲ ತರಕಾರಿ ಕ್ಯಾರೆಟ್ಟಾಗಿ,
ನಿನ್ನೀ ನುಡಿ ಹೊಮ್ಮಿತು ಮುತ್ತಾಗಿ,
ಪೇರಿಸಿದ ಮಾತಿನ ಹಾರವಾಗಿ!
ಎರೆದೆ
ಓಲೆ ಬರೆದೆ ಒಲಿದವಳಿಗೆ,
ನಿನ್ನ ಸೃಷ್ಟಿ ಅಧ್ಬುತ ಎಂದೆ,
ಧಾರೆ ಎರೆದೆ ಧರಣಿಗೆ,
ನಿನ್ನ ಸೃಷ್ಟಿ ಧನ್ಯ ಎಂದೆ!
ಆಗದು
ಉರಿಯುವ ದೀಪ ಕೈಲಿ, ದಾರಿ ಕಾಣದು!
ತುಂಬಿದ ಕೊಡ ಕೈಲಿ, ದಾಹ ತೀರದು!
ಶಾಂತಿ ಕಲಕುವ ನಗು ಮೊಗದಲಿ, ನೆಮ್ಮದಿ ತೋರದು!
ಮೋಡ ಗುಡುಗುವ ಧ್ವನಿ ಕಂಟದಲಿ, ಮಾತು ಹೊರಡದು!
ಆಳದ ಕೂಗು ಹೇಳಿತು ಮನದಲಿ, ನೀನಿಲ್ಲದೇ ಏನೂ ಆಗದು!
ಏನು ಹೇಳಲಿ
ಜೀವನ ಉತ್ತುಂಗಕ್ಕೇರಿ,
ಸಾಕ್ಷಾತ್ಕಾರದ ಕದ ತಟ್ಟಿ,
ಮುಂದೇನು ಹೇಳಲಿ ಎಂದಾಗ,
ನಿನ್ನ ಹೆಸರು ಹೇಳಿತು !!