ಸಣ್ಣ ಕಥೆ- ಹಿಂಬಾಲಕರು

ಸಣ್ಣ ಕಥೆ- ಹಿಂಬಾಲಕರು

ವಾರದ ಹಿಂದಿನಿಂದಲೇ ಅವನಿಗೆ ಒಂದಷ್ಟು ಬಿಡುವಿಲ್ಲ. ಜನರನ್ನು ಒಗ್ಗೂಡಿಸಬೇಕು. ಬ್ಯಾನರ್ ಬರೆಸಬೇಕು. ಫಲಾಹಾರ  ವ್ಯವಸ್ಥೆ ಆಗಬೇಕು. ದಿನಕೂಲಿ ಕೆಲಸದ ಮನೆಯವರು ಬೇರೆ ಜನ ನೋಡಿರಬೇಕು ಇವನನ್ನು ಕಾದು!                                                                                                                                                     

ಈ ಸಲದ್ದು ಮಾತ್ರ ಭರ್ಜರಿ ಪ್ರಚಾರ. ಕೇಂದ್ರ ಸಚಿವರ ಆಗಮನ ಎಂದರೆ ಸುಮ್ಮನೆಯೇ....ಅಂತೂ ಆ ದಿನ ಬಂದೇ ಬಿಟ್ಟಿತು. ಅದ್ದೂರಿ ವೇದಿಕೆ ಮೇಲೆ ಅತಿಥಿಗಳ ತಲೆಕೂದಲು ಮಾತ್ರ ಕಂಡಿತು ದೂರದಲ್ಲಿ ನಿಂತ ಇವನಿಗೆ. ಅಲ್ಲಿವರೆಗೆ ವ್ಯಾಪಾರ ವ್ಯವಹಾರ ಅಂತ ಬಿಡುವಿಲ್ಲದೆ ದುಡೀತಿದ್ದ ಊರಿನ ಪ್ರಮುಖ ಬಿಳಿಯಾನೆ ಹಿಂಡುಗಳು ಕೈಕುಲುಕುವದನ್ನು ಕಂಡು ಕಣ್ಣು ತುಂಬಿಕೊಂಡ. ಈ ಸಲ ಗೆಲುವು ಗ್ಯಾರಂಟಿ.

-'ಪದ್ಮ' ಬೆಂಗಳೂರು

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ