ಸಣ್ಣ ಹನಿಗಳು
ಕವನ
ವಿಶ್ವ ಪರಿಸರ
ವಿಶ್ವ ಪರಿಸರ
ಉಸಿರು ನೀಡುವ
ಗಿಡ ನೆಡಬೇಕು
ಪ್ರಕೃತಿ ಮಾತೆ
ಹಸಿರು ಹೊದಿಕೆ
ಹೊದೆವಂತಿರಬೇಕು.
***
ಪ್ರಚಾರ
ಸಸಿ ನೆಟ್ಟರು
ಭಾವಚಿತ್ರ ತೆಗೆದರು
ಅಂತರ್ಜಾಲದಲಿ
ಪ್ರಚಾರ ಗಿಟ್ಟಿಸಿದರು.
***
ಆರಂಭ
ಮನೆಯಿಂದಲೇ
ಆರಂಭವಾಗಲಿ
ಸ್ವಚ್ಛತೆಯ ಪಾಠ.
***
ನಳನಳಿಸು
ಮನದ ಕೊಳೆ
ತೊಲಗಲಿ
ಗಿಡ ಬೆಳೆದು
ನಳನಳಿಸಲಿ.
***
ಸಲಹು
ಮನೆಯ ಸುತ್ತ
ಗಿಡ ನೆಡು
ಹಾಕುತಲಿರು
ನೀರು ಗೊಬ್ಬರ.
***
ತಾಯಿನಾಡು
ಗಿಡ ನೆಡು
ಉಸಿರ ನೀಡು
ಹಸಿರ ಬೀಡು
ತಾಯಿ ನಾಡು.
***
ಸ್ವಚ್ಛತೆಯ ಅರಿವು
ತ್ರಿವಳಿ ಅಪಾಯಗಳ
ಆಹ್ವಾನಿಸದಿರೋಣ
ಜಲ ವಾಯು ಪರಿಸರ
ಮಾಲಿನ್ಯ ಎಸಗದಿರೋಣ
ಅಳಿಲ ಸೇವೆಯಲಿ
ಸಂತಸ ಪಡೋಣ
ಸ್ವಚ್ಛತೆಯ ಅರಿವನು
ಎಲ್ಲೆಡೆ ಹರಿಸೋಣ
***
ಹಳತು-ಹೊಸದು
ಹಳತು ಗಿಡ
ಹೊಸತು ಆಲೋಚನೆ
ಭರ್ಜರಿ ಪ್ರಚಾರ
ಚಪ್ಪಾಳೆಯ ಪ್ರವಾಹ
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
