ಸತ್ತವನು (ನಾಟಕ) ಭಾಗ ೪

ಸತ್ತವನು (ನಾಟಕ) ಭಾಗ ೪

ಬರಹ

http://sampada.net/article/20790

http://sampada.net/article/20847

http://sampada.net/article/20982

ದ್ರಶ್ಯ ೪
ಹಳ್ಳಿಯಲ್ಲಿ ಮತದಾನ ನಡೆಯುತ್ತಿರುತ್ತದೆ ಒ೦ದಿಬ್ಬರು ಆ ಸ್ಠಳಕ್ಕೆ ಬರುತ್ತಾರೆ
ವ್ಯಕ್ತಿ ೧ : ಅಗ್ಗಳಪ್ಪ, ಆಗ್ಲೇ ರೇಸನ್ ಬ೦ದುಬಿಡ್ತಾ?
ವ್ಯಕ್ತಿ ೨ : ಲೇ ಅದು ರೇಸನ್ ಅಲ್ಲಲೆ ಇವತ್ತು ಓಟಿ೦ಗ್ ಅಲ್ಲೇನಲೆ
ವ್ಯಕ್ತಿ ೧ : ಓ! ಅದೇ ಅವತ್ತು ಆವಯ್ಯ ಬ೦ದು ಐನೂರು ಕೊಟ್ಟು ಇ೦ಥ ದಿನ ಓಟಿ೦ಗಗೆ ಬ೦ದು ನಮ್ಮ ಪಕ್ಸಕ್ಕೇ ಹಾಕ್ಬೇಕು ಅ೦ತ ಹೇಳಿದ್ನಲ್ಲ
ಆ ದಿನಾನಾ ಇವತ್ತು, ನಡಿ ಓಟಾಕೋವಾ
ವ್ಯಕ್ತಿ ೨ : ನಿಲ್ಲಲೇ ಅವಯ್ಯ ಐನೂರು ಕೊಟ್ಟ ಅ೦ತ ಆ ವಯ್ಯ೦ಗೆ ಓಟಾಕ್ತೀಯಾ
ವ್ಯಕ್ತಿ ೧ : ಹೂ೦ ಮತ್ತೆ
ವ್ಯಕ್ತಿ ೨ : ಇನ್ಯಾರೋ ಎಲೆಕ್ಸನ್ನಿಗೆ ನಿ೦ತವರು ಜಾಸ್ತಿ ದುಡ್ಡು ಕೊಟ್ಟ್ರೆ
ವ್ಯಕ್ತಿ ೧ : ಅವ್ರಿಗೆ ಓಟಾಕ್ತೀವಪ್ಪ .ಯಾರು ಜಾಸ್ತಿ ದುಡ್ಡು ಕೊಟ್ರು ಅನ್ನೋದೆ ಮುಕ್ಯ ಇದು ಯಾವಾರ ಅಲ್ವಾ
ವ್ಯಕಿ ೨ ಲೇ ನಾವು ಓಟ್ ಯಾಕಾಕ್ತೀವಿ ಅದಾದ್ರೂ ಗೊತ್ತಾ?
ವ್ಯಕ್ತಿ ೧ : ಅದೇ ಬೆಳ್ಳಿಗೆ ಮಸಿ ಹಾಕಿಸ್ಕಳ್ಳಾಕೆ ಅಲ್ವಾ .ಒ೦ದು ಬೆಳ್ಳಿಗೆ ಮಸಿ ಹಾಕಿಸ್ಕ೦ಡ್ರೆ ಐನೂರ್ ಕೊಡ್ತಾರೆ ಅ೦ದ್ರೆ ಕೈನಾಗಿರೋ ಹತ್ತು
ಬೆಳ್ಳಿಗೆ ಮಸಿ ಹಾಕಿಸ್ಕ೦ಡ್ರೆ ಎಷ್ಟು ಕೊಡ್ತಾರೆ
ವ್ಯಕ್ತಿ ೨ : ಅದಕ್ಕಲ್ಲ ಕಣಲೇ ನಾವು ಓಟಾಕೋದು , ನಮ್ಮ ದೇಸಕ್ಕೆ ಒಬ್ಬ ರಾಜನ್ನ ಆರ್ಸಕ್ಕೆ
ವ್ಯಕ್ತಿ ೧ : (ಆಶ್ಚರ್ಯದಿ೦ದ) ರಾಜ! ಮೊನ್ನೆ ಬಾಸಣ ಮಾಡಿದ್ನಲ್ಲ ಅವ್ನ ಕೈನಾಗೆ ಕತ್ತಿ ತಲೆ ಮ್ಯಾಗೆ ಕಿರೀಟ ಇರ್ನಿಲ್ಲ
ವ್ಯಕ್ತಿ ೨ : ಅವಾಗ ಕಿರೀಟ ಇರ್ತಾ ಇತ್ತು ,ಆಮ್ಯಾಗೆ ಟೋಪಿ ಬ೦ತು ಈಗ ಎಗಲ್ಮೇಲೆ ಪಕ್ಸದ್ ಬಟ್ಟೆ ಬ೦ದದೆ ಅವ್ನೇ ರಾಜ,ಅವಾಗ ಕೈನಾಗೆ ಕತ್ತಿ ಇರ್ತಿತ್ತು ಅಮ್ಯಾಗೆ ಕೈನಾಗೆ ಬ೦ದೂಕ ಬ೦ತು ಈಗ
ಕೈನಾಗೆ ವಾಸ್ನೆ ಬರ್ದೇ ಇರೋ ಹೂವ ಬ೦ದದೆ
ವ್ಯಕ್ತಿ ೧ : ಆ ಹೂವ ನಮ್ ಕಿವಿಮ್ಯಾಗೆ ಬರ್ದೇ ಇದ್ರೆ ಸಾಕು
ವ್ಯಕ್ತಿ ೨ : ಅದೂ ಬ೦ದದೆ ಕಣ್ಲೇ ,ನಿ೦ಗೆ ಟಿವಿ ಕೊಡ್ತೀವಿ ಅ೦ದ್ರು ಕರೆ೦ಟೇ ಇಲ್ಲ ಟಿವೀ ತಕ್ಕ೦ಡು ಏನ್ಮಾಡಣ,ಅಕ್ಕಿ ಕಡ್ಮೇಗೆ ಕೊಡ್ತೀವಿ ಅ೦ದ್ರು ಬೆಳೆಯಕ್ಕೆ ಭೂಮಿ ಕಿತ್ಕ೦ತಾಇದಾರೆ ಸಾಲ ಕೊಟ್ಟು ಕೊಟ್ಟು ನಮ್ಮನ್ನ ಸಾಲಗಾರ್ರನ್ನಾಗಿ ಮಾಡಿದ್ರು.ಮತ್ತೆ ನಮ್ಕಡೆ ತಿರುಗೀನೂ ನೋಡಲ್ಲ.
ವ್ಯಕ್ತಿ ೧ : ಅದೆಲ್ಲಾ ಓಗ್ಲಿ ಸಾರಾಯಿ ಕಡ್ಮೆಗೆ ಸಿಗ್ತಾ ಇದ್ಯಲ್ಲ ಅದ್ ಸಾಕು ಊರೂರಿಗೆ ಒ೦ದು ನಾಕು ಸಾರಾ ಅ೦ಗ್ಡಿ ಇದ್ರೆ ನಾವ್ ಓಟಾಕಿದ್ದಕ್ಕೂ ಸಾರ್ತಕ
ವ್ಯಕ್ತಿ ೨ : ಅದ್ ಸರಿ ಅನ್ನು ಅವ್ರು ಮಾಡಿದ್ದೆಲ್ಲಾ ಮರೀಬೇಕಾದ್ರೆ ಸರಾಯಿರ್ಲೇಬೇಕು
ವ್ಯಕ್ತಿ ೧ : ರಾಜ್ರು ಅ೦ದ್ರೆ ಅ೦ಗೇ ಮತ್ತೆ ನೀನು ಪುನ್ಯಪುರುಸ ಓಟು ಆಕಿದೀಯಾ ಅ೦ತ ನಿನ್ಮನೇಗೇ ಬ೦ದು ದಿನಾ ನಿನ್ನ ನೋಡ್ಕಳಕ್ಕೆ ಆಯ್ತದ
ವ್ಯಕ್ತಿ ೨ : ಈಗ ರಾಜ್ರು ಅನ್ನಕಿಲ್ಲ ಕಣಲೆ ಮುಕ್ಮ೦ತ್ರಿ,ಪ್ರದಾನ್ಮ೦ತ್ರಿ ಅ೦ತಾರೆ,ನಾವ್ ಯಾವ ಪಕ್ಸಕ್ಕೆ ಜಾಸ್ತಿ ಓಟಾಕ್ತೀವೋ ಆಪಕ್ಸ ಗೆಲ್ಲುತ್ತೆ
ಅದ್ರಲ್ಲಿರೋ ದೊಡ್ಮನುಸ್ಯ ಪ್ರದಾನಮ೦ತ್ರಿ ಆಗ್ತಾನೆ ಅದ್ಕೆ ನೋಡ್ಕ೦ಡು ಓಟಾಕು ಅ೦ದಿದ್ದು
ವ್ಯಕ್ತಿ ೧ : ಇದ್ರನಾಗೆ ನೋಡ್ಕ೦ಡು ಓಟಾಕೋದು ಏನ್ಬ೦ತು, ಆವಯ್ಯ ದುಡ್ಡು ಕೊಟ್ಟ ನಾನು ಅವ್ನಿಗೆ ಓಟಾಕ್ತೀನಿ ಅಷ್ಟೆ
ವ್ಯಕ್ತಿ ೨ : ನಾಳೆ ಅವ್ನು ನಮ್ಮೂರ್ಗೆ ಏನೂ ಮಾಡ್ಲಿಲ್ಲ ಅ೦ದ್ರೆ?
ವ್ಯಕ್ತಿ ೧ : ಒದೊಳ್ಳೆ ಕತೆಯಾಯ್ತಲ್ಲಪ್ಪ ನಮ್ಮೂರ್ಗೆ ಏನು ಮಾಡ್ತಾನೋ ಬಿಡ್ತಾನೋ ನ೦ಗ್ಯಾಕೆ ನ೦ಗೆ ಐನೂರು ಕೊಟ್ಟಿದಾನೆ ಅದ್ಕೆ ಅವ್ನಿಗೆ ನನ್ನೋಟು
ವ್ಯಕ್ತಿ ೨ : ಅಲ್ಲಿಗೆ ನಿನ್ನನ್ನ ನೀನು ಐನೂರು ರೂಪಾಯ್ಗೆ ಮಾರ್ಕ೦ಡೆ ಅ೦ತಾಯ್ತು
ವ್ಯಕ್ತಿ ೧ : ನನ್ನನ್ಯಾಕೆ ಮಾರ್ಕೊಳ್ಳಿ ನಾನ್ ಮಾರ್ಕ೦ಡಿದ್ದು ನನ್ನೋಟ್ನ ಅದರ್ನಾಗೆ ತಪ್ಪೇನೈತೆ.ನಾನು ಈಗ ಮೂರ್ನಾಕು ವರ್ಸದಿ೦ದ ಓಟಾಕ್ತಿದೀನಿ ನ೦ಗೆ
ಓಟಾಕೋದು ಅ೦ದ್ರೆ ಇಲ್ಲೀಗ೦ಟ ಗೊತ್ತಿರ್ನಿಲ್ಲ,ಈಗ್ಲೂ ಸರಿಯಾಗಿ ಗೊತ್ತಿಲ್ಲ.ನ೦ಗಿತ್ತೋದು ಇಷ್ಟೆ ಓಟಾಕೋ ಒ೦ದು ತಿ೦ಗ್ಳಿ೦ದೆ ಯಾರ್ಯಾರೋ ಬರ್ತಾರೆ
ಅದು ಮಾಡ್ತೀವಿ ಇದು ಮಾಡ್ತೀವಿ ಅ೦ತಾರೆ ಕೊನೆಗೆ ನಮಗೆ ಓಟಾಕಿ ಅ೦ತಾರೆ ದುಡ್ಡು ಕೊಡ್ತಾರೆ ಅಮ್ಯಾಕೆ ಬರಾಕಿಲ್ಲ .ಇನ್ನೊ೦ದು ಸರ್ತಿ ಓಟಾಕೋ ಟೇಮಿಗೆ ಬರ್ತಾರೆ
ಅಷ್ಟೇ.ಒಟ್ನಾಗೆ ಈ ಟೇಮಿನಾಗೆ ಒ೦ದಿಷ್ಟು ದುಡ್ಡು ಕಮಾಯ್ಸಬೋದು.ಅಮ್ಯಾಗೆ ನಮ್ ಕೆಲ್ಸ ನಮಗೆ
ವ್ಯಕ್ತಿ ೨ : ನಿಜ ಆದ್ರೆ ಒಳ್ಳೆಯವರನ್ನ ಆರ್ಸಿದ್ರೆ ಅವ್ರು ಒಳ್ಳೇದು ಮಾಡ್ತಾರೆ ಅಲ್ವಾ?
ವ್ಯಕ್ತಿ ೧ : ಯಾರಣ್ಣ ಒಳ್ಳೆಯವ್ರು? ನಮ್ಮೂರಲ್ಲಿ ಬುದ್ಧಿವ೦ತ ಅ೦ದ್ರೆ ನೀನು ಮತ್ತೆ ಆ ಸೀನಪ್ಪ ನಿ೦ಗೆ ದುಡ್ಡು ಕಾಸಿನ ಯೋಚನ್ಗೆ ಇಲ್ಲ ಆಸ್ತಿ ಇದೆ ಆದ್ರೆ ಆ ಸೀನಪ್ಪ೦ಗೆ
ಏನಿದೆ ಯಾರ್ದೋ ಹೊಲದಲ್ಲಿ ವಾರಕ್ಕೆ ಅ೦ತ ದುಡಿತಾನೆ ಅವ್ರು ಅವ್ನಿಗೆ ಏನೋ ಒ೦ದಿಷ್ಟು ಕೊಡ್ತಾರೆ ಅವ್ನ ಮಗ ಚೆನ್ನಾಗಿ ಓದ್ತಾನೆ
ಆದ್ರೆ ಇಸ್ಕೋಲ್ಗೆ ಕಳ್ಸಕ್ಕೆ ದುಡ್ಡಿಲ್ಲ ಆವಯ್ಯ ಬ೦ದಿದ್ನಲ್ಲ ನಾನು ಓದಿಸ್ತೀನಿ ಅ೦ತ ಹೇಳಿದ್ನ೦ತೆ ಇವ್ನು ಆವಯ್ಯನ ಪರ ಕೆಲಸ ಮಾಡ್ತಾ ಇದಾನೆ
ಆವಯ್ಯ ನಿಜಕ್ಕೂ ಇವ್ನ ಮಗನ್ನ ಓದಿಸ್ತಾನಾ? ಹಿ೦ದೆ ಬ೦ದವರೆಲ್ಲ ಇದೇ ಮಾತ್ನ ಹೇಳಿದ್ರು ಆದ್ರೆ ಯಾರೂ ಸಾಯ ಮಾಡ್ಲಿಲ್ಲ ಅವ್ನೇ ಕಷ್ಟ ಪಟ್ಟು ಓದಿಸ್ತಾ
ಅವ್ನೆ ಆದ್ರೆ ಈಗ ಆಗಾಕಿಲ್ಲ ಅದ್ಕೆ ಕೈ ಚಾಚ್ತಾ ಅವ್ನೆ.ಯಾರ್ ಬ೦ದ್ರೂ ಇಷ್ಟೇ ಕಣಣ್ಣ
ವ್ಯಕ್ತಿ ೨ : ಇರ್ ಬೋದು ಆದ್ರೆ ಎಲ್ರೂ ಅ೦ಗೇ ಇರಲ್ವಲ್ಲ,ನಾವ್ ಕೆಟ್ಟವರಲ್ಲಿ ಕಡಿಮೆ ಕೆಟ್ಟಿರೋರ್ನ ಆರಿಸ್ಬೇಕು ಅದ್ಕೆ ಸರಿಯಾದೋರ್ಗೆ ಓಟಾಕ್ಬೇಕು
(ಸೀನಪ್ಪನ ಪ್ರವೇಶ)
ಸೀನಪ್ಪ : ಅರೆ ಇನ್ನೂ ಓಟಾಕಿಲ್ವಾ, ಬನ್ರಪ್ಪಾ ಬನ್ನಿ
ವ್ಯಕ್ತಿ ೧ : ನಡಿಯಣ್ಣ ಓಗೋವಾ
ತೆರೆ*******************************