ಸತ್ತ ನಾಯಿಗಾಗಿ...!!!

ಸತ್ತ ನಾಯಿಗಾಗಿ...!!!

ಬರಹ

ಅವ ಇದ್ದ ದೂರದೂರು ಅಮೇರಿಕದಲ್ಲಿ!
ಸತ್ತು ಬಿತ್ತು ಇಲ್ಲಿ ಅವನ ನೆಚ್ಚಿನ ನಾಯಿ!

ಸುದ್ಧಿ ಮುಟ್ಟಿತು ಫೋನಲಿ
ಹರಿದು ಬಂತು ನೀರು ಕಣ್ಣಲಿ

ನೆಚ್ಚಿನ ನಾಯಿ, ಮುದ್ದಿನ ನಾಯಿ
ಅಕ್ಕರೆಯೊಂದಿಗೆ 'ಹಚ್' ನಾಯಿಯಂತೆ ಅವನೊಂದಿಗೆ
ಊರು ಸುತ್ತುತ್ತಿದ್ದ ನಾಯಿ!

ಈ ನಾಯಿ ನೆನಪಿಗಾಗೇ..
ಈ ಊರಿನಿಂದ ಆ ಊರಿಗೆ ಹೋಗುವಾಗ 'ಹಚ್' ಫೋನನ್ನೇ ಕೊಂಡಿದ್ದ!

ಕೆಲವು ದಿನ ಕಳೆದಿತ್ತು...
ಅಮ್ಮ- ಅಪ್ಪ ನ ನೆನಪು ಕಾಡಿತ್ತು..
ಆ ಊರಿಂದಾ ಈ ನಾಡಿಗೆ ಬಂದು ಸೇರಿದ್ದ...
ಮನೆ ಮಂದಿ ಜೊತೆ ಸೇರಿ ಹರಟುತ್ತಿರೆ ತಟ್ಟೆಂದು
ನಾಯಿ ನೆನಪಾಯ್ತು...

ಸತ್ತ ನಾಯಿಯ ಹೂತರೆಲ್ಲಿ ಎಂದ?
ಇಲ್ಲೇ ಮನೆ ಪಕ್ಕದ ತೋಪಿನಲ್ಲಿ ಎಂದ ಅಪ್ಪ.
ಸರಿ ನೋಡಿ ಬರುವೆನೆಂದು..
ಹೂತ ಜಾಗಕೆ ಹೊರಟ...

ನಾಯಿ ಹೂತ ಜಾಗದಲ್ಲಿ ಗುಲಾಬಿ ಗಿಡವಿತ್ತು.
ನಳ ನಳಿಪ ಗುಲಾಬಿ ಮೊಗ್ಗು ನಗು ನಗುತಿತ್ತು..
ತನ್ನೆಡೆಗೆ ಬರುತಿರುವ ಅಪರಿಚಿತಗೆ
ನಗುವಲೇ ಸ್ವಾಗತ ಕೋರಿತ್ತು...

ಸಮಾಧಿಯಂತಿದ್ದ ಈ ದಿಬ್ಬದ ಮುಂದೆ ಕುಳಿತ
ಸತ್ತ ನಾಯಿಯ ನೆನೆದು ಬಿಕ್ಕಿ ಬಿಕ್ಕಿ ಅತ್ತ...
ವಿದೇಶಿಯರಂತೇ ಅಲ್ಲೇ ಇದ್ದ (ನಗು ನಗುತಿದ್ದ)
ಗುಲಾಬಿ ಮೊಗ್ಗಿನ ಗೋಣು ಮುರಿದು ತನ್ನ ನೆಚ್ಚಿನ ಸತ್ತ ನಾಯಿಯ
ಸಮಾಧಿಗೆ ಅರ್ಪಿಸಿದ್ದ!

ಸತ್ತ ನಾಯಿಗಾಗಿ.. ಬದುಕಿದ್ದ, ಇನ್ನು ಬಾಳಬೇಕಿದ್ದ..
ಗುಲಾಬಿಯ ಮೊಗ್ಗಿನ ಗೋಣು ಮುರಿದು...
ನೆಚ್ಚಿನ ನಾಯಿಯ ಆತ್ಮಕೆ ಶಾಂತಿ ಕೋರಿದ್ದ!
ಮಿಕ್ಕ ಗುಲಾಬಿ ಮೊಗ್ಗುಗಳ ನೋವು - ದುಃಖ ಏನೆಂದು ತಿಳಿಯದೇ ಎದ್ದು ಹೋಗಿದ್ದ!!!

-ಸಂಕೇತ್ ಗುರುದತ್ತ.
ಹೈದರಾಬಾದ್