ಸತ್ಯಾಗ್ರಹ

ಸತ್ಯಾಗ್ರಹ

ಕವನ

ಅಧಿಕಾರ ಪೀಠದಿ ಕುಳಿತಿಹ ಜನರ

ಮನವ ಸೆಳೆಯಲು ಸತ್ಯಾಗ್ರಹ

ಆಡಳಿತ ಯಂತ್ರಕೆ ಚುರುಕು ಮುಟ್ಟಿಸಲು

ಹೂಡುವ ಬಾಣವೇ ಸತ್ಯಾಗ್ರಹ//

 

ಭೃಷ್ಟಾಚಾರ ಕಪಟ ಮೋಸ

ಬೀದಿಗೆ ಎಳೆಯಲು ಈ ಆಟ

ನಾನಾ ರೂಪದಿ ಹಾಕುತ  ವೇಷ

ಗಮನ ಸೆಳೆಯುವ ನವ ತಂತ್ರ//

 

ಜನಾಂದೋಲನ ಭಾಷಣ ಕಮ್ಮಟ

ಜಾಗೃತಿ ಗೊಳಿಸುವ  ಮಹಾಮಂತ್ರ

ದುಷ್ಟರ ಆಟವ ಮಣ್ಣು ಗೂಡಿಸಲು

ಎಲ್ಲರು ಸೇರುವ ವೇದಿಕೆ ಅಂಗಳ//

 

ಭಾರತ ದೇಶದ ಸ್ವಾತಂತ್ರ್ಯ ಕ್ಕಾಗಿ

ಸಾರಿದರಂದು ಅಹಿಂಸಾ ತತ್ವ

ನೊಂದು ಬೆಂದು ಬಸವಳಿದವರ

ಕಣ್ಣೀರು ಒರೆಸಲು ದಾಸ್ಯವ ಬಿಡಿಸಲು//

 

ಸ್ವರಾಜ್ ಚಳುವಳಿ ಸ್ವದೇಶಿ ನೀತಿ

ಉಪ್ಪಿನಕರವು ಖಾದಿಯ ಒಲವು

ನೇತಾರರೆಲ್ಲ ಸೇರಿದ ನೆಲವು 

ರಾಷ್ಟ್ರಪಿತ ಬಾಪು ದೇವರ ವರವು//

 

-ರತ್ನಾ ಕೆ.ಭಟ್, ತಲಂಜೇರಿ

 

ಚಿತ್ರ್