ಸತ್ಯ - ಗೀತೆಯ ಕನ್ನಡಿಯಲ್ಲಿ

ಸತ್ಯ - ಗೀತೆಯ ಕನ್ನಡಿಯಲ್ಲಿ

ಬರಹ

ಸಾಮಾನ್ಯವಾಗಿ, ನಾವೆಲ್ಲರೂ ಸತ್ಯಎಂದರೆ ಸುಳ್ಳು ಅಲ್ಲದ್ದು ಎಂದು ಅರ್ಥ ಮಾಡಿಕೊಂಡಿದ್ದೇವೆ. ಒಂದು ನಿಮಿಷ, ಸತ್ಯಕ್ಕೆ ಈ ವ್ಯಾಖ್ಯಾನ ಎಷ್ಟು ಸರಿ? ಕೆಳಗಿನ ಓಂದು ಪ್ರಸಂಗ ನೋಡಿ,

ಓಂದು ಊರು, ಓಂದಾನೊಂದು ದಿನ ಅಲ್ಲಿಯ ಸಜ್ಜನರ ಮೇಲೆ ಕಳ್ಳರ ದಾಳಿಯಾಗುತ್ತದೆ, ಹೇಗೊ ಒಬ್ಬ ವ್ಯಕ್ತಿ ಅವರಿಂದ ತಪ್ಪಿಸಿಕೊಂಡು ಅನತಿ ದೊರದಲ್ಲಿದ್ದ ಆಶ್ರಮ ಒಂದರೊಳಕ್ಕೆ ಹೋಗುತ್ತಾನೆ. ಅಲ್ಲಿಯೇ ಇದ್ದ ಸನ್ಯಾಸಿ ಯೊಬ್ಬನು, ಈ ವ್ಯಕ್ತಿ ಒಳಬಂದದ್ದನ್ನು ಗಮನಿಸಿರುತ್ತಾನೆ. ಕಳ್ಳರ ಗುಂಪು ಸ್ವಲ್ಪ ಹೊತ್ತಿನಲ್ಲೇ ಅದೇ ಆಶ್ರಮಕ್ಕೆ ಬಂದು, ಸನ್ಯಾಸಿಯನ್ನು ಗದರಿಸಿ ಎಲ್ಲಿ ಆ ವ್ಯಕ್ತಿ? ನಮ್ಮ ಕಣ್ಣು ತಪ್ಪಿಸಿ ಬಂದವನು? ಎಂದು ಕೇಳುತಾರೆ. ಆಗ ಸತ್ಯದ ಸರಿಯಾದ ಅರ್ಥ ಅರಿತಿದ್ದ ಸನ್ಯಾಸಿಯು, ನನಗೆ ಗೊತ್ತಿಲ್ಲಪ್ಪಾ!‌ ನಾನು ಧ್ಯಾನ ಮಗ್ನನಾಗಿದ್ದೆ, ಇಲ್ಲಿ ಯಾರು ಬಂದಹಾಗೆ ಇಲ್ಲ ಎಂದು ಅವರನ್ನು ಕಳುಹಿಸುತ್ತಾನೆ.
ಅರೆ? ಆ ಸನ್ಯಾಸಿ ಆಡಿದ್ದು ಸುಳ್ಳು ಅಲ್ಲವೆ? ಸತ್ಯವ್ರತರಾದ ಸನ್ಯಾಸಿಯು, ನಿಜವಾಗಿಯಾಗಿದ್ದರೆ, ಅವಿತು ಕುಳಿತಿದ್ದ ವ್ಯಕ್ತಿಯನ್ನು ಕಳ್ಳರಿಗೆ ತೋರಿಸಬೇಕಾಗಿತ್ತು, ಆದರೆ, ಅವರು ಮಾಡಿದ್ದೇನು?
ಇಲ್ಲೇ ನಮಗು, ಸತ್ಯದ ಅಂತರಾಳದ ಅರ್ಥ ತಿಳಿದ ಸನ್ಯಾಸಿಗು ಇರುವ ವೆತ್ಯಾಸ ವೇದ್ಯವಾಗುವುದು.

ಶ್ರೀಕೃಷ್ಣ ಪರಮಾತ್ಮನು, ತನ್ನ ಗೀತೆಯಲ್ಲಿ, ಸತ್ಯದ ನಿಜಾರ್ಥವನ್ನು ನಮಗೆಲ್ಲ ತಿಳಿಸಿದ್ದಾನೆ. ಯಾವುದು ಸತ್ಯ? ಎಂದು ಪರಮಾತ್ಮನನ್ನು ಕೇಳಿದ ಪಾರ್ಥನನ್ನು ಉದ್ದೇಶಿಸಿ,
"ಸಜ್ಜನರಿಗೆ ನೋವನ್ನುಂಟು ಮಾಡದ ಯಾವ ಮಾತೂ ಸುಳ್ಳಲ್ಲ" ಎಂದು, ಮಹತ್ತರವಾದ ವ್ಯಾಖ್ಯಾನವನ್ನು ಕೊಡುತ್ತಾನೆ.

ಇದನ್ನೇ ತನ್ನ ಅವತಾರದಲ್ಲಿ, ಮಹಾಭಾರತದಲ್ಲಿ, ತೊರಿಸಿದ್ದಾನೆ ಕೂಡ,
ಅಶ್ವತ್ತಾಮಾಚಾರ್ಯರನ್ನು ಕೊಂದೇ ಬರುತ್ತೇನೆಂದು ಶಪಥ ಮಾಡಿ ಹೋಗಿದ್ದ ಅರ್ಜುನ, ದಿನದ ಅಂತ್ಯದಲ್ಲಿ, ತನ್ನ ಅಣ್ಣನಾದ ಧರ್ಮರಾಜನ ಮುಂದೆ, ಅಶ್ವತ್ತಾಮಾಚಾರ್ಯರನ್ನು ಕೊಲ್ಲಲಾಗದೆ ತಲೆತಗ್ಗಿಸಿ ನಿಂತ. ಆಗ, ಧರ್ಮರಾಜನು ಸಿಟ್ಟಿಗೆದ್ದು, ಅರ್ಜುನನ ಗಾಂಢೀವವನ್ನು ಅವಮಾನಿಸುತ್ತಾ, "ಕೆಲಸಕ್ಕೆ ಬಾರದ ಬಿಲ್ಲನ್ನು ಮೂಲೆಗೆ ಬಿಸಾಡು!!" ಎಂದು ರೇಗುತ್ತಾನೆ. ತನ್ನ ಬಿಲ್ಲನ್ನು ಅವಮಾನಿಸುವವರ ಶಿರಛೇದಿಸುತ್ತೇನೆ ಎಂದು ಶಪಥಮಾಡಿದ್ದ ಅರ್ಜುನನು, ತನ್ನ ಅಣ್ಣನೆಂದೂ ಲೆಕ್ಕಿಸದೆ, ಸತ್ಯವನ್ನು ಉಳಿಸುತ್ತೇನೆ ಎಂದು, ಧರ್ಮರಾಜನ ಶಿರಛೇದನ ಮಾಡಲು ಮುಂದಾದಾಗ, ಶ್ರೀಕೃಷ್ಣ ಪರಮಾತ್ಮನು ಅಡ್ಡಬಂದು ಅರ್ಜುನನನ್ನು ತಡೆಯುತ್ತಾನೆ. ಶ್ರೀಕೃಷ್ಣ ಹೇಳುತ್ತಾನೆ.. ಅರ್ಜುನ, ನಿನ್ನ ಶಪಥವನ್ನು ಕಾಪಾಡಲು ನಿನ್ನ ಅಣ್ಣನ ಶಿರಛೇದನವನ್ನೇ ಮಾಡಬೇಕಿಲ್ಲ, ದೊಡ್ಡವರ ಅವಹೇಳನವೇ ಅವರ ಕೊಲೆ, ಹಾಗಾಗಿ, ನೀನು ನಿನ್ನ ಅಣ್ಣನನ್ನು ಏಕವಚನದಿಂದ ಸಂಭೋದಿಸಿದರೆ, ಅದೇ ಅವನ ಕೊಲೆ. ಆದರೆ, ಅಣ್ಣನ ಕೊಲೆಇಂದ ಬಂದ ಪಾಪಕ್ಕೆ ಪ್ರಾಯಶ್ಚಿತ್ತರೂಪವಾಗಿ, ನೀನು ಆತ್ಮಹತ್ಯೆ ಮಾಡಿಕೊಳ್ಳಬೇಕು, ಅದಕ್ಕೆ ನಿನ್ನ ಆತ್ಮಪ್ರಶಂಸೆಯನ್ನು ಮಾಡಿಕೋ, ಅದೇ ನಿನ್ನ ಆತ್ಮಹತ್ಯೆ. ಅದೇ ನಿನ್ನ ಪ್ರಾಯಶ್ಚಿತ್ತವೂ ಆಯಿತು ಎಂದು ನಿರ್ಣಯ ಕೊಡುತ್ತಾನೆ.

ಶ್ರೀಕೃಷ್ಣನಿಲ್ಲದಿದ್ದರೆ, ಅವನು ಸತ್ಯಕ್ಕೆ ಕೊಟ್ಟ ಅರ್ಥದ ಅರಿವಿಲ್ಲದಿದ್ದರೆ, ಅಂದು ದೊಡ್ಡ ಅನಾಹುತವೇ ಆಗಬೇಕಿತ್ತು. ಅರ್ಜುನನ ಕಯ್ಯಲ್ಲಿ ಧರ್ಮರಾಜ ಹತನಾಗಿ, ಅದಕ್ಕೆ ಅರ್ಜುನನ ಪ್ರಾಯಶ್ಚಿತ್ತರೂಪವಾಗಿ ಆತ್ಮಹತ್ಯೆಯಾಗಿದ್ದಿದ್ದರೆ? ಮಹಾಭಾರತವೂಇಲ್ಲ, ಗೀತೆಯೂಇಲ್ಲದಂತಾಗುತ್ತಿತ್ತು.

ಸತ್ಯವೆಂದರೆ, ಬರಿಯಮಾತಿನಲ್ಲಿ ಹೇಳಿದಹಾಗೆ ನಡೆಕೊಳ್ಳುವುದುಎಂದು ಅಷ್ಟೇ ಅರ್ಥ ಅಲ್ಲ!!‌ ಆ ನಡತೆಯಿಂದ, ಮಾತಿನಿಂದ, ಸಜ್ಜನರಿಗೆ ಒಳಿತೋ? ಕೆಡುಕೋ? ಎಂಬುದರ ವಿಷ್ಲೇಷಣೆಯೊಂದಿಗೆ ಅನುಸರಿನಬೇಕು.

ಅದಕ್ಕೇ ಶ್ರೀಕೃಷ್ಣನನ್ನು ಗೀತಾಚಾರ್ಯಎಂದುಕರೆದರು, ಬರಿಯ ರಾಸಲೀಲೆಗಳನ್ನು ಕಂಡು, ಹಂಗಿಸುವವರಿಗೇನುಗೊತ್ತು? ಅವನ ಮಹಿಮೆ!!‌

ಹರೇ ಶ್ರೀನಿವಾಸ!‌
_ವಾದಿರಾಜ ಆಚಾರ್ಯ