ಸತ್ಯ ಪೀಠ...
ಇದು ಕೇವಲ ಹಾಸ್ಯಕ್ಕಾಗಿ..ನಗು ಬಂದರೆ ನಕ್ಕು ಬಿಡಿ...
ಒಂದು ಸಿನಿಮಾ ಬಿಡುಗಡೆಗೆ ಮುನ್ನ ಕರೆಯುವ ಪ್ರೆಸ್ ಮೀಟ್ ನಲ್ಲಿ ಸಂಭಾಷಣೆಗಳು ಹೇಗಿರುತ್ತವೆ ಎಂಬುದಕ್ಕೆ ಸಣ್ಣ ಉದಾಹರಣೆ..
"ಸಿನಿಮಾ ನಾವು ಅಂದುಕೊಂಡಿದ್ದಕ್ಕಿಂತ ಬಹಳ ಚೆನ್ನಾಗಿ ಮೂಡಿ ಬಂದಿದೆ"
"ನಮ್ಮ ರೈಟರ್ ಈ ಕಥೆ ಹೇಳಿದ ತಕ್ಷಣ ನನಗೆ ಶಾಕ್ ಆಯ್ತು..ಆಗಲೇ ನನಗನಿಸಿತ್ತು ಈ ಚಿತ್ರ ಖಂಡಿತ ಹಿಟ್ ಆಗುತ್ತದೆ ಎಂದು"
"ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ವಂದನೆಗಳು..ಪ್ರತ್ಯೇಕವಾಗಿ ನಾಯಕ ಹಾಗೂ ನಾಯಕಿಗೆ ಥ್ಯಾಂಕ್ಸ್"
"ದುಡ್ಡಿನ ವಿಷಯದಲ್ಲಿ ಎಲ್ಲೂ compromise ಆಗಿಲ್ಲ "
"ಈ ಚಿತ್ರದ ಸಮಯದಲ್ಲಿ ಇದು ಶೂಟಿಂಗ್ ಎಂದು ಅನಿಸುತ್ತಿರಲೇ ಇಲ್ಲ...ಒಂದು ಕುಟುಂಬದ ಜೊತೆ ವಿಹಾರಕ್ಕೆ ಹೋದ ಹಾಗೆ ಇತ್ತು"
"ಈ ಚಿತ್ರದ ಪ್ರತಿ ಹಾಡುಗಳು ಹೊಸದಾಗಿ ಮಧುರವಾಗಿ ಮೂಡಿ ಬಂದಿದೆ"
"ಈ ಸಿನಿಮಾದಲ್ಲಿ ಶೃಂಗಾರ ಸ್ವಲ್ಪ ಹೆಚ್ಚಾದರೂ ಇಂದಿನ ಯುವ ಪೀಳಿಗೆಗೆ ಒಂದು ಉತ್ತಮ ಸಂದೇಶ ಇದೆ "
"ನಮ್ಮ ಸಿನೆಮ ತುಂಬಾ different ಆಗಿ ಮೂಡಿ ಬಂದಿದೆ.."
"ಮತ್ತೆ ನಾವು ಈ ಸಿನಿಮಾದ ಶತದಿನೋತ್ಸವ ಸಂಭ್ರಮದಲ್ಲಿ ಭೇಟಿಯಾಗೋಣ".
ಈಗ ಇದೆ ಸಿನೆಮಾದವರನ್ನು ಸತ್ಯ ಪೀಠಕ್ಕೆ ಹತ್ತಿಸಿದರೆ ಅವರ ಮಾತುಗಳು ಹೇಗಿರುವುದು..
ನಿರ್ಮಾಪಕ : ಸಿನೆಮಾ ಬಹಳ ಕೆಟ್ಟದಾಗಿ ಮೂಡಿ ಬಂದಿದೆ..ಸಿನೆಮಾದ ಮೊದಲ ಕಾಪಿ ನೋಡುತ್ತಿದ್ದಾಗ ಅರ್ಧದಲ್ಲೇ ಎದ್ದು ಬಂದೆ.
ನಿರ್ದೇಶನ ಅತೀ ಕೆಟ್ಟದಾಗಿದೆ..ನಾಯಕ ಪ್ರತಿ ದೃಶ್ಯಕ್ಕೂ ಹತ್ತತ್ತು ಟೇಕ್ ತೆಗೆದುಕೊಳ್ಳುತ್ತಿದ್ದ. ಹಾಡುಗಳಲ್ಲಿ ಡಾನ್ಸ್ ಗೆ ಗ್ರಾಫಿಕ್ಸ್
ಬಳಸಿ ಹೇಗೋ ಸರಿಪಡಿಸಿದೆವು. ಇನ್ನು ನಾಯಕಿ ಬಾಂಬೆ ಹುಡುಗಿ ನೋಡಲು ಚೆನ್ನಾಗಿದ್ದಾಳೆ ಎಂದು ಆಯ್ಕೆ ಮಾಡಿದೆವು. ಆದರೆ
ಅಡ್ವಾನ್ಸ್ ಕೊಟ್ಟ ಮೇಲೆ ತಿಳಿಯಿತು ಆಕೆಯ ಅಭಿನಯ ಶೂನ್ಯ ಅಂತ. ಇನ್ನು ಸಂಗೀತ ಒಂದಾದರೂ ಸ್ವಂತ ಟ್ಯೂನ್ ಹಾಕಲಿಲ್ಲ
ಪುಣ್ಯಾತ್ಮ ಎಲ್ಲ ಕದ್ದ ಟ್ಯೂನ್ ಗಳು...
ನಿರ್ದೇಶಕ : ನನ್ನ ಹಣೆ ಬರಹ ಕೆಟ್ಟು ಇಂಥ ನಿರ್ಮಾಪಕ ಸಿಕ್ಕಿದ. ಇಷ್ಟು ಕಡಿಮೆ ಬಜೆಟ್ ನಲ್ಲಿ ಯಾವೋನು ಸಿನಿಮಾ ಮಾಡಲ್ಲ..
ಮಳೆ ಹಾಡಿಗೆ ಕೆಳಗಿನಿಂದ ಲೋಟಗಳಲ್ಲಿ ನೀರು ತುಂಬಿ ಮೇಲಿಂದ ಚೆಲ್ಲಿಸಿದನು. ಶೂಟಿಂಗ್ ಗೆ ಬರಲು ಕನಿಷ್ಟಪಕ್ಷ ಆಟೋ ಕೂಡ
ಕೊಡಲಿಲ್ಲ..ಎಲ್ಲರೂ ಬಿ.ಎಂ.ಟಿ.ಸಿ. ಬಸ್ಸುಗಳಲ್ಲಿ ಬರುತ್ತಿದ್ದೆವು..ನಮ್ಮ ಊಟಗಳನ್ನು ನಾವೇ ಡಬ್ಬಿಯಲ್ಲಿ ತಂದು ತಿನ್ನುತ್ತಿದ್ದೆವು...
ಅಮೇರಿಕಾದಲ್ಲಿ ಶೂಟಿಂಗ್ ಎಂದು ಹೇಳಿ ಇಲ್ಲೇ ಹಿನ್ನೆಲೆಯಲ್ಲಿ ಅಮೆರಿಕಾದ ಪೋಸ್ಟರ್ ಗಳನ್ನೂ ಅಂಟಿಸಿ ಶೂಟ್ ಮಾಡಿದೆವು.
ನಾಯಕ : ಪಾಪ ನಮ್ಮ ನಿರ್ದೇಶಕನಿಗೆ ನಿರ್ದೇಶನ ಎಂದರೆ ಏನು ಎಂದು ಗೊತ್ತಿಲ್ಲ ಅದರಿಂದಲೇ ನನಗೆ ಅಭಿನಯ ಬರದೆ ಇದ್ದರು
ಹೇಗೋ ಬದುಕಿದೆ. ನಾನು ಕೂಡ ಸಿನೆಮಾಗೆ ಕಾಸು ಹಾಕಿದ್ದರಿಂದ ನಿರ್ಮಾಪಕನು ನನ್ನ ಅಭಿನಯದ ಬಗ್ಗೆ ಮಾತೆತ್ತಲಿಲ್ಲ.. ಈ ಸಿನಿಮಾದಲ್ಲಿ
ನಾನು ಕಾಣಿಸುವುದು ಕೇವಲ ಕಾಲು ಗಂಟೆ ಮಾತ್ರ ಮಿಕ್ಕಿದ್ದೆಲ್ಲ ಡ್ಯೂಪ್ ಹಾಕಿ ಲಾಂಗ್ ಶಾಟ್ ನಲ್ಲಿ ತೆಗೆದರು. ಡೈಲಾಗ್ ಹೇಳಬೇಕಾದರೆ
ನನ್ನ ಹಿಂದಿನಿಂದ ಶೂಟ್ ಮಾಡಿ ಒಳ್ಳೆ ಕೆಲಸ ಮಾಡಿದರು ನಿರ್ದೇಶಕರು.
ನಾಯಕಿ : ಈ ಸಿನೆಮಾದ ಶೂಟಿಂಗ್ ಸಂದರ್ಭದಲ್ಲಿ ನನಗೆ ನಟನೆ ಬರುವುದಿಲ್ಲವೆಂದು ಎಲ್ಲರೂ ಬೈದುಕೊಳ್ಳುತ್ತಿದ್ದರು. ಆದರೆ ನನಗೆ ಕನ್ನಡ
ಬರದೆ ಅವೆಲ್ಲ ಅರ್ಥ ಆಗದೆ ಬದುಕಿದೆ. ಈ ಸಿನೆಮಾಗೆ ಬಟ್ಟೆಗಳೆಲ್ಲ ನನ್ನ ಮನೆಯಿಂದಲೇ ತರುತ್ತಿದ್ದೆ. ಈ ಸಿನಿಮಾ ಪೂರ್ತಿಯಾಗಿದೆ ಆದರೆ
ಕಥೆ ಏನು ಅಂತ ನನಗೆ ಗೊತ್ತಿಲ್ಲ...
ಸಂಗೀತ ನಿರ್ದೇಶಕ : ನಿಮಗೆ ನಿಜ ಹೇಳಬೇಕೆಂದರೆ ಈ ಸಿನೆಮಾದಲ್ಲಿ ಒಂದಾದರೂ ಒಳ್ಳೆಯ ಹಾಡಿಲ್ಲ..ನನ್ನ ಹಾಡುಗಳನ್ನು ಕೇಳ್ತಾ ಇದ್ದರೆ
ನನ್ನ ಮೇಲೆ ನನಗೇ ಅಸಹ್ಯ ಹುಟ್ಟುತ್ತದೆ. ಈ ಸಿನೆಮಾಗೆ ಅವಕಾಶ ಬಂದ ಮೇಲೇನೆ ಒಂದು ಹಾರ್ಮೋನಿಯಂ, ಕೊಳಲು, ಹಾಗೂ ತಬಲಾ
ಕೊಂಡುಕೊಂಡೆ...ಹಾಡುಗಳೆಲ್ಲ ಎಷ್ಟೋ ಕಷ್ಟ ಪಟ್ಟು ಮಾಡಿದ ಮೇಲೆ ಇವೆಲ್ಲ ಎಲ್ಲೋ ಕೇಳಿದ ಹಾಗೆ ಇದೆ ಎಂದು ಅನಿಸುತ್ತಿತ್ತು..
ನೃತ್ಯ ನಿರ್ದೇಶಕ : ಈ ಚಿತ್ರದ ಎಲ್ಲ ಹಾಡುಗಳಿಗೆ ನಾನೇ ನೃತ್ಯ ನಿರ್ದೇಶನ ಮಾಡಿದ್ದೇನೆ. ನಾಯಕನಿಗೆ ನೃತ್ಯ ಮಾಡಲು ಬರದೆ...ನಾನೇ
ಲಾಂಗ್ ಶಾಟ್ ನಲ್ಲಿ ನೃತ್ಯ ಮಾಡಿದ್ದೇನೆ ಹಾಗೆ ಗ್ರಾಫಿಕ್ ಬಳಸಿದ್ದೇವೆ. ಫೈಟ್ ಮಾಸ್ಟರ್ ಗೆ ಅಡ್ವಾನ್ಸ್ ಕೊಟ್ಟಿಲ್ಲ ಅಂತ ಆಟ ಬರದೆ ಇದ್ದಾಗ
ಅದು ಕೂಡ ನಾನೇ ನಿರ್ದೇಶನ ಮಾಡಿದ್ದೆ. ಕೆಲವರು ಹೇಳುತ್ತಿದ್ದರು ಈ ಸಿನೆಮಾದಲ್ಲಿ ಫೈಟ್ ಕೂಡ ಡಾನ್ಸ್ ಇದ್ದ ಹಾಗೆ ಇದೆ ಅಂತ..ಅದಕ್ಕೆ
ನಾನೇನು ಮಾಡಕ್ಕೆ ಆಗತ್ತೆ.
ಮೂಲ : ತೆಲುಗಿನಲ್ಲಿ ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...