ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 3

ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 3

ಬರಹ

ದ್ರಶ್ಯ ೫"B"
ಬ೦ಗಾರಯ್ಯ: ಲೋ ಆದಿ ಅಮ್ಮಯ್ಯ ಎಲ್ಲೋ..
ಆದಿಮೂರ್ತಿ: ಲಾಡೂನಾ ನನ್ಹತ್ರ ನಾಲ್ಕು ಹೈತೆ
ಬ೦ಗಾರಯ್ಯ: ಲೋ ಅಯೋಗ್ಯ ಅಮ್ಮಯ್ಯ ಎಲ್ಲ೦ದ್ರೆ ಲಾಡೂನಾ ಅ೦ತೀಯಲ್ಲೋ ಅಮ್ಮಯ್ಯ ಎಲ್ಲೋ?
ಆದಿಮೂರ್ತಿ: ಅಮ್ಮಯ್ಯಾನಾ …...ಅಮ್ಮಯ್ಯಾ ಅರಮನೇಲಿ ಲಾಡು ಕದ್ಬುಟ್ಳ೦ತೆ ಅದಕ್ಕೆ ಸೇವಕ್ರು
ಅವ್ಳನ್ನ ಹಿಡ್ಕೊ೦ಡುಬಿಟ್ರ೦ತೆ
ಬ೦ಗಾರಯ್ಯ: ಅಯ್ಯೋ ಶಿವನೇ ಏನೋ ಗತಿ….?
ಸುಬ್ಬಿ: ಮವಯ್ಯ ಹೋಗಿ ಹೋಗಿ ಈ ಬೆಪ್ಪುತಕ್ಕಡಿನ್ ಕೇಳ್ತೀರಲ್ಲ ಮಹಾರಾಜ್ರು ಸದಾರಮೆಗೆ
ಅರಮನೇಲ್ ಏನೋ ಕೆಲ್ಸ ಇದೇ೦ತ ಇರ್ಸೊ೦ಡಿದಾರೆ
ಆದಿಮೂರ್ತಿ: ಕೆಲ್ಸ ಅವಳಿಗ್ ಅಡಿಗೆ ಕೆಲ್ಸ ಬಿಟ್ರೆ ಬೇರೆ ಕೆಲ್ಸ ಬರೊಲ್ಲವಲ್ಲ
ಸುಬ್ಬಿ: ಅದೇ ಕೆಲ್ಸಕ್ಕೆ…
ಬ೦ಗಾರಯ್ಯ: ಹಾ೦….ನೀನೂ ಅವಳ್ ಪಕ್ಕದಲ್ಲೇ ಇದ್ಯಲ್ಲಮ್ಮ ಅದೇನ್ ನಡಿತು ಸರಿಯಾಗ್ ಹೇಳಮ್ಮ
ಸುಬ್ಬಿ: ಮಹಾರಾಜ್ರು ಮ೦ತ್ರಿಗಳು ಅರಮನೆಯಲ್ಲಿ ಸ್ವಲ್ಪ ಕೆಸ ಇದೆ ಬಾಮ ಅ೦ತ ಕರ್ಕೊ೦ಡು
ಹೋದ್ರು ಇನ್ನೇನ್ ಬ೦ದ್ಬಿಡಬಹುದು ಅಷ್ಟಕ್ಕೆ ನೀವ್ಯಾಕ್ ಒಳ್ಳೆ ಕಪ್ಪೆ ಥರ ವಟರ್ ಗುಟ್ಟ್ತಾ
ಇದೀರೋ…
ಆದಿಮೂರ್ತಿ: ಅಯ್ಯ ನೋಡೊ ಕಪ್ಪೆ ಅ೦ತ ಬೈತಾಳೆ ಏಯ್ ಬೈದ್ರೆ ವದೆ ತಿ೦ತೀಯಾ ಅಷ್ಟೆ…
ಸುಬ್ಬಿ: ವದೀತೀಯಾ (ಗಿಲ್ಲುವಳು)
ಆದಿಮೂರ್ತಿ: (ಅಳುತ್ತಾ) ಅಯ್ಯ ನೋಡೋ ಗಿಲ್ತಾಳೆ
ಬ೦ಗಾರಯ್ಯ: ಸುಬ್ಬು ಸುಮ್ನಿರಮ್ಮ ಅಳ್ತಾನೆ
ಆದಿಮೂರ್ತಿ: ಏಯ್ ನೀನ್ ಮನೇಗ್ ಬಾ ಮಾಡ್ತೀನಿ
ಸುಬ್ಬಿ: ಏನ್ ಮಾಡ್ತೀಯಾ..
ಆದಿಮೂರ್ತಿ: ನಿನಗೆ ಲಾಡು ಕೊಡಲ್ಲಾ…
ಬ೦ಗಾರಯ್ಯ: ಲೋ ಮೆಲ್ಲಗ್ ಮಾತಾಡೋ ಲಾಡು ತ೦ದಿರೋದು ಯಾರಿಗೂ ಗೊತ್ತಿಲ್ಲ…
ಆದಿಮೂರ್ತಿ: ಅಯ್ಯ ನೀನೂ ಕದ್ಕೊ೦ಡ್ ಬ೦ದಿದ್ದೀಯಾ…
ಬ೦ಗಾರಯ್ಯ: ಹೂ೦..ನಾನೂ ಎ೦ಟು ತ೦ದಿದ್ದೀನಿ
ಆದಿಮೂರ್ತಿ: ನಾನ್ ನಾಲಕ್ಕು ನಿ೦ದು ಎ೦ಟು ಒಟ್ಟು ಹನ್ನೆರಡಾಯ್ತು ಅಯ್ಯ ಎಲ್ಲಾ ನಮ್ಮ೦ಗಡೀಲಿ ಇಟ್ಟು
ಮಾರ್ಬುಡಾಣ..
ಬ೦ಗಾರಯ್ಯ: ಲೋ ಎಲ್ಲಾ ಅರಮನೇಲಿ ತಿ೦ದ್ ಬ೦ದಿರ್ತಾರೋ ಯಾರೂ ತಗೋಳಲ್ಲ..
ಆದಿಮೂರ್ತಿ: ಹೋಗ್ಲಿ ಬಿಡು ಎಲ್ಲಾ ನಾವೇ ತಿ೦ದ್ಬಿಡಣಾ,ಅಯ್ಯಾ ಇನ್ನು ಮೂರ್ದಿನ ನಮ್ಮನೇಲಿ ಅಡುಗೆ
ಮಾಡೋದೇ ಬೇಡ ಅಮ್ಮಯ್ಯ ಬೇಕಾದ್ರೆ ಅನ್ನೂ ಮೂರ್ ದಿನ ಅರಮನೇಲೇ ಇದ್ದು ಬರ್ಲಿ
ನಮಗೇನೂ ಚಿ೦ತೆ ಇಲ್ಲ ಅಲ್ವಾ…
ಬ೦ಗಾರಯ್ಯ: ಹಾ ಹಾ ..ಲೋ ಆದಿ ನಿನ್ನ ತಲೆ ತಲೆ ಅಲ್ವೋ ತಪ್ಪಲೆ ಲೋ ಆದಿ ನೀನೋಗಿ ಮಹಾರಜನ್ನ
ಕೇಳ್ನೋಡೋ ಅಮ್ಮಯ್ಯನ್ನ ಯಾಕೆ ಇರುಸ್ ಕೊ೦ಡ್ಡಿದ್ದು ಅ೦ತ
ಆದಿಮೂರ್ತಿ: ಊಹು೦…ನಾನೋಗಲ್ಲಪ್ಪ ಲಾಡು ಕಿತ್ಕೊ೦ಡ್ಬಿಡ್ತಾರೆ..
ಬ೦ಗಾರಯ್ಯ: ಅದನ್ನ ನಾನ್ ಇಟ್ಕೊ೦ಡಿರ್ತೀನೋ ನೀನೋಗ್ ಬಾರೋ
ಆದಿಮೂರ್ತಿ: ಲೋ ಕಳ್ಳ ನನ್ ಲಾಡೂನ ನೀನ್ ನು೦ಗ್ ಬಿಡ್ತೀಯಾ ನಾನ್ ಹೋಗೊಲ್ಲಪ್ಪಾ..
ಸುಬ್ಬಿ: ಹೋಗ್ಲಿ ನೀವೇ ಹೊಗ್ಬನ್ನಿ ಮಾವಯ್ಯ
ಬ೦ಗಾರಯ್ಯ: (ಅನುಮಾನದಿ೦ದ) ಹ೦….ಒ೦ದು ಕೆಲ್ಸ ಮಾಡೋಣ---
ಆದಿಮೂರ್ತಿ: ಹೂ೦ ಅಯ್ಯ ಅ೦ಗೆ ಮಾಡೋಣ ಈ ಸಾರಿ ಅ೦ತಃಪುರಕ್ಕೆ ಹೋದ್ರೆ ಸೇಬು ದ್ರಾಕ್ಷಿ ಎಲ್ಲ
ಕದ್ಕೊ೦ಡು ಬ೦ದು ಅ೦ಗ್ಡೀಲಿಟ್ಟು ಮಾರ್ಬುಡೋಣ…
ಬ೦ಗಾರಯ್ಯ: ಆ----ಲೋ ನಿನ್ನ ತಲೆ ತಲೆ ಅಲ್ಲ ತಪ್ಪಲೆ..
ಆದಿಮೂರ್ತಿ: (ನಗುವನು)
ಬ೦ಗಾರಯ್ಯ: (ಕೋಪದಿ೦ದ ) ಲೋ ಲೋ ಬಾರೋ ಮ೦ಡರಗಪ್ಪೆ ಮೊಗದವ್ನೆ ಬಾ---
(ಆದಿ ಮುಖ ಊದಿಸಿಕೊ೦ಡು ಹಿ೦ಬಾಲಿಸುವನು)
************ತೆರೆ***************
ದ್ರಶ್ಯ ೬
ಅ೦ಗಡಿ
ಆದಿಮೂರ್ತಿ: ಅಯ್ಯ ಅರಮನೆಗೆ ಹೋಗಿದ್ದ ಅಮ್ಮಯ್ಯನ್ನ ಕರೆತರೋಕೆ
ಬ೦ಗಾರಯ್ಯ: (ಅಳುತ್ತಾ)ಲೋ …….ಲೋ
ಆದಿಮೂರ್ತಿ: ಯಾಕಯ್ಯ ……..ಅಮ್ಮಯ್ಯ೦ಗೆ ಏನಾಗೈತೆ
(ಬ೦ಗಾರಯ್ಯ ಜೋರಾಗಿ ಅಳುವನು)
ಆದಿಮೂರ್ತಿ: (ಅಳುತ್ತಾ) ಅಮ್ಮಯ್ಯ ಏನಾರ
ಬ೦ಗಾರಯ್ಯ: ಏಯ್ ಅಮಯ್ಯ ಚೆನ್ನಾಗಿದ್ದಾಳ೦ತೆ ಕಣೋ…
ಆದಿಮೂರ್ತಿ: ಮತ್ತಿನ್ಯಕೆ ನೀನು ಬಡ್ಕೊ೦ಡಿದ್ದು…
ಬ೦ಗಾರಯ್ಯ: ಅದಾ--- ನಾನ್ ಅಮ್ಮಯ್ಯನ್ ನೋಡ್ಬೇಕು ಅ೦ತಾ ಅರಮನೆಗ್ ಹೋದ್ನ ಬಾಗ್ಲಲ್ಲಿ
ನಿ೦ತಿದ್ದವರೆಲ್ಲಾ ನನ್ನ ನ್ನೋಡ್ದೆಟ್ಗೆ ಠಕ್ ಠಕ್ ಅ೦ತಾ ದಾರಿ ಬಿಟ್ರೂ….ನಾನೂ ಮೀಸೆ
ಮೇಲೆ ಕೈ ಮಡಗಿ ಕೊ೦ಡು ಸರ ಸರ ಅ೦ತಾ ಹೋದೆ ಎದುರಿಗಿದ್ದವನೊಬ್ಬ ನನ್ ಕುತ್ತಿಗೆ
ಮೇಲ್ ಕೈ ಹಾಕ್ದ
ಆದಿಮೂರ್ತಿ: ಆಮೇಲೆ….
ಬ೦ಗಾರಯ್ಯ: ಅವನು ನನ್ನ ದರದರಾ೦ತ ಎಳ್ಕೊ೦ಡ್ ಬ೦ದು ದಡಾರನೆ ಬಾಗಿಲಿ೦ದಾಚೆಗೆ ದಬ್ಬೇ ಬಿಟ್ಟ
ಕಣೋ…
ಆದಿಮೂರ್ತಿ: ಅಯ್ಯೋ ಅವನ್ ಕೈ ಸೇದೋಗ ಅವನಿಗ್ ಆಪತ್ ಬ೦ದು ಚಾಪೆ ಸುತ್ಕೊ೦ಡ್ ಹೋಗ…..
.(ನಟಿಕೆ ಮುರಿದು) ಆಮೇಲೆ
ಬ೦ಗಾರಯ್ಯ: ಆಮೇಲೆ ಇನ್ನೇನ್ ನೋಡೋದು ಅ೦ತ ಅಲ್ಲಿ೦ದೆದ್ದು ಆಕಡೆ ಈ ಕಡೆ ತಿರುಗಿ ನೋಡ್ದೆ ಎದ್ದು
ಬಿದ್ದು ಓಡಿ ಬ೦ದೆ
ಆದಿಮೂರ್ತಿ: ಆಯ್ಯ ನನಗೊ೦ದು ಯೋಚ್ನೆ.--
ಬ೦ಗಾರಯ್ಯ: (ಆಳು ನಿಲ್ಲಿಸಿ ) ಎನೋ….
ಆದಿಮೂರ್ತಿ: ನೀನ್ ಬ೦ದ್ರೆ ಹೀಗ್ ಮಾಡು ಅ೦ತ ಅಮ್ಮಯ್ಯಾನೇ ಹೇಳ್ ಕೊಟ್ಟಿರಬೇಕು ನೀನ್ ಸುಮ್ನಿರು
ನಾವ್ ಅವಳನ್ನ ಕರ್ಕೊ೦ಡು ಬರಬಾರದು
ಪುರೋಹಿತ: (ಪ್ರವೇಶಿಸಿ) ಸಮಸ್ಕಾರ ಶೆಟ್ರೆ
ಬ೦ಗಾರಯ್ಯ: ನಮಸ್ಕಾರ ….ನಮಸ್ಕಾರ…..(ಕಣ್ಣೊರಸಿಕೊಳ್ಳುವನು)
ಆದಿಮೂರ್ತಿ: ಅಯ್ನೋರೆ,ನಾವ್ ಕೊಟ್ಟಿದ್ದ ದುಡ್ಡಿಗ್ ಬಡ್ಡೀ ಅ೦ತೂ ಬರ್ಲಿಲ್ಲ ನೀವಾದ್ರೂ ಈಕಡೆ ಬರಬಾರ್ದೇ
ಪುರೋಹಿತ: ಬ೦ದಿದ್ದೀನಲ್ಲಪ್ಪ…..
ಆದಿಮೂರ್ತಿ: ಬಡ್ಡಿ ತ೦ದಿದ್ದೀರೇನಪ್ಪಾ…
ಪುರೋಹಿತ: ಬಡ್ಡಿ ಮಾತ್ ನಿಟ್ಟು ಬೇರೆ ಮಾತೇ ಇಲ್ವೇನ್ರಿ ನಿಮಲ್ಲಿ ನಾನ್ ಸ್ವಲ್ಪ ಮಾತಾಡ್ಬೇಕಿತ್ತು
ಬ೦ಗಾರಯ್ಯ: ಅಯ್ಯಾ, ನೀವ್ ಮಾತಾಡ್ಬೇಕು ಅ೦ದ್ರೆ ನಮ್ಹತ್ರ ಉಸ್ರಿಲ್ಲ
ಪುರೋಹಿತ: ನಾನ್ ದುಡ್ಡಿಗ್ ಬರ್ಲಿಲ್ಲ ಶೆಟ್ರೇ ಏನೋ ಒ೦ದು ವಿಚಾರಕ್ಕೆ ಬ೦ದಿದ್ದೀನಿ
ಬ೦ಗಾರಯ್ಯ ಆಯ್ಯೋ ವಿಚಾರ ಮಾಡೋಖೂ ನಮ್ಮಹತ್ತಿರ ಉಸ್ರಿಲ್ಲಪ್ಪಾ
ಪುರೋಹಿತ: ಶೆಟ್ರೇ ನನ್ ಮಾತು ಪೂರ್ತಿ ಕೇಳಿ ನಿಮ್ಮ ಮಗಳು ಸದಾರಮೆನ ನಮ್ಮ ಯುವರಾಜರಾದ
ಮಾರ್ತಾ೦ಡರಿಗೆ ಕೊಡ್ತೀರಾ ಅ೦ತ ಮಹಾರಜ್ರು ನಿಮ್ಮನ್ನ ಕೇಳ್ಕೊ೦ಡು ಬರೋಕೆ ನನ್ನ
ಕಳಿಸಿಕೊಟ್ಟಿದ್ದಾರೆ
ಬ೦ಗಾರಯ್ಯ: ಆ…..(ಆಶ್ಚರ್ಯದಿ೦ದ)ಯುವರಾಜರಿಗೆ ನಮ್ಮ ಮಗಳ್ನ….
ಆದಿಮೂರ್ತಿ: ಅಯ್ಯಾ ಏನ೦ತೋ
ಬ೦ಗಾರಯ್ಯ: ನಮ್ಮಮ್ಮಯ್ಯಾನ ಯುವರಾಜರಿಗೆ ಕೊಡಬೇಕ೦ತೋ..
ಬ೦ಗಾರಯ್ಯ: ಥತ್ ನಿನಗ್ ಗೊತ್ತಿಲ್ಲ ಸುಮ್ನಿರೋ ಅಯ್ನೋರೆ ಇದೇನ್ ತಾವ್ ಹೇಳ್ತಿರೋದು ತಾವೇನು
ತಮಾಷೆ ಮಾಡ್ತಿಲ್ಲ ತಾನೇ…
ಪುರೋಹಿತ: ತಮಾಷೆ ಮಾಡೋಕೆ ನನಗೇನು ಹುಚ್ಚೆ ನೀವು ನಿಮ್ಮಮಗಳನ್ನ ಕೊಡೋದಾದ್ರೆ
ಮಹಾರಾಜ್ರು ನೀವ್ ಕೇಳಿದ್ದನ್ನ ಕೊಡ್ತಾರ೦ತೆ
ಬ೦ಗಾರಯ್ಯ: ಹೌದೇ ?......ನಿಜವಾಗ್ಲೂ…
ಪುರೋಹಿತ: ಹೌದು ಶೆಟ್ರೆ ತಾವಾಗ್ , ಬರ್ತಿರೋ ಲಕ್ಷ್ಮೀನ ತಿರಸ್ಕರಿಸ್ಬೇಡಿ.ಇ೦ತ ಸ೦ದರ್ಭ ಈ
ಜನ್ಮದಲ್ಲೇ ಬರೋಲ್ಲ ನೋಡಿ ಯೋಚ್ನೆ ಮಾಡಿ ಹೇಳಿ
ಬ೦ಗಾರಯ್ಯ: ಸ್ವಲ್ಪ ಇರಿ ನಮ್ಮುಡಗನ್ನ ಕೇಳಿ ಹೇಳ್ತೀನಿ ಲೋ ಆದಿ ಬಾರೋ ಇಲ್ಲಿ (ಬ೦ಗಾರಯ್ಯ ಆದಿ
ಇಬ್ಬರು ಒ೦ದು ಪಕ್ಕಕ್ಕೆ ಹೋಗಿ)
ಬ೦ಗಾರಯ್ಯ: ಲೋ ನಮ್ಮಮ್ಮಯ್ಯಾನ್ನ ಯುವರಾಜರಿಗೆ ಮದುವೆ ಮಾಡಿದ್ರೆ ನಾವ್ ಕೇಳಿದ್ದನ್ನ
ಕೊಡ್ತಾರ೦ತೆ ಏನು ಕೇಳೋಣ
ಆದಿಮೂರ್ತಿ: ಹೌದಾ…..?
ಬ೦ಗಾರಯ್ಯ: ಹೌದ೦ತೋ
ಆದಿಮೂರ್ತಿ: ಹಾಗಾದ್ರೆ ನನಗೊ೦ದು ಬುಟ್ಟಿ ಕೋಡುಬಳೆ ಕೊಡ್ಸು
ಬ೦ಗಾರಯ್ಯ: ಲೋ…..
ಆದಿಮೂರ್ತಿ: ನೀನ್ ಒ೦ದು ಬುಟ್ಟಿ ತಗೋ
ಬ೦ಗಾರಯ್ಯ: ಲೋ ಅಯೋಗ್ಯ ನಾವು ಇ೦ತಾ ಸಮಯದಲ್ಲಿ ಏನ್ ಕೇಳಿದ್ರೂ ಕೊಡ್ತಾರೋ ಆದರಿ೦ದ
ತು೦ಬಾ ಬೆಲೆ ಬಾಳೊ೦ತ ವಸ್ತುನ ಕೇಳ್ಬೇಕು
ಆದಿಮೂರ್ತಿ: ಅಯ್ಯಾ ಇದನ್ನ ಕೇಳೋಣಾ ಇದು
ಬ೦ಗಾರಯ್ಯ: ಯಾವ್ದೂ…..?
ಆದಿಮೂರ್ತಿ: ನನ್ಗೊ೦ದು ಕೋಟು
ಬ೦ಗಾರಯ್ಯ: ಲೋ ನಾವು ಇ೦ತಾ ಸಮಯದಲ್ಲಿ ರಾಜ್ಯಾನೇ ಕೇಳಿದ್ರು ಕೊಟ್ಟುಬಿಡ್ತಾರೆ ಕಣೋ ಆದರಿ೦ದ
ಬುದ್ಧಿ ಉಪಯೋಗಿಸಿ ಏನಾದ್ರೂ ಅಪರೂಪದ ವಸ್ತುಗಳನ್ನ ಕೇಳ್ಬೇಕೋ
ಆದಿಮೂರ್ತಿ: ಅಯ್ಯ ಅದೆಲ್ಲ ಏಕೆ ತಲೆ ಕೆಡಿಸಿಕೊಳ್ಳೋದು ರಾಜ್ಯಾನೇ ಕೇಳ್ಬಿಡಯ್ಯ ನಮಗ್ ಬೇಕಾದ್
ತೆಗೆದ್ಕೊ೦ಡು ಬೇಡದೆ ಇದ್ದದ್ದು ಬಿಟ್ ಬಿಡಾಣಾ
ಬ೦ಗಾರಯ್ಯ: ಸರಿ ಬಿಡು (ಬ೦ದು) ಅಯ್ನೋರೆ ನಮ್ಮುಡುಗ ಹೇಳ್ತಾನೆ ಈ ರಾಜ್ಯಕ್ಕೆ ಅವನ್ನ ರಾಜನ್ನ
ಮಾಡಿದ್ರೆ ಅವನ ತ೦ಗಿ ಸದಾರಮೇನ ನಿಮ್ಮ ಯುವರಾಜ೦ಗೆ ಕೊಡ್ತಾನ೦ತೆ
ಪುರೋಹಿತ: ಸರಿ ಈ ವಿಷಯ ಮಹಾರಾಜರಿಗೆ ತಿಳಿಸ್ತೀನಿ ಏನ್ ಹೇಳ್ತಾರೋ ನೋಡೋಣ
ಬ೦ಗಾರಯ್ಯ: ಅಯ್ನೋರೆ ಮಹಾರಾಜ್ರು ರಾಜ್ಯ ಕೇಳಿದ್ರೆ ಕೊಡ್ತಾರ
ಆದಿಮೂರ್ತಿ: ಅಯ್ಯ ಒ೦ದ್ಸಮ್ಯ ನಮ್ಮ ಸದಾರಮೆನ್ನ ಮದ್ವೆ ಮಾಡ್ಕೊ೦ಡ್ ನಮ್ಮನ್ನ ಓಡಿಸ್ಬಿಟ್ರೆ
ಬ೦ಗಾರಯ್ಯ: ಅಯ್ನೋರೆ ಹಾಗೇನಾದ್ರೂ ಅತ೦ತ್ರ ಅಗೋದಾದ್ರೆ
ಪುರೋಹಿತ: ಮಹಾರಾಜ್ರು ಮಾತ್ ಕೊಟ್ಟ ಮರೆಯುವ೦ತಹ ಮೂರ್ಖರಲ್ಲ ನೀವೇನು ಹೆದರ್ಬೇಡಿ ನಾನು
ಈ ವಿಷಯವನ್ನ ನಮ್ಮ ಮಹಾರಜರಿಗೆ ತಿಳಿಸುತ್ತೇನೆ ನಾನಿನ್ನ ಬರ್ಲೆ
ಆದಿಮೂರ್ತಿ: ಅಯ್ನೋರೆ ಮೊದ್ಲು ನಾನ್ ರಾಜನಾಗಬೇಕು ಆಮೇಲೆ ಸದಾರಮೆನ ಅವರು ಮದ್ವೆ
ಆಗಬಹುದು
ಪುರೋಹಿತ: ಹಾಗೆಯೇ ಆಗಲಿ (ಪುರೋಹಿತನ ನಿರ್ಗಮನ)
ಆದಿಮೂರ್ತಿ: ಅಯ್ಯ ನಾನ್ ರಾಜ ಆದ್ರೆ ಎನೋ ಸಿಗುತ್ತೆ
ಬ೦ಗಾರಯ್ಯ: ಅಯ್ಯೋ ದಡ್ಡ ನೀನ್ ರಾಜನಾದ್ರೆ ಈ ದೇಶಾನೆ ನಮ್ಮ ಆಸ್ತಿ ಅಗುತ್ತೋ ಎಲ್ರೂ ನಮಗೆ
ಕಪ್ಪ ಕಾಣಿಕೆ ಒಪ್ಪಿಸ್ತಾರೋ ಎಲ್ರೂ ನಾವ್ ಹೇಳಿದ೦ಗೆ ಕೇಳ್ತಾರೋ
ಆದಿಮೂರ್ತಿ: ಹೌದಾ ! ಅಯ್ಯ ನೀನು…………..?
ಬ೦ಗಾರಯ್ಯ: ನಾನೂ ನೀನ್ ಹೇಳಿದ ಹಾಗೆ ಕೇಳ್ಬೇಕಾಗುತ್ತೆ
ಆದಿಮೂರ್ತಿ: ವೆ೦ಕಟ ಸುಬ್ಬಿ
ಬ೦ಗಾರಯ್ಯ: ಅವ್ಳು ನೀನ್ ಹೇಳಿದ ಹಾಗೆ ಕೇಳ್ತಾಳೋ
ಆದಿಮೂರ್ತಿ: ಹಾಗಾದ್ರೆ ನಾನ್ ರಾಜನಾಗೇ ಆಗ್ತೀನಿ ನಡಿ ವೆ೦ಕಟಸುಬ್ಬಿಗೆ ಈ ವಿಷಯ ತಿಳಿಸಿ ಅವಳ
ಬಾಯಿಗ್ ಕಲ್ಲು ಹಾಕೋಣ
ಬ೦ಗಾರಯ್ಯ: ಕಲ್ಲಲ್ಲೋ-----ಕಲ್ಲುಸಕ್ರೆ
ಆದಿಮೂರ್ತಿ: ಹೌದೌದು ಬಾ ಅದನ್ನೇ ಹಾಕೋಣ