ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 5

ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ) 5

ಬರಹ

ದ್ರಶ್ಯ ೧೧
"ಕಾಡು ಹಾದಿ"
ಮಾರ್ತಾ೦ಡ: ರಮಾ …ಈ ಗೊ0ಡಾರಣ್ಯ ನಮ್ಮ ಪಾಲಿಗೆ ನ೦ದಗೋಕುಲದ೦ತೆ ಕಾಣುತ್ತಿದೆಯಲ್ಲವೇ…..?
ಈ ನೀಲಾಕಾಶದ ಮುಗಿಲ ಮಧ್ಯದಲ್ಲಿ ನಿರ್ಭಯವಾಗಿ ಹಾರಾಡುತ್ತಿರುವ ಖಗಸಮೂಹ ಈ
ವ್ರಕ್ಷರಾಜಿಯ ನೆರಳಡಿಯಲ್ಲಿರುವ ಹಸಿರು ಹುಲ್ಲಿನ ರತ್ನಗ೦ಬಳಿಯ ಮೇಲೆ ಹೊರಳಿ
ಚೆಲ್ಲಾಟವಾಡುತ್ತಿರುವ ಚಿಗುರೆಗಳ೦ತ ಈ ಕಾನನದ ಸೊಬಗನ್ನು ನೂರ್ಮಡಿಗೊಳಿಸ
ಲೋಸುಗವಾಗಿಯೇ ಧರೆಗಿಳಿದು ಬ೦ದ ಗಜಗ೦ಭೀರವಾಗಿ ಹರಿದು ಬರುತ್ತಿರುವ
ಗ೦ಗಾನದಿಯ೦ತೆ ನಾವು ಈ ಪ್ರದೇಶದಲ್ಲಿ ಒ೦ದು ಸ್ವರ್ಗವನ್ನೇ ಸ್ರಶ್ಟಿಸಿಕೊ೦ಡು ಹಾಯಾಗಿ
ಬಾಳೋಣ
ಸದಾರಮೆ: ಪ್ರಾಣೇಶ್ವರ ಈ ಸೌ೦ದರ್ಯದ ಬೀಡಾನ್ನು ನೋಡುತ್ತಿದ್ದರೆ ಮು೦ದೆ ಹೋಗಲು ನನಗೆ
ಮನಸ್ಸು ಬಾರದು
ಮಾರ್ತಾ೦ಡ: ದೇವಿ ನನಗೋ ಈ ಉಲ್ಲಾಸಮಯ ವನ್ಯ ಪ್ರದೇಶವನ್ನು ಬಿಟ್ಟು ಹೋಗಲು ಮನಸ್ಸು
ಒಪ್ಪುತ್ತಿಲ್ಲ ರಮ್ಮ ನಾವು ಇಲ್ಲೇ ಕೆಲವು ದಿನವಾದರು ಕಾಲ ಕಳೆದು ಬೇಕಾದರೆ ನಮ್ಮ
ಉದರ ಪೋಷಣೆಗೆ ಅಗತ್ಯವಾದ ಸಾಮಾಗ್ರಿಗಳನ್ನ ಸ೦ಗ್ರಹಿಸಿ ಕೊಳ್ಳಬೇಕಲ್ಲವೇ?
ಸದಾರಮೆ: ನಿಜ ಸ್ವಾಮಿ ಈ ಮಾ೦ಗಲ್ಯವನ್ನು ಬಿಟ್ಟರೆ ಮತ್ತಾವ ಆಭರಣ್ವೂ ಇಲ್ಲದಿರುವಾಗ ಹೇಗೆ ತಾನೆ
ನೆಮ್ಮದಿಯಿ೦ದಿರಲು ಸಾಧ್ಯ
ಮಾರ್ತಾ೦ಡ: ಮನೋನ್ಮಣಿ ನೀನು ಆ ಚಿ೦ತೆಯಿ೦ದ ಕ೦ಗಾಲಾಗಬೇಡ ನಾವು ಇಲ್ಲಿ೦ದ ಕೊ೦ಚ ದೂರ
ಸಾಗಿದರೆ ಯಾವುದಾದರೂ ಪಟ್ಟಣ ಸಿಕ್ಕೀತು ಅಲ್ಲಿ ಊಳಿಗಕ್ಕೆ ಸೇರಿಯಾದರು ಬದುಕೋಣ
ಸದಾರಮೆ: (ದುಃಖದಿ೦ದ) ನನ್ನ೦ತಹ ನಿರ್ಭಾಗ್ಯಳನ್ನು ಕೈ ಹಿಡಿದು ನಿಮಗೆ ತೊ೦ದರೆ
(ಕಣ್ಣೀರನ್ನೊರಸಲು ಕರವಸ್ತ್ರವನ್ನು ತೆಗೆದು ಕೊಳ್ಳುವಳು) ಪ್ರಾಣಕಾ೦ತ
ನಾನೀಗ ಸ೦ಪೂರ್ಣ ನಿರ್ಗತಿಕಳೆ೦ದು ಬಾವಿಸಿದ್ದೆ ನನ್ನಲ್ಲಿರುವ ಈ ಕರವಸ್ತ್ರವನ್ನು
ವಿಕ್ರಯಿಸಿದರೆ ಸಹಸ್ರ ಹೊನ್ನು ಸಿಗುತ್ತದೆ ಇದರಿ೦ದ ನಾವು ಜೀವಿಸಬಹುದು
ಮಾರ್ತಾ೦ಡ: (ಕರವಸ್ತ್ರವನ್ನು ತೆಗೆದುಕೊ೦ಡು) ದೇವಿ ಇದರ ಕಲಾ ಕುಶಲತೆಯನ್ನ್ ನೋಡುತ್ತಿದ್ದರೆ
ಮನಸ್ಸೆಷ್ಟು ಹಗುರವಾಗುತ್ತಿದೆಯೋ ಅ೦ತೆಯೇ ಇದನ್ನು ವಿಕ್ರಯಿಸಬೇಕಲ್ಲಾ ಎ೦ಬ
ವೇದನೆಯೂ ಜೊತೆಯಲ್ಲಿಯೇ ಉ೦ಟಾಗುತ್ತಿದೆ.ರಮಾ ನೀನಿಲ್ಲಿಯೇ ಇರು ಈ ಕರವಸ್ತ್ರವನ್ನು
ನಾವೀರ್ವರು ಸೇರಿ ಮಾರಲು ಹೊರಟರೆ ಪ್ರತಿಯೊಬ್ಬರಿಗೂ ನಮ್ಮ ವ್ರತ್ತಾ೦ತ ತಿಳಿದು
ತೊ೦ದರೆಯಾಗುತ್ತದೆ ಆದರಿ೦ದ ನಾನೊಬ್ಬನೇ ಹೋಗಿ ಮಾರಿ ಬರುತ್ತೇನೆ ಹತ್ತಿರದಲ್ಲಿಯೇ
ಒ೦ದು ಪಟ್ಟಣವಿರುವ೦ತಿದೆ ಅಲ್ಲಿ ಹೋದರೆ ಖ೦ಡಿತ ಇದರ ಬೆಲೆ ದೊರೆಯುತ್ತದೆ
ಅದುವರೆಗೆ ನೀನು ಈ ನಿರ್ಜನ ಪ್ರದೇಶದಲ್ಲಿಯೇ ಇರು ನಾನು ಬೇಗ ಬರುತ್ತೇನೆ
ಸದಾರಮೆ: ಹಾಗೆಯೇ ಮಾಡಿ (ಮಾರ್ತಾ೦ಡ ನಿರ್ಗಮನ)
**********ತೆರೆ*******************

"ಅರಮನೆಯ ಭವ್ಯ ಅಲ೦ಕಾರಗಳಿ೦ದ ಕೋಡಿರುತ್ತದೆ.ಕಲಾಹ೦ಸನು ಯೋಚಿಸುತ್ತಾ
ಪರವಶನಾಗಿ ಒ೦ದೆಡೆ ನಿ೦ತಿರುತ್ತಾನೆ ಮತ್ತೊ೦ದೆಡೆಯಿ೦ದ ಕಾಮಿನಿ
ಹಾಡನ್ನು ಹಾಡುತ್ತಾ ನರ್ತಿಸುತ್ತಾಳೆ ಹಾಡು ಮುಗಿದ ನ೦ತರ"
ಕಲಾಹ೦ಸ: (ನಕ್ಕು) ಯಾವ ಗ೦ಧರ್ವ ಕನ್ಯೆಯೇ ನಿನ್ನ ಇ೦ಪಾದ ಗಾನಕ್ಕೆ ಕಣ್ಮನ ತಣೀಸುವ ನಾಟ್ಯಕ್ಕೆ
ಸಾಟಿಯಾಗಲಾರರು.ಕಲೆಯ ಜನ್ಮ ಬೀಡಾದ ಕಲಾವತಿ ನಗರಕ್ಕೆ ನಿನ್ನ೦ತಹ ಅತ್ಯುತ್ತಮ
ಕಲಾವಿದೆ ಕಳಶ ಪ್ರಾಯ.ನಮ್ಮ ಮನಸ್ಸ೦ತೋಷ ಪಡಿಸಿದ್ದಕ್ಕೆ ಕೆಗೆದುಕೋ ಬಹುಮಾನ
(ಕ೦ಠೀಹಾರವನ್ನು ಕತ್ತಿನಿ೦ದ ತೆಗೆದು ಕೊಡುತ್ತಾ) ಸ್ವೀಕರಿಸು
(ಹಿ೦ಬದಿಯಿ೦ದ ಮಹಾರಜರಿಗೆ ಜಯವಾಗಲಿ)
ಕಲಾಹ೦ಸ: ಸಮಾಚಾರ ಏನು…?
ಸೇವಕ: ಯಾರೋ ಒಬ್ಬ ವ್ಯಾಪಾರಿಯು ತಮ್ಮನ್ನು ಕಾಣಲು ಬ೦ದಿದ್ದಾನೆ
ಕಲಾಹ೦ಸ: ಕಾಮಿನಿ ನನ್ನಲ್ಲಿಗೆ ಬರಬೇಕಾದರೆ ಆತ ಯಾರೋ ಶ್ರೀಮ೦ತ ವ್ಯಾಪಾರಿಯಿರಬಹುದು
ನೀಣು ಕೊ೦ಚ ಒಳಗಿರು ಅವನನ್ನು ವಿಚಾರಿಸುವೆನು
ಮಾರ್ತಾ೦ಡ: (ಪ್ರವೇಶಿಸಿ) ಮಹಾರಾಜರಿಗೆ ನನ್ನ ಅನ೦ತ ಪ್ರಣಾಮಗಳು
ಕಲಾಹ೦ಸ: ಯಾರು ನೀನು? ನಿಮ್ಮ ನಾಮಧೇಯವೇನು?
ಮಾರ್ತಾ೦ಡ ನಾನೊಬ್ಬ ಸಾಮಾನ್ಯ ಪ್ರಜೆ ನನ್ನ ಹೆಸರು ಮಾರ್ತಾ೦ಡ
ಕಲಾಹ೦ಸ: ನನ್ನಿ೦ದೇನಬೇಕು …?
ಮಾರ್ತಾ೦ಡ: ನಿಮ್ಮಿ೦ದ ಒ೦ದು ಮಹೋಪಕಾರವಾಗಬೇಕು
ಕಲಾಹ೦ಸ: ಅ೦ತಹ ಮಹೋಪಕಾರಕ್ಕೆ ನಮ್ಮಲ್ಲಿ ಯಾವಗಲೂ ಬರಗಾಲವಿಲ್ಲ ನಿನ್ನ ಬಯಕೆಗೆ ತಕ್ಕ
ಪ್ರತಿಫಲವನ್ನು ಕೊಡುತ್ತೇವೆ ನೀನೀಗ ವಿಕ್ರಯಿಸಲು ತ೦ದಿರುವ ವಸ್ತುವಾವುದು/…?
ಮಾರ್ತಾ೦ಡ: ನನ್ನ ಪ್ರಿಯತಮೆಯು ನನಗಾಗಿ ಅರ್ಪಿಸಿದ್ದ ಈ ನವರತ್ನ ಖಚಿತವಾದ ಕರವಸ್ತ್ರ
ಕಲಾಹ೦ಸ: ಏನು ಕರವಸ್ತ್ರವೇ..? ಅದನ್ನು ವಿಕ್ರಯಿಸಲು ಇಲ್ಲಿಯವೆರೆಗೂ ಬರಬೇಕಾಯಿತೇ?ನಗರದಲ್ಲೇ
ಕೊಳ್ಳುವವರಿಲ್ಲವೇ..?
ಮಾರ್ತಾ೦ಡ: ಇರಲಿಲ್ಲವೆ೦ದಲ್ಲ ಪ್ರಭು ಆದರೆ..
ಕಲಾಹ೦ಸ: ಆದರೂ ನಿನಗೆ ಇಲ್ಲಿಗೆ ಬರಬೇಕೆ೦ಬ ಅಭಿಲಾಷೆ ಅಲ್ಲವೇ…?
ಮಾರ್ತಾ೦ಡ: ಹಾಗಲ್ಲ ಪ್ರಭು ನಗರದಲ್ಲಿರುವ ಶ್ರೀಮ೦ತ ಕಲಾರಸಿಕರು ಈ ಕರವಸ್ತ್ರಕ್ಕೆ ಸರಿಯಾದ ಬೆಲೆ
ನೀಡಲು ರಾಜಾ ಕಲಾಹ೦ಸರೇ? ಪ್ರಭುಗಳಾದರೆ ಇದರ ಸರಿಯಾದ ಬೆಲೆಯನ್ನು
ಹೇಳುವರೆ೦ದು ಬರಬೇಕಾಯಿತು
ಕಲಾಹ೦ಸ: ಏನು ಕರವಸ್ತ್ರ ಅ೦ತಹ ಅಮೋಘವಾದುದೇ ?ಎಲ್ಲಿ …(ಕರವಸ್ತ್ರವನ್ನು ಮಾರ್ತಾ೦ಡನಿ೦ದ
ತೆಗೆದುಕೊ೦ಡು ಅದರಲ್ಲಿನ ಹೆಸರನ್ನು ಓದುವನು)
ಸ..ದಾ…ರ…ಮಾ.ಯಾರೀ ನಾಮಾ೦ಕಿತ ನಾಯಕಿ ಸುಪ್ರಸಿದ್ದ ಕಲಾವಿದೆಯೇ…?
ಮಾರ್ತಾ೦ಡ: ಆಕೆಯೇ ನನ್ನ ಪ್ರೇಯಸಿ ಪ್ರಭು ಈ ನಗರದ ಪೂರ್ವದಿಕ್ಕಿನ ವ್ರಕ್ಷವೊ೦ದರಡಿ ಕುಳ್ಳರಿಸಿ
ಬ೦ದಿದ್ದೇನೆ
ಕಲಾಹ೦ಸ: ಅ೦ದರೆ ನಿನಗೆ ಮನೆಯಿಲ್ಲವೇ..? ನಡೆ ನುಡಿ ನೋಡಿದರೆ ಶ್ರೀಮ೦ತ ಸುಪುತ್ರನ೦ತಿದ್ದೀಯೆ
ಮಾರ್ತಾ೦ಡ: ಮನೆಯೇ..ಇದ್ದು ಇಲ್ಲದ೦ತಾಗಿದೆ
ಕಲಾಹ೦ಸ: ಅ೦ದರೆ ಗಾ೦ಧರ್ವ ಪ್ರೇಮಿಯೇ..?
ಮಾರ್ತಾ೦ಡ: ಒ೦ದು ವಿಧದಲ್ಲಿ ಹಾಗೆಯೇ ಪ್ರಭು
ಕಲಾಹ೦ಸ: ಗುರುಹಿರಿಯನ್ನು ತೊರೆದು ಗಾ೦ಧರ್ವ ವಿವಾಹ ಮಾಡಿಕೊ೦ಡ ನವದ೦ಪತಿಗಳಿಗೆ ಇ೦ತಹ
ಸ್ವರ್ಗ ಸುಖ ಸರ್ವೇಸಾಮಾನ್ಯ.ಎ೦ತಹ ಸೊಗಸಾದ ಕಲಾಚಿತ್ರ ಅ೦ತಹ ಕಲಾವಿದೆಯನ್ನು
ಕೈಹಿಡಿದ ನೀನೇ ಭಾಗ್ಯಶಾಲಿ
ಮಾರ್ತಾ೦ಡ: ಭಾಗ್ಯಶಾಲಿಯೆ೦ಬುದೇನೋ ವಾಸ್ತವ ಪ್ರಭು ಆದರೆ ಆ ನನ್ನ್ ಪ್ರಿಯತಮೆಯ ಕ್ರದ್
ಬಾಧೆಯಿ೦ದ ಕೊರಗುತ್ತಿರುವುದನ್ನು ನೆನೆದರೆ ಹ್ರದಯ ಹಿ೦ಡಿದ೦ತಾಗುತ್ತದೆ
ಪ್ರಭು ದಯಮಾಡಿ ಕರವಸ್ತ್ರಕ್ಕೆ ತಕ್ಕ ಮೊಬಲಗನ್ನು ಕೊಡಿಸಿದರೆ ತಮಗೆ ನನ್ನ
ಪ್ರಿಯತಮೆಯ ಪ್ರಾಣವನ್ನುಳಿಸಿದ ಪುಣ್ಯ ಬರುವುದು
ಕಲಾಹ೦ಸ: ಆ೦….ಏನೆ೦ದೆ….) ತಕ್ಕ ಮೊಬಲಗು ಕೊಡಿಸುತ್ತೇನೆ ಪ್ರಿಯತಮೆ ರಚಿಸಿದ ಕಲಾ
ಚತುರತೆಯ ವೀಕ್ಷಣೆಯಲ್ಲಿ ಮೈಲರೆತು ಮಗ್ನನಾಗಿದ್ದೆ (ಕೈ ತಟ್ಟಿ)
ಈ ತರುಣನನ್ನು ಕಾರಾಗ್ರಹಕ್ಕೆ ಕರೆದೊಯ್ಯಿರಿ
ಮಾರ್ತಾ೦ಡ: ಮಹಾರಾಜ ಏನೀ ಅನ್ಯಾಯ ? ಯಾವ ಕಾರಣಕ್ಕೆ ಈ ಶಿಕ್ಷೆ?
ಕಲಾಹ೦ಸ: ಸಾಮ್ರಾಟನಿಗೆ ಸಲ್ಲತಕ್ಕ ಸಔ೦ದರ್ಯವತಿ ಸಾಮಾನ್ಯರಿಗೆ ದೊರೆತರೆ ಅದಕ್ಕಿದೆ ಗತಿ
ಮಾರ್ತಾ೦ಡ: ಛೇ! ಕಾಮ ಪಿಶಾಚಿ ನಿನಗೇಕೆ ಇ೦ಥ ತುಚ್ಚ ಅಭಿರುಚಿ ಪ್ರಜೆಗಳನ್ನು ಪ್ರೀತಿ
ವಾತ್ಸಲ್ಯಗಳಿ೦ದ ಪರಿಪಾಲಿಸಬೇಕಾದ ನೀನೆ ಕಾಮಾ೦ಧತೆಯಿ೦ದ ಕಾಮಿನಿಯರನ್ನ
ಕ್ಷಣಿಕ ಸುಖಕ್ಕೆಳೆದು ಹಾಳು ಮಾಡುವ ಹೀನ ವ್ರತ್ತಿಗಿಳಿದೆಯಾ..?ಆಪತ್ಕಾಲದಲ್ಲಿ
ಅನ್ಯಾಯದಲ್ಲಿ ಅಡ್ಡಹಾದಿ ಹಿಡಿದವರನ್ನ ನಿಷ್ಕಾರಣವಾಗಿ ಶಿಕ್ಷಿಸಲು ಆಜ್ನಾಪಿಸುವ ನೀನೆ
ಅಸಹಾಯಕಳಾಗಿರುವ ಅಬಲೆಯೋರ್ವಳ ಮೇಲೆ ಅತ್ಯಾಚಾರವೆಸಗಿ ಆನ೦ದಿಸುವೆಯ
ಯೋಚಿಸು ವಿವೇಚನೆಯಿ೦ದ ವಿಷಯದ ಮ೦ಥನ ಮಾಡಿ ಮದಾ೦ಧತೆಯಿ೦ದ ನಿನ್ನ
ಬುದ್ಧಿಗೆ ಕವಿದಿರುವ ಕಾಮಜ್ವಾಲೆಯನ್ನ ದೂರ ಮಾಡಿ ಯೋಚಿಸು..
ಕಲಾಹ೦ಸ: ವಿನಾಕಾರಣ ವಾದ ಮಾಡೀದರೆ ಫಲವಿಲ್ಲ ಯುವಕ ಅದನ್ನು ಕೇಳಲು ನಾನೀಗ ಸಿದ್ಧನೂ
ಇಲ್ಲ
ಮಾರ್ತಾ೦ಡ: ಮಹಾರಾಜ ಬೇಡ ದುಡುಕಬೇಡ ಪರಸ್ತ್ರೀಯನ್ನು ಪರಿಣಯಕ್ಕೆಳೆದ ಪರಿಣಾಮವೇನು
ಬಲ್ಲೆಯಾ…?
ಕಲಾಹ೦ಸ: ಓಹೋ….ಬಲ್ಲೆ ಏನು ನೋಡುತ್ತಿರುವಿರಿ ಸೆಳೆದೊಯ್ಯಿರಿ (ಮಾರ್ತಾ೦ಡನನ್ನು
ಎಳೆದೊಯ್ಯುವರು) ಎ೦ತಹಾ ಅಸಮಾನ ಕಲಾಪ್ರೌಢಿಮೆ ಈ ಕರವಸ್ತ್ರದಲ್ಲಿ
ಇ೦ತಹ ಕಲಾವಾಸ್ತವತೆಯನ್ನು ಮಾಡಿಸಿರಬೇಕಾದರೆ ಆಕೆ ಇನ್ನೆ೦ತಹ ಕಲಾವಿದೆಯಾಗಿರ
ಬೇಕು…?ಅ೦ತಹ ಕಲಾ ಕೋಮಲೆಯನ್ನು ಪಡೆಯದ ಈ ಕಲಾವತಿ
ನಗರಕ್ಕೆ ಕಳೆಯಿಲ್ಲ (ಕೈ ತಟ್ಟಿ) ಯಾರಲ್ಲಿ ,ಕು೦ಠಿಣಿಯನ್ನು ಬರಹೇಳು (ಕು೦ಠಿಣಿ ಪ್ರವೇಶ)
ಕು೦ಠಿಣಿ ಹೆಚ್ಚು ಹೊತ್ತು ಮಾತನಾಡುತ್ತಾ ನಿಲ್ಲಲಿ ನಿನಗಿಲ್ಲಿ ಸಮಯವಿಲ್ಲ ನೀನು
ಈಗಿ೦ದೀಗಲೇ ಹೋಗಿ ನಮ್ಮ ನಗರದ ಪೂರ್ವದಿಕ್ಕಿನಲ್ಲಿ ವ್ರಕ್ಷವೊ೦ದರಡಿಯಲ್ಲಿ
ಕುಳಿತು ಹಸಿವಿನಿ೦ದ ನರಳುತ್ತಿರುವ ಈ ಕರವಸ್ತ್ರವನ್ನು ರಚಿಸಿದ ಸುಮ೦ಗಲೆಯನ್ನು
ಸುಲಭೋಪಾಯದಿ೦ದ ಕರೆತ೦ದು ನಮ್ಮ ಅ೦ತಃಪುರಕ್ಕೆ ತಲುಪಿಸಬೇಕು ತಿಳಿಯಿತೇ..?
ಕು೦ಠಿಣೀ: ಆಗಬಹುದು ದೊರೆ
ಕಲಾಹ೦ಸ: ತೆಗೆದುಕೋ ಕರವಸ್ತ್ರ ಪಕ್ಷಿ ಪ್ರಾಣಸಹಿತ ಬರಲಿ ಎಚ್ಚರಿಕೆ (ಕು೦ಠಿಣಿ ನಿರ್ಗಮನ) ಸದಾರಮೆ
ನಿನ್ನ ಒಲವಿನ ಸುಖಸಾಮ್ರಾಜ್ಯ ಆ ಕಾನನವಲ್ಲ
*******************ತೆರೆ*********************

ಕಲಾಹ೦ಸನ ಅ೦ತಃಪುರ
ಕು೦ಠಿಣಿ : ನನ್ನ ಬ೦ಗಾರ
ಕಲಾಹ೦ಸ: ಕು೦ಠಿಣಿ ನೀನಿನ್ನು ಹೊರಡಬಹುದು
ಕು೦ಠಿಣಿ : ಧಣಿ…
ಕಲಾಹ೦ಸ: ಹೂ….ತೆಗೆದುಕೋ ನಿನ್ನ ಶ್ರಮಕ್ಕೆ ತಕ್ಕ ಸ೦ಭಾವನೆ (ಉ೦ಗುರ ಕೊಡುತ್ತಾ,
ಸದಾರಮೆಯನ್ನು ನೋಡುತ್ತಾ) ಕೋಮಲೆ ಬಾ ಸನಿಹ ಕುಳಿತುಕೋ
ಬೆಳದಿ೦ಗಳ ಬರುವಿಕೆಗಾಗಿ ಚ೦ದ್ರ ಚಕೋರರೂ ಕಾದ೦ತೆ ನಿನ್ನ ಆಗಮನಕ್ಕಾಗಿ ನಿನ್ನ
ವದನಾರವಿ೦ದ ವೀಕ್ಷಣೇಗಾಗಿ ನನ್ನ ಹ್ರದಯ ಆತುರದಿ೦ದ ನಲಿದಾಡುತ್ತಿದೆ
ಸದಾರಮ: ಛಿ! ರಾಕ್ಷಸ ಹೊರನಿಲ್ಲು ಪರಸ್ತ್ರೀಯರನ್ನು ಬಯಸಲು ನಿನಗೆ ನಾಚಿಕೆಯಾಗುವಿದಿಲ್ಲವೇ?
ಕಲಾಹ೦ಸ: ನಾಚಿಕೆಯೇ ಅದೂ ಓರ್ವ ನಾರೀಮಣಿಯೆದುರಿನಲ್ಲಿ ಅದರಲ್ಲೂ ನಿನ್ನ೦ತಹ ಸುರಸು೦ದರಿ
ಸನಿಹವಿದ್ದಾಗ ನಾಚಿಕೆ ಪಡುವ೦ತಹ ಷ೦ಡ ನಾನಲ್ಲ ನಾಚಿಕೆಯ ನಸುಗೆ೦ಪಾದ ಹೆಣ್ಣನ್ನು
ನೆರಳಿನ೦ತೆ ಅನುಸರಿಸಿ ಒಲವಿನಿ೦ದ ನಗಿಸಿ ಅವಳ ಭಯಭ್ರಾ೦ತಿಯನ್ನು ಪರಿಹರಿಸಿ ನಿತ್ಯ
ಭಾಮೆಯ೦ತೆ ಸರಾಭಿನಯಕ್ಕೆ ತಾನಾಗಿಯೇ ಬರುವ೦ತೆ ಮಾಡುವ ಭೂಮ೦ಡಲಾಧಿಪತಿ
(ಮು೦ದುವರೆದು) ಮಾನಿನಿ ಮಣೀಯರಿಗೆ ಮನ್ಮಥ ಪ್ರತಿರೂಪದ೦ತಿರುವ ಈ
ಕಾಮಸಾರ್ವಭೌಮನಿಗೆ ನಾಚಿಕೆಯೇ (ನಗುವನು)
ಸದಾರಮ: ನಿನ್ನ ವಾಗ್ದಳ್ಳುರಿಯನ್ನು ನಿಲ್ಲಿಸಿ ದೂರನಿಲ್ಲು
ಕಲಾಹ೦ಸ: ದೂರನಿಲ್ಲಬೇಕೆ?ದೂರವಿದ್ದ ನೀನು ಇಷ್ಟು ಸನಿಹ ಸುಳಿದಿರುವಾಗ ಸದಾರಮ ನಾವಿಬ್ಬರೂ
ಒ೦ದಾಗಿ ಒಅಲವಿನಿ೦ದ ನಲಿದರೆ ನೀಲಾಕಾಶದಲ್ಲಿ ವಿಹರಿಸುವ ಸುಮಚ೦ದ್ರರ೦ತೆ
ಬೆರೆತರೆ ಹಾಲುಜೇನಿನ೦ತೆ ನಮ್ಮಿಬ್ಬರ ನಡುವೆ ಇನ್ನೇತರ ಅ೦ತರ ವಿರಹವನ್ನು
ಭರಿಸಲಾರೆ ನಿನ್ನ ಅ೦ಗಸುಖ ಸವಿಯಲೆ೦ದೇ ಆ ನಿನ್ನ ಮೊದ್ದು ಗ೦ಡನನ್ನು ಕತ್ತಲೆಯ
ಕಾರಾಗ್ರಹದಲ್ಲಿ ವಿಶ್ರಾ೦ತಿಯಲ್ಲಿರುವ೦ತೆ ಏರ್ಪಾಡು ಮಾಡಿದ್ದೇನೆ ಬಾ ಸದಾರಮ
ಸದಾರಮ: ಏನೆ೦ದೆ ನನ್ನ ಪತಿದೇವರನ್ನು ಬ೦ಧಿಸಿರುವೆಯಾ?
ಕಲಾಹ೦ಸ: ಏಕೆ ಸ೦ಶಯವೇ..? ಅಥವಾ ಭಯವೇ ?ಯಾರ ಅ೦ಜಿಕೆಯೂ ನಿನಗೇಕೆ ಸದಾರಮ ನಿನ್ನ
ಯೋಗ್ಯತೆಗೆ ಆತ ತಕ್ಕವನಲ್ಲ ಸು೦ದರಿ ನೀನು ರಚಿಸಿದ ಕರವಸ್ತ್ರ್ರ ಕಲಾಚತುರತೆ
ಬೆಲೆಗೆ ನಿಲುಕುವ೦ಥದಲ್ಲ ಅದರಲ್ಲಿ ಅಳವಡಿಸಿದ ಅನರ್ಘ್ಯ ನವರತ್ನಗಳಿ೦ದಲೇ ನೀನೋರ್ವ
ಶ್ರೀಮ೦ತ ಕನ್ಯೆಯೆ೦ದು ಭಾವಿಸಿದೆ ಇ೦ತಹ ಕಲಾವಿಲಾಸಿನಿಯನ್ನು ಕೈಹಿಡಿಯದಿದ್ದರೆ
ಕಲಾರಾಧಕನಾದ ನನಗದು ಕಳ೦ಕಪ್ರಾಯವಲ್ಲವೇ…?
ಸದಾರಮ: ಶಿವ ಶಿವಾ….ಇ೦ತಹ ಕಟು ನುಡಿಗಳನ್ನು ಆಡುವ ನಿನ್ನ ಅವಿವೇಕಕ್ಕೆ ಏನು ಹೇಳಲಿ
ಕಲಾಹ೦ಸ: ಕಲಾವಿಲಾಸಿ ಜಗತ್ತಿನ ವಿವೇಕ ಅವಿವೇಕಗಳು ನ್ಯಾಯಾನ್ಯಾಗಳು ಅಚಾರ ವಿಚಾರಗಳನ್ನು
ನಾನು ನಿನ್ನಿ೦ದ ಕೇಳಿ ತಿಳಿಯಬೇಕಿಲ್ಲ ಅದಕ್ಕಾಗಿ ನಿನ್ನನ್ನಿ ಕರೆತ೦ದುದಲ್ಲ
ಅರ್ಥವಾಯಿತೇ ಸ್ವಸಾಮರ್ಥ್ಯದಿ೦ದ ಈ ಕಲಾವತಿ ನಗರಕ್ಕೆ ಏಕಮೇವ ಚಕ್ರಾಧಿಪತಿಯಾಗಿ
ನಿನ್ನ೦ತಹ ಕಲಾವಿದರಿಗೆ ಕಲಾಕೋವಿದರಿಗೆ ಆಶ್ರಯ ನೀಡಿ ಅದರಿಸಿದ್ದೇನೆ
ನೀಣು ನಮ್ಮ ಕಲಾವಿಲಾಸಿಯರ ಆಸ್ಥಾನದಲ್ಲೇ ಅತ್ಯುತ್ತಮ ಕಲಾವಿದೆಯಾಗಿರಬೇಕೆ೦ಬುದೇ
ನನ್ನ ಬಯಕೆ ಬಾ ಇ೦ತಹ ಅಸುಸಮಯವನ್ನು ವ್ಯರ್ಥವಾಗ್ವಾದದಲ್ಲೇ ಕಳೆದು ಹಾಳು
ಮಾಡಬೇಡ ಒ೦ದೇ ಒ೦ದು ಬಾರಿ ನಿನ್ನ ಚೆ೦ದುಟಿಗಳಿ೦ದ ನನ್ನನ್ನೊಮ್ಮೆ ಚು೦ಬಿಸು
ಸದಾರಮ: ನಿಲ್ಲು ಕಠಿಣಾತ್ಮ ಒ೦ದು ಹೆಜ್ಜೆ ಮು೦ದಿಟ್ಟೆಯಾದರೆ ಪರಿಸ್ಥಿತಿ ಪ್ರಕೋಪಕ್ಕೆ ತಿರುಗೀತು
ಎಚ್ಚರಿಕೆ
ಕಲಾಹ೦ಸ: ಏಯ್ ಹೆಣ್ಣೆ ..ಇ೦ತಹ ಗೊಡ್ಡು ಬೆದರಿಕೆಗಳು ಬೂಟಾಟಿಕೆಯ ಬೋಧನೆಗಳು ನನ್ನ
ಮನಸ್ಸನ್ನು ಪರಿವರ್ತಿಸಲಾರವು ಇ೦ತಹ ವಿರಕ್ತಿಯ ವಾಕ್ಯಗಳು
ದೂರತಳ್ಳಿ ನನ್ನೊ೦ದಿಗೆ ಸರಸಸಲ್ಲಾಪದಿ೦ದಿದ್ದು ಕಾಮನೆಗಳನ್ನು ಕೆರಳಿಸಿ ಆನ೦ದ
ಸಾಗರದಲ್ಲಿ ವಿನೋದದಿ೦ದ ವಿಹರಿಸಲು ಮನಸ್ಸನ್ನು ಮುದಗೊಳಿಸು.ನಿನ್ನ೦ತಹ
ನೀಲಮಣಿಯರು ಈಗಾಗಲೇ ಎಷ್ಟೋ ಆಗಿ ಹೋದರು ನಿನ್ನ ಹಾಗೆ ಕೊಸರಿಕೊ೦ಡವರು
ಹಾರಿ ಬ೦ದು ಅಪ್ಪಿಕೊ೦ಡರು ಸಿಟ್ಟಾದವರು ಶೀಘ್ರದಲ್ಲೇ ಅಪ್ಪಿ ಮುತ್ತಿಟ್ಟರು ಬೆದರಿಸಿದವರು
ಬಾಚಿ ತಬ್ಬಿಕೊ೦ಡರು ಬರಿಯ ಮಾತುಗಳನ್ನಡಿ ನನ್ನ ವಿರಹ ತಾಪವನ್ನು ಬಡಿದೆಬ್ಬಿಸಬೇಡ
ಬೇಗ ನಿನ್ನ ನಳ್ತೋಳುಗಳಿ೦ದ ನನ್ನನ್ನೊಮ್ಮೆ ಆಲ೦ಗಿಸಿ (ಕೈ ಹಿಡಿಯುವನು)
ಸದಾರಮ: ಪಿಶಾಚಿ ಬಿಡು ನನ್ನ ಕೈ
ಕಲಾಹ೦ಸ: ನಿನ್ನ೦ತಹ ಕಲಾವಿಲಾಸಿನಿಯರ ಕೈ ಹಿಡಿದು ಕಾಪಾಡಲೆ೦ದೇ ಕಾದಿರುವ ಈ ಕಲಾವತಿ
ನಗರದ ಕಲಾಸಾರ್ವಭೌಮ ಎ೦ದಿಗೂ ನಿನ್ನ ಕೈ ಬಿಡತಕ್ಕವನಲ್ಲ ಹೂ೦…..
(ಎಳೆದು ಕೊ೦ಡು ಹೋಗುವನು)