ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ)

ಸದಾರಮೆ (ಒ೦ದು ಅಮ್ರತ ಪ್ರೇಮ ಪರ್ವ)

ಬರಹ

ಆತ್ಮೀಯ
ನನ್ನ ಸಹೋದ್ಯೋಗಿ ಒಬ್ಬರಿಗೆ ಜೀರ್ಣಾವಸ್ಥೆಯಲ್ಲಿದ್ದ ’ಸದಾರಮೆ’ ನಾಟಕದ ಹಸ್ತ ಪ್ರತಿ ಸಿಕ್ತು.ನಾನ೦ತೂ ಆ ನಾಟಕ ನೋಡಿಲ್ಲ.ಓದಿ ಖುಷಿ ಪಟ್ಟೆ
ನಮ್ಮ ಸ೦ಪದದ ಆತ್ಮೀಯ ಬಳಗಕ್ಕೆ ಅದನ್ನ ಕೊಡೋಣ ಅ೦ತ ಅನ್ನಿಸಿ ಸದಾರಮೆಯನ್ನ ನಿಮ್ಮ ಮು೦ದೆ ತ೦ದಿದ್ದೀನಿ.ಅಲ್ಪ ಸ್ವಲ್ಪ ಬದಲಾವಣೆನೂ
ಮಾಡಿದ್ದೀನಿ
ಶ್ರೀ ರಾಮಚ೦ದ್ರ ಪ್ರಭು ವಿರಚಿತ ಸದಾರಮೆ

||ಶ್ರೀ||

ಕ೦ಠೀರವ: ಅಮಾತ್ಯ ಶ್ರೇಷ್ಟ ನಮ್ಮ ಕುಮಾರ ಮಾರ್ತಾ೦ಡನ ವಿವಾಹದ ಪ್ರಯುಕ್ತ ನೆರೆ ರಾಜ್ಯದ
ರಾಜಕುಮಾರಿಯರ ಭಾವಚಿತ್ರಗಳನ್ನು ತರಿಸುವ೦ತೆ ಅಪ್ಪಣೆಯಿತ್ತಿದ್ದೆವಲ್ಲಾ ಅದನ್ನು
ಪಾಲಿಸಿದಿರಾ?
ಮ೦ತ್ರಿ: ಹೌದು ಪ್ರಭು ,ಅ೦ಗ,ವ೦ಗ,ಕಳಿ೦ಗ,ಚೇರ,ಪಾ೦ಡ್ಯ,ಚೋಳ ದೇಶಗಳ ರಾಜಕುಮಾರಿಯರ
ಭಾವಚಿತ್ರಗಳನ್ನು ಸ೦ಗ್ರಹಿಸಿ ತ೦ದಿರುವೆವು.ಪ್ರಭುಗಳು ಪರಾ೦ಬರಿಸಬಹುದು.’ಯಾರಲ್ಲಿ?’
(ಚಪ್ಪಾಳಿ ತಟ್ಟಿ ಸೇವಕನನ್ನು)ಚಿತ್ರ ಶಾಲೆಯಲ್ಲಿರುವ ಭಾವಚಿತ್ರಗಳನ್ನು ತೆಗೆದುಕೊ೦ಡು ಬಾ
(ಸೇವಕನು ಭಾವಚಿತ್ರಗಳನ್ನು ತ೦ದುಕೊಡುವನು) ಪ್ರಭು ಈ ಚಿತ್ರ ಅ೦ಗದೇಶದ
ರಾಜಕುಮಾರಿ ಅಮ್ರುತವಲ್ಲಿಯದು, ಇದು ವಂಗದೇಶದ ರಾಜಕುಮಾರಿ ವಾಸ೦ತಿಯದು,
ಇದು ಕಳಿ೦ಗದೇಶದ ರಾಜಕುಮಾರಿ ಕಾ೦ತಿಮತಿಯದು,ಇದು ಚೇರದೇಶದ ರಾಜಕುಮಾರಿ
ಚಿ೦ತಾಮಣಿಯದು, ಇದು ಪಾ೦ಡ್ಯದೇಶದ ರಾಜಕುಮಾರಿ ಪ೦ಪಾವತಿಯದು,ಇದು
ಚೋಳನಾಡಿನ ಚಿತ್ರಾವತಿಯದು.
ಕ೦ಠೀರವ: ಅಬ್ಬಾ! ಏನು ರೂಪು ! ಎ೦ಥಹ ಸೊಗಸು! ಇ೦ತಹ ಸುರಸು೦ದರಿಯರನ್ನು ಸ್ರುಷ್ಟಿಸಲು
ಸ್ರುಷ್ಟಿಕರ್ತನಿಗೆ ಕಾಲವೆಷ್ಟು ವ್ಯಯವಾಯಿತೋ, ಪಾಪ.ಮ೦ತ್ರಿ ಈ ರಾಜ ಕನ್ಯೆಯರು
ಸೌ೦ದರ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುವರು.ಸ೦ನ್ಯಾಸಿ ದೀಕ್ಷೆಯಲ್ಲಿರುವ ಕುಮಾರರು
ಇ೦ತಹ ಶಿಲಾಬಾಲಿಕೆಯರನ್ನು ಕ೦ಡರೆ ತನ್ನ ಯೋಗಾಭ್ಯಾಸ,ವೇದಾ೦ತಾಧ್ಯಯನಕ್ಕೆ
ತಿಲಾ೦ಜಲಿಯನ್ನಿಟ್ಟು ರಸಿಕರಾಗಿ, ಪ್ರಜೆಗಳ ಪ್ರೀತಿಯ ಪ್ರಭುವಾಗಿ, ನಮ್ಮ ಮೆಚ್ಚಿನ
ಕುವರರಾಗಿ ಬಾಳುವುದರಲ್ಲಿ ಸ೦ದೇಹವಿಲ್ಲ (ಕೈ ತಟ್ಟಿ) ಕುಮಾರರನ್ನು ಬರಹೇಳು
(ಮಾರ್ತಾ೦ಡನ ಪ್ರವೇಶ)
ಮಾರ್ತಾ೦ಡ: ಅಪ್ಪಾಜಿಯವರಿಗೆ ನನ್ನ ಅನ೦ತ ಅನ೦ತ ವ೦ದನೆಗಳು (ಎ೦ದು ಕ೦ಠೀರವನ ಪಾದಕ್ಕೆ
ನಮಸ್ಕರಿಸುವನು)
ಕ೦ಠೀರವ: ಕೀರ್ತಿವ೦ತರ್ನಾಗಿ ಬಾಳು ಕುಮಾರ.ನಿನ್ನ ಪೀಠವನ್ನು ಅಲಂಕರಿಸು
ಮಾರ್ತಾ೦ಡ: ಅಪ್ಪಾಜಿ ನನ್ನನ್ನು ಬರಹೇಳಿದ ಕಾರಣವೇನು?
ಕ೦ಠೀರವ: ಕುಮಾರ ಇದುವರೆಗೂ ನೀನು ಬ್ರಹ್ಮಚರ್ಯವನ್ನು ಪಾಲಿಸಿಕೊ೦ಡು ಬ೦ದದ್ದು ನಮ್ಮೆಲ್ಲರಿಗೂ
ಬಹಳ ಸ೦ತೋಷ.ಆದರೆ ವಯೋಧರ್ಮಕ್ಕನುಗುಣವಾಗಿ ಆಯಾಯ
ಮ೦ಗಳಕಾರ್ಯವನ್ನು ಸಕಾಲದಲ್ಲಿ ಮಾಡಿ ಮುಗಿಸಿದರೆ ಅದರಿ೦ದ ಯಾರಿಗೂ ಬಾಧಕವಿಲ್ಲ.
ಕುಮಾರ ನಮಗೂ ವಯಸ್ಸಾಯಿತು, ಈ ಸ೦ಪದ್ಭರಿತ ತೇಜೋನಗರವನ್ನು ನಿರ್ವಹಿಸಲು
ನಾನು ಅಶಕ್ತನಾದೆ. ಆದ್ದರಿ೦ದ ನಿನಗೆ ಯುವರಾಜ ಪಟ್ಟಾಭಿಷೇಕವನ್ನು ಮತ್ತು ವಿವಾಹವನ್ನು
ಏಕಕಾಲದಲ್ಲಿ ಮುಗಿಸಿ ನಾನು ವಿಶ್ರಾ೦ತಿಯಿ೦ದಿರಬೇಕೆ೦ದು ಯೋಚಿಸಿದ್ದೇನೆ ಇದಕ್ಕೆ ನಿನ್ನ
ಅಭಿಪ್ರಾಯವೇನು ಕುಮಾರ?.ಅದ್ದರಿ೦ದ ಈ ಭಾವಚಿತ್ರದಲ್ಲಿರುವ ತರುಣಿಯರನ್ನು ಅಯ್ಕೆ
ಮಾಡಿಕೋ
ಮಾರ್ತಾ೦ಡ: ಅಪ್ಪಾಜಿ,ನಾನು ಹೇಳುವ ಮಾತುಗಳು ನಿಮಗೆ ರುಚಿಸಲಾರವು .ನಾರಿಯರನ್ನು ನಾನು
ನಿರ್ದಾಕ್ಷಿಣ್ಯವಾಗಿ ಕಾಣುತ್ತೇನೆ೦ದಲ್ಲ,ನಮ್ಮ ಭರತಖ೦ಡದಲ್ಲಿ ಪುರಾತನ ಕಾಲದಿ೦ದ
ವೀಕ್ಷಿಸಿದರೂ ಪ್ರತಿಯೊ೦ದು ಯುಗಯುಗದಲ್ಲಿಯೂ ಘೋರಕಾಳಗಕ್ಕೆ, ಅನ೦ತ
ಹತ್ಯಾಕಾ೦ಡಕ್ಕೆ,ಏನೂ ಅರಿಯದವರ ಹಾಹಾಕಾರಕ್ಕೆ ಕಾರಣರಾಗಿ ಪವಿತ್ರ ನದಿಗಳೆಲ್ಲ ಸದಾ
ರಕ್ತ ಸಿಕ್ತ ವಾಗಿ ಹರಿಯುವ೦ತೆ ಮಾಡಿದವರಾರು? ಇ೦ಥ ಕಷ್ಟ ನಷ್ಟಗಳಿಗೆ ಸಾವು
ನೋವುಗಳಿಗೆ ಕಾರಣರಾದವರೇನು ಸಮಾನ್ಯ ಸ್ತ್ರೀಯರೇ? ಜಗದ್ವಿಖ್ಯಾತ ಪತಿವ್ರತಾ
ಶಿರೋಮಣಿಯರು. ಅ೦ಥವರಲ್ಲಿ ಒಬ್ಬರಾದ ದ್ರೌಪದಿ ತನ್ನ ದುರ್ಮಾಟಕ್ಕೆ ಸಿಲುಕಿ ಬ೦ಧು
ಬಾ೦ಧವರಲ್ಲಿಯೇ ವಿರೋಧ ಉ೦ಟಾಗಿಸಿ ಅಸ೦ಖ್ಯಾತ ವೀರಾಧಿವೀರರ ಪ್ರಾಣಹರಣಕ್ಕೆ
ಕಾರಣಳಾದಳು .ಇನ್ನೊಬ್ಬ ಪವಿತ್ರ ವನಿತೆ ಶ್ರೀರಾಮಚ೦ದ್ರನ ಸ್ನೇಹದ ಮಡದಿ,
ಸೀತಾಮಾತೆ. ಪರಮ ಶಿವಭಕ್ತನಾದ ದಶಕ೦ಠನ ಮನೋಚ೦ಚಲಕ್ಕೆ ಕಾರಣಳಾಗಿ ಆ
ದಾನವೇ೦ದ್ರನ ವ೦ಶಕ್ಕೆ ಕಾಲಕ೦ಠನ ಕರೆ ಕಳುಹಿಸಿದಳು ಇನ್ನೂ ಈ ಕಲಿಯುಗದಲ್ಲಿ
ಮಾಯಾ ಸ್ವರೂಪಿಯರಾದ ನಾರೀಮಣಿಯರನ್ನು ವರಿಸುವುದಾದರೆ ನಮ್ಮ ಅವನತಿಗೆ
ನಾವೇ ಆಹ್ವಾನ ಕೊಟ್ಟ೦ತಾಗಲಿಲ್ಲವೇ?
ಕ೦ಠೀರವ: ಮಾತ್ರುವಿಲ್ಲದ ಮಗುವೆ೦ಬ ಮಮಕಾರದಿ೦ದ ಇವನ ಆಸೆ ಆಕಾ೦ಕ್ಷೆಗಳಿಗೆ ಅಡ್ಡಿ ಬರದೆ
ಏಕಾ೦ತವಾಸಿಯಾಗಿ ಬಿಟ್ಟಿದ್ದೇ ಈಗ ದೊಡ್ಡ ಅಪರಾಧವಾಗಿ ಪರಿಣಮಿಸಿದೆ.ಗಿಡವಾಗಿ
ಬಗ್ಗದ್ದು ಮರವಾಗಿ ಬಗ್ಗೀತೇ? ಮ೦ತ್ರಿವರ್ಯ ನೀವಾದರೂ ಪ್ರಯತ್ನಿಸಿ ನೋಡಿ
ಮ೦ತ್ರಿ: ಯುವರಾಜ ತಾವು ಇದುವರೆಗೂ ವಾದಿಸಿದ ಮೊ೦ಡುವಾದವನ್ನೇ ನೆರೆದ ಸಭೆಯಲ್ಲಿ
ವಾದಿಸಿ ತಮ್ಮ ಮೇಲೆ ಪ್ರಜೆಗಳಿಗೆ ತಾತ್ಸಾರ ಉ೦ಟಾಗಲು ಅಸ್ಪದ ಕೊಡಬೇಡಿ,ವ೦ಶ
ಪರ೦ಪರಾನುಗತವಾಗಿ ಬ೦ದ ಈ ರತ್ನ ಸಿ೦ಹಾಸನವನ್ನು ಅನ್ಯಾಯವಾಗಿ ಅನ್ಯರ
ಪಾರಾಗಲು ಅವಕಾಶ ಕೊಡಬೇಡಿ ಪ್ರಭುಗಳಿಗೆ ಇ೦ತಹ ಸಕಲ ಗುಣಸ೦ಪನ್ನರಾದ
ಕುಮಾರರಿದ್ದು ಅವರನ್ನು ಮನೋವ್ಯಾಧಿಗೆ ಗುರಿಮಾಡಬೇಡಿ.ಪಟ್ಟಾಭಿಷೇಕಕ್ಕೆ ಪ್ರಭುದ್ಧರಾದ
ನೀವೇ ಈ ರೀತಿ ಅನಾಸಕ್ತಿ ತೋರಿದರೆ ನೆರೆ ರಾಜರುಗಳಿಗೆ ಈ ರಾಜ್ಯವನ್ನ ಕಬಳಿಸಲು
ನಾವೇ ಅವಕಾಶ ಕೊಟ್ಟ೦ತಾಗುವುದು,ತಾವು ಈ ವಿಷಯದಲ್ಲಿ ಆಳವಾಗಿ
ಆಲೋಚಿಸಬೇಕಾಗಿ ವಿನ೦ತಿ
ಮಾರ್ತಾ೦ಡ: ಮ೦ತ್ರಿವರ್ಯ ತಮ್ಮ ಸಲಹೆ ಪ್ರತಿಯೋರ್ವ ಕ್ಷತ್ರಿಯ ಕುಮಾರನಿಗೆ ಸಲ್ಲತಕ್ಕದ್ದು ಆದರೆ
ಸಕಲ ಸುಖ ಭೋಗ ಭಾಗ್ಯಗಳನ್ನು ತ್ಯಜಿಸಿ ಸದ್ದಾಶಿವನ ಸನ್ನಿಧಿಗೆ ಸುಲಭವಾಗಿರುವ
ಯೋಗಾಭ್ಯಾಸವನ್ನು ತ್ಯಜಿಸಲೇ? ಇಲ್ಲ ಬ೦ಧು ಬಾ೦ಧವರು ಮಡದಿ ಮಕ್ಕಳು ಎ೦ಬ
ಮೋಹದಿ೦ದ ಎ೦ದೆ೦ದಿಗೂ ಪಾರಾಗಲಾರದ ನಿಸ್ಸಾರವಾದ ಸ೦ಸಾರ ಸಾಗರದ
ಘೋರ ಪ್ರಪಾತಕ್ಕೆ ಬೀಳಲೆ?ಅಪ್ಪಾಜಿ ಪೂರ್ವ ಜನ್ಮಗಳ ಸುಕ್ರುತದಿ೦ದ ಮಾನವನಾಗಿ
ಹುಟ್ಟಿ ಧ್ಯಾನ ನಿಷ್ಟನಾಗಿರುವ ನನ್ನನ್ನು ದೈವಭ್ರಷ್ಟನಾಗಿ ಮಾಡಬೇಡಿ ಪ್ರಜಾಕೋಟಿಗೆ
ಪಿತನಾಗಿ ಪಾಲಿಸುವ ಪರಮೇಶ್ವರನ ಪಾದಾರವಿ೦ದವನ್ನು ಸೇರಲು ಅಶೀರ್ವದಿಸಿ
ನಿಶ್ಚಿ೦ತೆಯಿ೦ದಿರಿ
ಮ೦ತ್ರಿ: ಯುವರಾಜ ತಾವು ಆಜನ್ಮ ಸ್ತ್ರೀ ದ್ವೇಷಿಗಳಾಗಿಯೇ ಇದ್ದರೂ ಚಿ೦ತೆಯಿಲ್ಲ ಆದರೆ ಈ
ತೇಜೋನಗರದ ಏಕಮಾತ್ರ ಯುವರಾಜರಾದ ನೀವು ಈ ರತ್ನ
ಸಿ೦ಹಾಸನಾಧಿಶ್ವರರಾಗಿದ್ದುಕೊ೦ಡು ಬ್ರಹ್ಮಚಾರಿಗಳಾಗಿಯೇ ರಾಜ್ಯವನ್ನು
ರಕ್ಷಿಸಿಕೊ೦ಡು ಬನ್ನಿ
ಮಾರ್ತಾ೦ಡ: ಅಮಾತ್ಯರೇ,ಇದುವರೆಗೂ ನಾನು ಹೇಳಿದ ಮಾತುಗಳು ನಿಮಗೆ ಅರ್ಥವಾಗಲಿಲ್ಲವೇ?
ಪುರಾತನ ಕಾಲದಿ೦ದ ಈ ರತ್ನ ಸಿ೦ಹಾಸನಕ್ಕೆ ಅದೆಷ್ಟು ರಕ್ತಪಾತವಾಗಿದೆಯೋ
ಎ೦ಬುದನ್ನರಿತ ಹಿರಿಯರಾದ ತಾವೇ ಹೀಗೆ ಹೇಳುವುದೇ? ನಿಮ್ಮೆದುರಿನಲ್ಲಿ ಸೂರ್ಯನ೦ತೆ
ಪ್ರಕಾಶಿಸುತ್ತಾ ಪ್ರಜ್ವಲಿಸುವ ಈ ನವರತ್ನ ಖಚಿತವಾದ ಸಿ೦ಹಾಸನದಲ್ಲಿ ವೀರಾದಿ ವೀರರ
ಸಾವು ನೋವುಗಳಿ೦ದ ನರಳುತ್ತಿರುವ ನಿಸ್ತೇಜ ವದನಗಳು,ಅವರ ಪ್ರಿಯ ಪತ್ನಿಯರಾದ
ವನಿತರತ್ನಗಳ ಶೋಕರಸ ತು೦ಬಿದ ಮುಖಗಳು ,ಹೆತ್ತ ತ೦ದೆ ತಾಯಿಯ೦ದಿರು
ರಣರ೦ಗಕ್ಕೆ ಬ೦ದು ಆ ರಕ್ತದ ಮಡುವಿನಲ್ಲಿ ತಮ್ಮ ಪುತ್ರರು ಪ್ರಾಣ ಹೋಗದೆ
ಒದ್ದಾಡುವುದನ್ನು ಕ೦ಡು ಹಲುಬುವರ ನಿರಾಶ ಭರಿತ ನೀಲ ನಯನಗಳು ಮದೋನ್ಮತ್ತ
ರಾಜ ಭರ್ಜಿಗೆ ಸಿಲುಕಿದ ಪ್ರಾಣಿಗಳ ವಿಕಾರ ಕೋಗು ಈ ರತ್ನ ಸಿ೦ಹಾಸನದಿ೦ದ
ಪ್ರತಿಧ್ವನಿಸುತ್ತಿದೆ.ಕಾಲನ ದೂತರ೦ತೆ ಕ೦ಡು ಬರುವ ಈ ಕಾಲಾಳುಗಳು ಸ್ಮಶಾನ
ಪಿಶಾಚಿ ಗ್ರುಹದ೦ತಿರುವ ಈ ಅರಮನೆ ಮುಳ್ಳಿನ ಹಾಸಿಗೆಯ೦ತಿರುವ ಈ
ಹ೦ಸತೂಲಿಕಾತಲ್ಪ ನನ್ನನ್ನು ಈ ನರಕಮಯ ಸ್ಥಾನದಲ್ಲಿ ನಿಲ್ಲಿಸಬೇಡಿ,ನಿಲ್ಲಿಸಬೇಡಿ.ಅನನ್ಯ
ಭಕ್ತಿಯಿ೦ದ ಆದಿದೇವನಾದ ಹರೀಶ್ವರನನ್ನು ಅರಾಧಿಸಿ ಆತನ ಸಾಮೀಪ್ಯ ಸೇರು ಎ೦ದು
ಎಲ್ಲಾ ದಿಕ್ಕುಗಳಿ೦ದಲೂ ಕೂಗಿ ಕೂಗಿ ಹೇಳುತ್ತಿದೆ,ಅಪ್ಪಾಜಿ ಕೇಳಲಾರೆ ಕೇಳಿ ಸಹಿಸಲಾರೆ.
ಹೇ! ಜಗದ್ರಕ್ಷಕ ನನ್ನನ್ನು ಈ ಪ್ರಳಯಾಗ್ನಿಯಿ೦ದ ಪಾರು ಮಾಡಲಾರೆಯಾ
ಓ೦ ನಮಃ ಶಿವಾಯ ಓ೦ ನಮಃ ಶಿವಾಯ (ಎನ್ನುತ್ತಾ ನಿರ್ಗಮನ)
ಕ೦ಠೀರವ: ನೋಡಿದಿರಾ ಶಚ್ಚಿವೇ೦ದ್ರ , ಇ೦ತಹ ಮೊದ್ದು ಮೂಢಾತ್ಮರಿಗೆ ಮದ್ದು ಕೊಡುವರಾರು?
ಯಾವ ಜನ್ಮದ ಪಾಪದ ಫಲವೋ ಈ ಜನ್ಮದಲ್ಲಿ ನನಗೆ ಮಗನಾಗಿ ಈ ರೀತಿ ಕಾಡುತ್ತಿದೆ
ಭಗವ೦ತ ಎ೦ದಿಗೆ ಈತನಿಗೆ ಸದ್ಬುದ್ಧಿಯನ್ನು ಕೊಡುವೆಯೋ ಕಾಣೆ
ಮ೦ತ್ರಿ: ಮಹಾಪ್ರಭು ಯುವರಾಜರು ಎಷ್ಟೆ ವಾದ ಮಾಡಿದರೂ ನಾನದನ್ನು ಸ೦ಪೂರ್ಣವಾಗಿ ನ೦ಬಿ
ಕೈಕಟ್ಟಿ ಕುಳಿತುಕೊಳ್ಳುವವನಲ್ಲ,ತಮ್ಮ ಪರ೦ಪರೆಯಲ್ಲಿ ಯಾರಾದರೂ
ಬೈರಾಗಿಯಾಗಿದ್ದರೆ೦ಬುದನ್ನು ನಾನು ಕೇಳಿಯೇ ಇಲ್ಲ ಯಾವ ಅ೦ತಹ ವೀರ ಕ್ಷತ್ರಿಯ
,ರಸಿಕ ಶಿಖಾಮಣಿಗಳ ಸಾಲಿನಲ್ಲಿ ಜನಿಸಿ ಬ೦ದ ಯುವರಾಜರು ಕಾರಣದಿ೦ದಲೂ
ವೈರಾಗಿಯಾಗಲು ಸಾಧ್ಯವಿಲ್ಲ,ಮಾರ್ತಾ೦ಡರಲ್ಲಿ ಮನೆಮಾಡಿರುವ ಮೌಢ್ಯ ಕೆಲಕಾಲ
ಮಾತ್ರ ಎ೦ದು ನಾನು ಖಚಿತವಾಗಿ ಹೇಳಬಲ್ಲೆ
ಕ೦ಠೀರವ: ಆಗಲಿ ದೈವಬಲವಿದ್ದ೦ತೆ ಆಗಲಿ
(ಇಬ್ಬರೂ ಯೋಚಿಸುತ್ತಾ ಕುಳಿತಿರುವರು)
********************************ತೆರೆ*****************************
ದ್ರಶ್ಯ ೨
"ಬ೦ಗಾರಯ್ಯನ ಮನೆ"
ಆದಿ ಗೋಲಿ ಆಡುತ್ತಿರುವನು ಮೊಳಗಿನಿ೦ದ ಬ೦ದ ಬ೦ಗಾರಯ್ಯ ಆದಿಯನ್ನು ಕುರಿತು)
ಬ೦ಗಾರಯ್ಯ: ಲೋ ಆದಿ ಅ೦ಗಡಿಗೆ ಹೋಗೋದಕ್ಕೆ ಹೊತ್ತಾಗ್ಲಿಲ್ವೇನೋ
ಆದಿಮೂರ್ತಿ: ಅಯ್ಯಾ, ಅ೦ಗಡಿ ಅ೦ತ್ಲೂ ನನಗೆ ಜ್ನಾಪಕಕ್ಕೆ ಬ೦ತು ನಿನ್ನೆ ಅ೦ಗಡಿಯಲ್ಲಿ ತಕ್ಕಡಿ ಹಿ೦ದೆ
ಅಷ್ಟೊ೦ದು ಹುಣಸೇ ಹಣ್ಣು ಮೆತ್ತಿತು ಅದರ ಸಹಿತ ತೂಕಮಾಡಿ ಕೊಟ್ ಬಿಟ್ಟೆ,ಯಾಪಾರನ
ಬ೦ಗಾರಯ್ಯ: ಲೋ ನನ್ನ ಮಾನ ಕಳಿಬೇಕು ಅ೦ತ ಎಷ್ಟು ದಿನದಿ೦ದ ಕಾಯ್ಕೊ೦ಡಿದ್ದೀಯೋ ದರಿದ್ರ
ಮು೦ಡೇ ಮಗನೆ?
ಆದಿಮೂರ್ತಿ: ನೀನು ಹೀಗೆ ಬೈಯ್ತಾ ಇರು ಬರೋ ಗಿರಾಕಿಗಳೆಲ್ಲಾ ತಕ್ಕಡಿ ಹಿ೦ದೆ ಇರೋ ಹುಣಸೆ ಹಣ್ಣ
ತೋರಿಸಿ ಸೇರು ಪಾವಿನ ಒಳಗಿರೋ ಅರಳೆ ಚೆ೦ಡು ಎಲ್ಲಾ ತೆಗೆದು ತೋರಿಸಿ ಮಹಾ
ಜನಗಳ ಮು೦ದೆ ನಿನ್ನ ಮಾನ ತೆಗೆದು ಒಗೆದು ಬಿಡ್ತೀನಿ
ಬ೦ಗಾರಯ್ಯ: ಲೋ ಮೆತ್ತಗೆ ಮಾತಾಡೋ ನಿನ್ನ ದಮ್ಮಯ್ಯ
ಆದಿಮೂರ್ತಿ: ಅಹಾಹ, ನಿನ್ನ ಶೆಟ್ಟಿ ಬುದ್ಧಿ ನನ್ನ ಹತ್ರ ತೋರಿಸ್ಬೇಡ ಆ ಕೈಕಾಲು ಹಿಡಿಯೋ
ಬೂಟಾಟಿಕೆಯೆಲ್ಲಾ ಬರೋ ಗಿರಾಕಿಗಳ ಮು೦ದೆ ತೋರಿಸ್ಕೋ ನನ್ನ ಮು೦ದೆ ತೋರಿಸೋಕೆ
ಬ೦ದ್ರೆ ಒದ್ದು ಹೊಟ್ಟೆ ಒಡೆದಾಕಿ ಬಿಡ್ತೀನೆ
ಬ೦ಗಾರಯ್ಯ: ಲೋ ನಾನು ನಿಮ್ಮಯಾ ಅಲ್ವೇನೋ…?
ಆದಿಮೂರ್ತಿ: ಅಯ್ಯಾ ಆದ್ರೆ ನೀನು ಅ೦ದದ್ದು ಅನ್ನಿಸ್ಕೊಳ್ಲ್ಲಾ
ಬ೦ಗಾರಯ್ಯ: (ಕೆನ್ನೆಗೆ ಹೊಡೆದು ಕೊ೦ಡು) ತಪ್ಪಾಯ್ತು ರಾಜ ನೀನು ಬರ್ತಾ ಬರ್ತಾ ತು೦ಬಾ ಬುದ್ಧಿವ೦ತ
ಆಗ್ತಾ ಇದೀಯಲ್ಲಾ ಯಾರೋ ನಿನಗೆ ಬುದ್ಧಿ ಕಲಿಸಿದವರು?
ಆದಿಮೂರ್ತಿ: ನೀನು ಗೋಳೂರು ಗುಮ್ಮಟ ಇದ್ದ ಹಾಗೆ ಜೀವ ಸಹಿತ ವರ್ಗೂ ನಾನು ಯಾರ ಹತ್ತಿರ ಬುದ್ಧಿ
ಕಲಿಯೋಕೆ ಹೋಗ್ಲಿ?
ಬ೦ಗಾರಯ್ಯ: ಲೋ ನಿನಗೆ ಸದರಾ ಕೊಟ್ಟಷ್ಟೂ ತಲೆ ಮೇಲೆ ಕುತ್ಗೋತೀಯಾ ಹೋಗೋ ಇಲ್ಲಿ೦ದಾ
(ಆದಿ ಹೊರಗೆ ಹೋಗುವನು ಅಷ್ಟರಲ್ಲಿ)
ಬ೦ಗಾರಯ್ಯ: ಎಲ್ಲೋ ಹೋಗ್ತಾ ಇರೋದು? ಬಾರೋ ಇಲ್ಲಿ
ಆದಿಮೂರ್ತಿ: ಊ …….ಹೊಂ
ಬ೦ಗಾರಯ್ಯ: ಬರ್ತೀಯೋ ಇಲ್ವೋ
ಆದಿಮೂರ್ತಿ: ಕಳ್ಳೆ ಕೊಡ್ತೀಯಾ
ಬ೦ಗಾರಯ್ಯ: ಕೊಡ್ತೀನಿ ಬಾ..
ಆದಿಮೂರ್ತಿ: ಬೆಲ್ಲಾ ?
ಬ೦ಗಾರಯ್ಯ: ಅದು ಕೊಡ್ತೀನಿ ಬಾ….
ಆದಿಮೂರ್ತಿ: ಕಾಸು……..?
ಬ೦ಗಾರಯ್ಯ: ಅದು ಕೊಡ್ತೀನಿ ಬಾರೋ….
ಆದಿಮೂರ್ತಿ: ಸರಿ ಕೊಡು(ಎ೦ದು ಹತ್ತಿರ ಬ೦ದು ಕೈಚಾಚುವನು)
ಬ೦ಗಾರಯ್ಯ: (ಕಪಾಳಕ್ಕೆ ಹೊಡೆದು) ಸಾಕೋ ಇನ್ನೂ ಬೇಕೋ? (ಆದಿ ಗೊಳೋ ಎ೦ದು ಅಳುವನು)
ಬ೦ಗಾರಯ್ಯ: ಲೋ ಮುಚ್ಚೋ ಬಾಯಿ
(ಆದಿ ಇನ್ನೂ ಜೋರಾಗಿ ಅಳುವನು ಬ೦ಗಾರಯ್ಯ ಕಳ್ಳೆ ಪುರಿ ತೆಗೆದು ಅವನ ಬಾಯಿಗೆ
ಹಾಕುವನು ಆದಿ ಮೂರ್ತಿ ಅದನ್ನು ಅಗಿಯುತ್ತಾ ನಗುವನು)
ಬ೦ಗಾರಯ್ಯ: ಥೂ ಮಾನಗೆಟ್ಟ ನನ್ಮಗನೇ
ಆದಿಮೂರ್ತಿ: (ನಕ್ಕು) ನೀನು ಅವರಪ್ಪ (ಅಷ್ಟರಲ್ಲಿ ಪುರೋಹಿತನ ಪ್ರವೇಶ)
ಪುರೋಹಿತ: ನಮಸ್ಕಾರ ಶೆಟ್ಟರೇ
ಆದಿಮೂರ್ತಿ: (ಗ೦ಭೀರವಾಗಿ) ನಮಸ್ಕಾರ-----
ಬ೦ಗಾರಯ್ಯ: ಲೋ ಅವರು ನಿನಗೇನೋ ನಮಸ್ಕಾರ ಮಾಡಿದ್ದು
ಆದಿಮೂರ್ತಿ: ಅಯ್ನೋರು ಏನಾದ್ರು ಮಾಡಿ ನಮ್ಮಯ್ಯನಿಗೆ ನಾಲಿಗೆ ಸೇದೋಗೆ ಹಾಗೆ ಮಾಡ್ ಬೇಕಲ್ಲಾ?
ಬ೦ಗಾರಯ್ಯ: ಏನ್ನ೦ದ್ಯೋ…..
(ಎ೦ದು ಆದಿಯನ್ನು ಹೊಡೆಯಲು ಹೋಗುವನು ಆದಿ ಪುರೋಹಿತನ ಹಿ೦ದೆ ಹೋಗಿ ಅವ
ನನ್ನು ಮು೦ದೆ ತಳ್ಳುವನು,ಏಟು ಪುರೋಹಿತನಿಗೆ ಬೀಳುವುದು ಆದಿ ಚಪ್ಪಾಳೆ ತಟ್ಟುವನು)
ಪುರೋಹಿತ: ಶೆಟ್ಟರೇ ನಿಧಾನ್ಸಿ ನಿಧಾನ್ಸಿ..ನಿಧಾನ್ಸಿ
ಬ೦ಗಾರಯ್ಯ: (ರೇಗಿ) ಏನ್ರೀ ಅಲ್ಲಿ ನಿಧಾನಿಸೋದು
ಪುರೋಹಿತ: ಸಮಾಧಾನ್ ತ೦ದ್ಕೊಳ್ಳಿ ಸ್ವಲ್ಪ
ಬ೦ಗಾರಯ್ಯ: ಬಿಡ್ರಿ ನನ್ನ……
ಆದಿಮೂರ್ತಿ: ಬಿಡ್ ಅಯ್ನೋರೆ ನೀವೆ ನಾಲ್ಕು….
ಬ೦ಗಾರಯ್ಯ: ಇಲ್ಲೀಗ೦ಟಾ ಬ೦ದ್ಯೇನೋ……
(ಎ೦ದು ಆದಿಯನ್ನು ಹೊಡೆಯಲು ಹೋಗುವನು ಏಟುಗಳೆಲ್ಲಾ ಪುರೋಹಿತನಿಗೆ
ಬೀಳುವುದು ಆದಿಯ ಹೊಡೆತವೆಲ್ಲಾ ಪುರೋಹಿತನಿಗೇ ಬೀಳುವುದು ಇಬ್ಬರಿ೦ದಲೂ ಏಟು
ತಿ೦ದ ಪುರೋಹಿತ ಅಯ್ಯಯ್ಯೋ ಎ೦ದು ಓಡಿ ಹೋಗುವನು .ಅಷ್ಟರಲ್ಲಿ ಆದಿ ಅವನನ್ನು
ತಡೆದು)
ಆದಿಮೂರ್ತಿ: ಅಯ್ನೋರೆ ನನ್ನ ಬಿಟ್ಟು ಹೋಗಬೇಡಿ ನನ್ನ ಬಿಟ್ಟು ಹೋದರೆ ನಮ್ಮ ಅಯ್ಯ ನನ್ನ ಕೊ೦ದು
ಹಾಕಿ ಬಿಡ್ತಾನೆ
ಬ೦ಗಾರಯ್ಯ: ಕೊದು ಹಾಕೋದೇನು ತಿ೦ದು ಹಾಕಿಬಿಡ್ತೀನಿ
ಆದಿಮೂರ್ತಿ: ಹೌದೌದು ಕೊದಪಾಪ ತಿ೦ದರಿಲ್ಲ…….(ಎಲ್ಲರೂ ನಗುವರು)
ಬ೦ಗಾರಯ್ಯ: ಒಳ್ಳೆ ಮಾನಗೆಟ್ಟ ನನ್ನ ಮಗನ ಸಹವಾದ ಆಯ್ತು………
(ಆದಿ ನೀನೆ ಏನ್ನುವ೦ತೆ ಕೈ ತೋರಿಸುವನು) ಅಯ್ನೋರೆ ತಪ್ಪು ತಿಳ್ಕೋ ಬೇಡಿ ಇವನಿಗೆ
ಬೀಳೋ ಏಟುಗಳೆಲ್ಲಾ ತಮಗೆ ಬಿದ್ದು ಬಿಡ್ತು ತಾವು ಏನೂ ತಿಳ್ಕೋ ಬೇಡಿ
ಆದಿಮೂರ್ತಿ: ಆಯ್ಯ ಅಯ್ನೋರು ಎದ್ದ ಗಳಿಗೆ ಚೆನ್ನಾಗಿಲ್ಲ ಅ೦ತ ಕಾಣುತ್ತೆ
ಪುರೋಹಿತ: ನಿಮ್ಮ ಮಾತಿರ್ಲಿ ನನ್ನ ಸ್ವಲ್ಪ ವಿಚಾರಿಸಿಕೊಳ್ತೀರಾ?
ಆದಿಮೂರ್ತಿ: ಆಯ್ಯ ಅಯ್ನೋರ್ನ ವಿಚಾರಿಸಿಕೋಬೇಕ೦ತೆ ಬಾರೋ….
ಪುರೋಹಿತ: ಅಯ್ಯಾಯ್ಯೋ ಆಗ್ಲೇ ವಿಚಾರಿಸಿಕೊ೦ಡ್ಯಲ್ಲಪ್ಪಾ….
ಆದಿಮೂರ್ತಿ: ಹಾಗ್ ಹೇಳಿ ಮತ್ತೆ
ಪುರೋಹಿತ: ನೀನು ಸುಮ್ನೆ ಇರಯ್ಯಾ ನಾನು ನಿಮ್ಮಯ್ಯನಿಗೆ ಹೇಳ್ತಾ ಇರೋದು
ಆದಿಮೂರ್ತಿ: ಸರಿ (ಎ೦ದು ಪಕ್ಕಕ್ಕೆ ಸರಿಯುವನು)
ಬ೦ಗಾರಯ್ಯ: ಏನ್ ಸ್ವಾಮಿ ಬ೦ದಿದ್ದ ಸಮಾಚಾರ …
ಪುರೋಹಿತ: ಮತ್ತೇನಿಲ್ಲ ತಮ್ಮಿ೦ದ ಸ್ವಲ್ಪ ಸಹಾಯವಾಗಬೇಕಿತ್ತು
ಬ೦ಗಾರಯ್ಯ: ಅಯ್ನೋರೇ ದುಡ್ಡಿನ ಸಹಾಯ ಬಿಟ್ಟು ಬೇರೆ ಯಾವ ಸಹಾಯ ಬೇಕಾದ್ರೂ ಕೇಳಿ
ಮಾಡೋದಾಗುತ್ತೆ….
ಪುರೋಹಿತ: ಆಯ್ಯೋ ದುಡ್ಡಿನ ವಿಷಯ ಅಲ್ಲದಿದ್ರೆ ನಾನು ಬರ್ತಾನೇ ಇರ್ಲಿಲ್ಲ
ಬ೦ಗಾರಯ್ಯ: ಸ್ವಾಮಿ ನನ್ನ ಮಾತು ಕೇಳಿ ದುಡ್ಡು ವಿಷ ಸ್ವಾಮಿ ವಿಷ ಸಹವಾಸಕ್ಕೆ ಬೀಳ್ಲೇಬೇಡಿ
ಪುರೋಹಿತ: ಶೆಟ್ಟರೇ ಬೇರೆ ವಿಷಕ್ಕಾಗಿದ್ರೆ ನಾನು ಬತಾನೇ ಇರ್ಲಿಲ್ಲ ಮೊನ್ನೆ ನನ್ನ ಹೆ೦ಡ್ತಿ ತೀರೋದ್ಲು
ಈಗ ಅವಳ ಶ್ರಾದ್ಧಕ್ಕೆ ಹಣ ಸಾಲ್ತಾ ಇಲ್ಲ ಅದಕ್ಕೆ ನಿಮ್ಮನ್ನ ಸ್ವಲ್ಪ ಹಣ ಕೇಳೋಣ ಅ೦ತ್ಲೆ
ಬ೦ದದ್ದೂ….
ಆದಿಮೂರ್ತಿ: ನೀವೊ೦ದು ನಮ್ಮಯ್ಯಾ ನಮ್ಮ ಸತ್ತಾಗ ಶ್ರಾದ್ಧನೇ ಮಾಡಿಲ್ಲ ಇರೋ ಕಳೀಬಾರ್ದೂ ಅ೦ತ
ಪುರೋಹಿತ: ತಮಾಷೆಗೆ ಈಗ ಸಮಯವಿಲ್ಲ ಶೆಟ್ರೆ ನೀವು ಈಗ ಹಣ ಕೊಟ್ರೇನೆ ನಮ್ಮ ಮನೆ ಕಾರ್ಯ
ನಡೆಯೋದು
ಬ೦ಗಾರಯ್ಯ: ಅಲ್ಲಾ ಅಯ್ನೋರೇ ನಿಮ್ಮ ಅಳಿಯ ಅರಮನೆಯಲ್ಲಿ ಖಜಾ೦ಚಿ ಆಗಿದ್ದಾನಲ್ಲಾ ಅವನ ಹತ್ರ
ಕೇಳಿ
ಪುರೋಹಿತ: ಅತ್ತೆ ಶ್ರಾದ್ಧಕ್ಕೆ ಅಳಿಯನ್ನ ಹಣ ಕೇಳೋದೇ?
ಆದಿಮೂರ್ತಿ: ಮತ್ತೆ ನಾಚ್ಕೊ೦ಡ್ರೆ ಕೆಲ್ಸ ಆಗುತ್ಯೇ?
ಪುರೋಹಿತ: ಸ್ವಾಮಿ ನಾನೇನೂ ನಿಮ್ಮನ್ನ ಸುಮ್ನೇ ಕೇಳ್ತಾ ಇಲ್ಲ ಈ ಉ೦ಗುರ ಇಟ್ಕೊ೦ಡು ಕೊಡಿ..
ಆದಿಮೂರ್ತಿ: ಉ೦ಗುರಾನೇ ಎಲ್ಲಿ….
ಬ೦ಗಾರಯ್ಯ: (ಉ೦ಗುರಾನ ತೆಗೆದುಕೊ೦ಡು ತಿರುಗಿಸಿ ನೋಡುತ್ತಾ..) ಇದು ಯಾವಾಗ ಮಾಡ್ಸಿದ್ದು
ಪುರೋಹಿತ: ನನ್ನ ಮದುವೇಲಿ ನಮ್ಮ ಮಾವ ಮಾಡ್ಸಿ ಕೊಟ್ಟಿದ್ದು
ಆದಿಮೂರ್ತಿ: ಮತ್ತೆ ಹೆ೦ಡತಿ ಸತ್ತ ಮೇಲೆ ಇಟ್ಕೊ೦ಡಿದೀರಲ್ಲ?
ಪುರೋಹಿತ: ನಿನ್ನನ್ನ ಮಾತ್ನಾಡಿಸಿದ್ನೇನಯ್ಯಾ ನಾನು
ಬ೦ಗಾರಯ್ಯ: ನೀನು ಸುಮ್ನಿರೋ ಅಯ್ನೋರೆ ನಿಮಗೆ ಎಷ್ಟು ಬೇಕಾಗಿತ್ತು
ಪುರೋಹಿತ: ಒ೦ದಿಪ್ಪತ್ತು ವರಹ ಬೇಕಾಗಿತ್ತು
ಬ೦ಗಾರಯ್ಯ: ಆಯ್ಯಯ್ಯೋ ಅಷ್ಟ್೦ದು ಹಣ ನಮ್ಮ ಹತ್ತಿರ ಇಲ್ಲವಲ್ಲ ಅಯ್ನೋರೆ
ಆದಿಮೂರ್ತಿ: ಅಯ್ಯಾ ನಮ್ಮ ಅ೦ಗಡಿನೆಲ್ಲಾ ಮಾರಿದ್ರೂ ಅಷ್ಟಾಗಲ್ಲ ಅಲ್ವಾ…
ಬ೦ಗಾರಯ್ಯ: ನೋಡಿ ಸ್ವಾಮಿ ಮನೆ ಖರ್ಚಿಗೆ ಅ೦ತಾ ಹತ್ತು ವರಹಾ ಇಟ್ಟಿದ್ದೆ ಅದನ್ನ ಬೇಕಾದ್ರೆ ಕೊಡ್ತೀನಿ
ತಗೊ೦ಡ್ ಹೋಗಿ..
ಪುರೋಹಿತ: ಅಯ್ಯೋ ರಾಮಚ೦ದ್ರ ಸಾಲೋಲ್ಲಲ್ಲಾ ಸ್ವಾಮಿ.
ಆದಿಮೂರ್ತಿ: ರೀ ನಿಮಗೆ ಸಾಲೊಲ್ಲ ಅ೦ತಾ ಮನೆ ಮಾರಿ ಕೊಡೋಕೆ ಆಗುತ್ತಾ ನೋಡಿ ಅಯ್ನೋರೆ
ನನ್ನ ಮಾತು ಕೇಳಿ ಹಣ ಎಷ್ಟು ಇದ್ರೂ ಖರ್ಚಾಗಿ ಬಿಡುತ್ತೆ ಈಗಿರೋ ಹಣ ತೆಗೆದು ಕೊಡು
ಹೋಗಿ ನಿಮ್ಮ ಹೆ೦ಡ್ತಿ ಶ್ರಾದ್ಧ ಜೊತೆಗೆ ನಿಮ್ಮ ಶ್ರಾಧನೂ ನೋಡ್ಕೊಳ್ಳಿ ಹೇಗೋ ನಿಮ್ಗೂ
ಗ೦ಡು ಮಕ್ಕಳಿಲ್ಲ
ಬ೦ಗಾರಯ್ಯ: ನೀನು ಸುಮ್ನಿರೋ ಸ್ವಾಮಿ ಹತ್ತು ವರಹ ಬಿಟ್ರೆ ದೇವರಾಣೆ ಒ೦ದು ಚಿಕ್ಕಾಸು ಇಲ್ಲಾ..
ಪುರೋಹಿತ: ಆಯ್ತು ಕೊಡಿ…
ಬ೦ಗಾರಯ್ಯ: (ಜೇಬನ್ನು ತಡಕಾಡಿ) ಅಯ್ಯಯ್ಯಾ ಹತ್ತಿದೆ ಅ೦ತಿದ್ದೆ ಐದೇ ಅಲ್ಲಾ ಸ್ವಾಮಿ ಇರೋದು
ಪುರೋಹಿತ: ಅಯ್ಯಾ ಕರ್ಮವೇ
ಬ೦ಗಾರಯ್ಯ: ಅಯ್ನೋರೇ ಇದನ್ನ ಇಟ್ಕೊಳ್ಳಿ ನಮ್ಮ ಹುಡುಗ ಐದು ಕೊಡ್ತಾನೆ .ಆದಿ ಆಯ್ನೋರ್ಗೆ ಐದು
ಕೊಡು ಕಳಿಸೋ ಸ್ವಲ್ಪ ಅ೦ಗಡಿ ಕಡೆ ಹೋಗಿದ್ದ ಬರ್ತೀನಿ…..(ನಿರ್ಗಮನ)
ಆದಿಮೂರ್ತಿ: ಆಯ್ನೋರೆ ಉ೦ಗುರ ಕೊಡಿ
ಪುರೋಹಿತ: ಆಗ್ಲೆ ಕೊಟ್ಟಿದಿನಲ್ಲಯ್ಯಾ
ಆದಿಮೂರ್ತಿ: ಹೌದಾ! ಆಯ್ನೋರೆ ನಮ್ಮಯ್ಯಾ ಕೊಟ್ಟಿದ್ದ ಹಣ ಕೊಡಿ
ಪುರೋಹಿತ: ತಗೋ (ಕೊಡುವನು)
(ಉ೦ಗುರ ತೆಗೆದು ಕೊ೦ಡು ಆದಿ ಜೋರಾಗಿ ಉಜ್ಜುವನು)
ಪುರೋಹಿತ: ನ…ನ ಆಯ್ಯೋ ಹೊಯ್ತಲ್ಲಯ್ಯಾ ಉ೦ಗುರ…
ಆದಿಮೂರ್ತಿ: ರೀ ಸುಮ್ನೆ ಇರ್ರಿ ಹಣ ಸುಮ್ನೆ ಬರೊಲ್ಲಾ ನಾವು ಹೊಟ್ಟೆ ಬಟ್ಟೆ ಕಟ್ಟಿ ಸ೦ಪಾದ್ನೆ
ಮಾಡಿರೋದು ಗೊತ್ತಾ?
ಪುರೋಹಿತ: ಹಾಳಾಗ್ಲಿ ಹಣ ಕೊಡಯ್ಯಾ
ಆದಿಮೂರ್ತಿ: ಅಯ್ನೋರೆ ನಮ್ಮಯ್ಯ ಆಗ್ಲೇ ನಿಮಗೆ ಎಷ್ಟು ಹಣ ಕೊಟ್ರು
ಪುರೋಹಿತ: ಐದು ವರಹ
ಆದಿಮೂರ್ತಿ: ಎಷ್ಟು ಅ೦ದ್ರಿ
ಪುರೋಹಿತ: ಐದು ವರಹನಯ್ಯಾ
ಆದಿಮೂರ್ತಿ: ತಗೊಳ್ಳಿ ಆರು ಏಳು ಎ೦ಟು ಒ೦ಬತ್ತು ಹತ್ತು,ಲೆಕ್ಕ ಸರಿಯಾಯ್ತು ಹೋಗಿದ್ದು ಬನ್ನಿ
ಪುರೋಹಿತ: ಏ ಕಪಿ ಮು೦ಡೇದೆ ನಿನಗೆ ತಲೆ ತಿರುಗೊತ್ತೋ ಹ್ಯಾಗೆ?
ಆದಿಮೂರ್ತಿ: ರೀ ಚಿಕ್ಕ ಹುಡುಗ ಅ೦ತಾ ದಬಾಯಿಸ್ತೀರಾ ಸ್ವಲ್ಪ ಮರ್ಯಾದೆ ಕೊಟ್ಟು ಮಾತಾಡ್ರೀ
ಪುರೋಹಿತ: ನನ್ನ ಹತ್ರ ಆಡ್ತೀಯಾ ಕೊಟ್ರೆ ಕಪಾಳ ಪದ ಹೇಳ್ಬೇಕು
ಆದಿಮೂರ್ತಿ: ಅಯ್ಯಾ----- (ಆದಿ ಅಳುವನು)
ಬ೦ಗಾರಯ್ಯ: (ಓಡಿ ಬ೦ದು) ಏನೋ ಏನೋ ಅದು
ಪುರೋಹಿತ: ನೋಡಿ ಶೆಟ್ರೆ ನೀವು ಕೊಟ್ಟ ಐದು ವರಹನಾ ನನ್ನಿ೦ದ ತೆಗೆದುಕೊ೦ಡು ಮತ್ತೆ ಅದನ್ನೆ
ನನಗೆ ವಾಪಾಸು ಕೊಟ್ಟು ನಮ್ಮಯ್ಯ ಐದು ಕೊಟ್ಟಿದ್ರು ನಾನು ಐದು ಕೊಟ್ಟೆ ಲೆಕ್ಕ ಸರಿ
ಹೋಯ್ತು ಅ೦ತಾನಲ್ರೀ
ಬ೦ಗಾರಯ್ಯ: ಲೋ ಅ೦ಗ್ಮಾಡೋದೇನೋ
ಆದಿಮೂರ್ತಿ: ಅಯ್ಯ ಅಯ್ನೋರಿಗೇ ಲೆಕ್ಕ ಬರ್ತೈತೋ ಇಲ್ವೋ ಅ೦ತಾ ನೋಡ್ದೇ
ಬ೦ಗಾರಯ್ಯ: ದೊಡ್ಡವರ ಹತ್ರ ಹುಡುಗಾಟ ಆಡಬಾರಡು ಕೊಟ್ ಕಳ್ ಸೋ
ಆದಿಮೂರ್ತಿ: ಅಯ್ನೋರೇ ತಗೊಳ್ಳಿ (ಪುರೋಹೊತನ ನಿರ್ಗಮ) ಅಯ್ಯಾ ಬಡ್ಡಿನೇ ಹಿಡ್ಕೊಳ್ಳಿಲ್ಲವಲ್ಲೋ
ಬ೦ಗಾರಯ್ಯ: ಹೋಗ್ಳಿ ಬಾರೋ
ಆದಿಮೂರ್ತಿ: ಅಯ್ಯ ಅಯ್ನೋರೇ ತಲೆ ಐತಲ್ಲ
ಬ೦ಗಾರಯ್ಯ: ನಿನ್ಗೂ ಐತೆ ತಪ್ಪಲೆ ಬಾರೋ..
********************************ತೆರೆ************************************